ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?

ಮನುಷ್ಯನು ಯಂತ್ರಗಳ ದಾಸನಾಗಿದ್ದಾನೆಯೆ? ಒಂದು ಕಾಲದಲ್ಲಿ ಕಾಗದದಲ್ಲಿ ಬರೆಯುವುದೇ ದಿನಚರಿಯಾಗಿದ್ದ ನನಗೀಗ ಗಣಕಯಂತ್ರವಿಲ್ಲದೆ ಬರೆಯುವುದೇ ಕಷ್ಟವಾಗಿ ಪರಿಣಮಿಸಿದೆ. ನಾನೀಗ ಸಂಚಾರಿ ದೂರವಾಣಿ (ಮೊಬೈಲ್), ಮಿಂಚಂಚೆ (ಈ-ಮೈಲ್), ದೂರದರ್ಶನ (ಟೆಲಿವಿಜನ್), ರೇಡಿಯೋ ಇಲ್ಲದೆ ಸಂಪರ್ಕವನ್ನು ಸಾಧಿಸುವುದೇ ಕಷ್ಟ ಎಂದೆನ್ನಿಸಿದೆ. ಸಹಸ್ರಾರು ವರ್ಷಗಳ ಹಿಂದೆ ಕೊಳೆತು ದ್ರವ್ಯವಾದ ಪೆಟ್ರೋಲನ್ನು ಇಂಧನವಾಗಿ ಬಳಸುವ ವಾಹನವಿಲ್ಲದೆ ನಾನು ನಗರದಲ್ಲಿ ಸಂಚರಿಸಲಾರೆ; ಊರೂರು Read More …

ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ

ಒಂದು ಕಥೆಯನ್ನು ಹುಡುಕುತ್ತ ಇನ್ನೊಂದು ಅಂತಃಕರಣ ಕಲಕುವ ಇನ್ನೊಂದು ಕಥೆ ಸಿಕ್ಕಿದ ಬ್ಲಾಗ್ ಇದು. ಇತ್ತೀಚೆಗೆ ಯಾವುದೋ ಪುಸ್ತಕ ವಿನ್ಯಾಸದಲ್ಲಿ ತೊಡಗಿದ್ದಾಗ ಮೆಟಾ ಎಂಬ ಹೆಸರಿನ ಫಾಂಟ್ ಹುಡುಕಲು ಹೋಗಿ ಮೆಟಾಫಾಂಟ್ ಎಂಬ ಸಿದ್ಧಾಂತ ಮತ್ತು ಸಾಫ್ಟ್‌ವೇರನ್ನೇ ಎಡವಿ ಬಿದ್ದೆ! ಮೆಟಾಫಾಂಟ್ ಎಂಬ ಪರಿಕಲ್ಪನೆಯನ್ನು ರೂಪಿಸಿ ಅದಕ್ಕೆ ಶಾಸ್ತ್ರೀಯವಾದ ವಿವರಣೆ, ಸಾಧನಗಳನ್ನು ನೀಡಿದ ಡೊನಾಲ್ಡ್ ಕನೂಥ್ Read More …

ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ

ಅವಳೀಗ ಐರೋಪ್ಯ ಸಮುದಾಯದ  ಯಾವುದೋ ಪ್ರದೇಶದಲ್ಲಿ ಬದುಕಿದ್ದಾಳೆ. ಈಗಲೂ ಆಕೆ ಕಾಫಿ ಬಟ್ಟಲಿಗೆ ಸಕ್ಕರೆ ಹಾಕುವಾಗ ಕೈ ನಡುಗಿ ಸಕ್ಕರೆಯ ಹರಳುಗಳು ಚೆಲ್ಲಿಹೋಗುತ್ತವೆ. ಸಂಗ್ ಹೀ ರಾಂಗ್ ಹೀಗೆ ಎಲ್ಲಿಯೋ ನಿಗೂಢವಾಗಿ ಬದುಕುವುದಕ್ಕೆ ಉತ್ತರ ಕೊರಿಯಾದ ಈಗಿನ ಅಧ್ಯಕ್ಷ (ಡಿಯರ್ ಲೀಡರ್) ಕಿಮ್ ಜೊಂಗ್ ಇಲ್‌ನೇ ಕಾರಣ. ಈಗ ಆಕೆಗೆ ೭೫ರ ವಯಸ್ಸು ದಾಟಿದೆ. ೨೦೦೩ರಲ್ಲಿ Read More …

ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ

ಕೊನೆಗೂ ಭಾರತ ಸರ್ಕಾರವೂ ನಾಚಿಕೆ ಬಿಟ್ಟಿದೆ. ಕಳೆದ ವಾರ ಸ್ವಿಜರ್‌ಲ್ಯಾಂಡಿನ ಜಿನೀವಾದಲ್ಲಿ ನಡೆದ  ಸ್ಟಾಕ್‌ಹೋಮ್ ಸಮಾವೇಶದಲ್ಲಿ ಎಂಡೋಸಲ್ಫಾನ್ ಎಂಬ ಡರ್ಟಿ ಡಜನ್ ವಿಷಕುಟುಂಬಕ್ಕೆ ಸೇರಿದ ಮಹಾವಿಷದ ಉತ್ಪಾದನೆಯ ನಿಷೇಧ ಪ್ರಸ್ತಾಪವನ್ನು ವಿರೋಧಿಸಿದೆ. ಇದು ನಾಚಿಕೆಗೇಡಿನ ಘಟನೆ ಎಂದು ಕೇರಳದ ಮುಖ್ಯಮಂತ್ರಿಯೊಬ್ಬರೇ ಕೇಂದ್ರ ಸರ್ಕಾರವನ್ನು ಝಾಡಿಸಿದ್ದಾರೆ. ಕೇರಳದ ಕೃಷಿ ಸಚಿವ ಬಿನೋಯ್ ವಿಶ್ವಂ ಕೂಡಾ ಭಾರತದ ನಿಲುವು Read More …

ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ

ಕೊಳಕು ಡಜನ್ ವಿಷಗಳು ನಿಮಗೆ ಗೊತ್ತಿರಲೇಬೇಕು. ಇವುಗಳನ್ನು ಪಿ ಓ ಪಿ (ಪರ್ಸಿಸ್ಟೆಂಟ್ ಆರ್ಗಾನಿಕ್ ಪೊಲ್ಯುಟಂಟ್ಸ್) ಎನ್ನುತ್ತಾರೆ. ಅಂದ್ರೆ ಕನ್ನಡದಲ್ಲಿ ಇವನ್ನು ಪ್ರಕೃತಿಯಲ್ಲಿ ಖಾಯಂ ಆಗಿ ಉಳಿದುಬಿಡುವ, ಮಾಲಿನ್ಯಕಾರಕ ಇಂಗಾಲ ಆಧಾರದ ಸಂಯುಕ್ತಗಳು. ಡರ್ಟಿ ಡಜನ್ ಎಂದೇ ಕುಖ್ಯಾತವಾದ ಈ ರಾಸಾಯನಿಕಗಳನ್ನು ಹೀಗೆ ಪಟ್ಟಿ ಮಾಡಿದ್ದಾರೆ. ಆಲ್ಟ್ರಿನ್, ಕ್ಲೋಡೇನ್, ಡಿಡಿಟಿ, ಡೀಲ್ಡ್ರಿನ್, ಎಂಡ್ರಿನ್, ಹೆಪ್ಟಾಕ್ಲೋರ್, ಹೆಕ್ಸಾಕ್ಲೋರೋಬೆಂಝೀನ್, Read More …

ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ

೧೯೮೭ರಲ್ಲಿ ನಾನು ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತಿನ ಸಂಶೋಧನಾ ವೇದಿಯಲ್ಲಿ ಕೆಲಸಕ್ಕೆ ಸೇರಿದ್ದೆ. ಆಗ ಅಲ್ಲಿಗೆ ಬಂದವರು ಧರಂಪಾಲ್. ಸದಾ ಯಾವುದೋ ಗಂಭೀರ ಚಿಂತನೆಯಲ್ಲಿದ್ದ ಮುಖ. ಕೊಂಚ ದಪ್ಪ ಶರೀರ. ಮೃದು ಶಾರೀರ. ಬಿಳಿ ಉಡುಗೆ. ಅಪ್ಪಟ ಸರಳ ದಿನಚರಿಯ ವ್ಯಕ್ತಿತ್ವ. ಅವರು ಇಂಗ್ಲೆಂಡಿನಲ್ಲಿ ಸಂಶೋಧನೆ ಮಾಡಿ ಬಂದವರು ಎಂದು ಕೇಳಿದ್ದೆ. ಅವರ ಅತಿಥಿ ಸತ್ಕಾರದ ಹೊಣೆಯನ್ನು Read More …