ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ

`ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ’ – ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಕರ್ನಾಟಕ ಸರ್ಕಾರವು ಈಗಲಾದರೂ ಕೈಗೊಳ್ಳಬೇಕಾದ ತುರ್ತು ಕೆಲಸಗಳಿವೆ. ಜಾಗತಿಕ ಮಟ್ಟದಲ್ಲೇ ತಂತ್ರಜ್ಞರ ನೆರವನ್ನು ಪಡೆಯುವ ಅವಕಾಶ ಇರುವ ಈ ಕಾಲಮಾನದಲ್ಲೂ ಕೆಲವೇ ವ್ಯಕ್ತಿಗಳ ಸಲಹೆ ಸೂಚನೆಗಳೇ ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಎಂದು ಸರ್ಕಾರವು ನಂಬಿರುವುದು ವಿಷಾದನೀಯ.