ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ

ಗೋವಿಂದರಾಯರ ಬದುಕಿನ ಬಗ್ಗೆ ಹೆಚ್ಚು ಬರೆಯಲು ಏನೂ ಇಲ್ಲ. ಏಕೆಂದರೆ ಅವರು ತಮ್ಮ ಜೀವಿತದ ಬಹುಪಾಲು ಕಾಲಾವಧಿಯನ್ನು  ಸರಳ ದಿನಚರಿಯಲ್ಲೇ ಕಳೆದರು. ದಿನಪತ್ರಿಕೆ ಬಿಟ್ಟರೆ ಬೇರೆ ಪುಸ್ತಕಗಳನ್ನು ಓದುವುದೇ ಕಡಿಮೆ. ಮನೆಗಾಗಿ ತರಕಾರಿ ತರುವುದು, ಮಾವಿನ ರಸಾಯನ ಮಾಡುವುದು, ಐಸ್‌ಕ್ರೀಮ್‌ ಮಾಡಿ ಫ್ರಿಜ್ಜಿನಲ್ಲಿ ಇಡುವುದು – ಇಂಥ ಮನೆಯ ಚಿಕ್ಕಪುಟ್ಟ ಕೆಲಸಗಳಲ್ಲೇ ಆತ್ಮತೃಪ್ತಿ ಹೊಂದಿದ ಜೀವ Read More …

ಉಡುಪಿಯ ಅಕ್ಕು -ಲೀಲಾ ಪ್ರಕರಣ: ಕೊನೆಗೂ ಸುಪ್ರೀಂಕೋರ್ಟಿಗೆ ಮಣಿದ ಕರ್ನಾಟಕ ಸರಕಾರ : ೪೨ ವರ್ಷಗಳ ನಂತರ ಸೇವೆ ಸಕ್ರಮಗೊಳಿಸಿ ಹೊರಟ ಸರಕಾರಿ ಆದೇಶ

ಉಡುಪಿ: ಸ್ಥಳೀಯ ಸರಕಾರಿ ಶಾಲೆಯೊಂದರಲ್ಲಿ ಸ್ವಚ್ಛತಾ ಸಿಬಂದಿಯಾಗಿ ದುಡಿಯುತ್ತಿದ್ದ ಶ್ರೀಮತಿ ಅಕ್ಕು ಹಾಗೂ ಶ್ರೀಮತಿ ಲೀಲಾ ಅವರಿಗೆ ೪೨ ವರ್ಷಗಳಿಂದ ಬರಬೇಕಿದ್ದ ಸಂಬಳದ ಹಣ ಹಾಗೂ ನಿವೃತ್ತಿ ಸೌಲಭ್ಯವನ್ನು ಸಂಪೂರ್ಣವಾಗಿ ಪಾವತಿಸುವಂತೇ ತಾನು ಆದೇಶ ಹೊರಡಿಸಿರುವುದಾಗಿ ಕರ್ನಾಟಕ ಸರಕಾರ ಸಲ್ಲಿಸಿದ್ದ ಅಫಿದಾವತ್ ಗಮನಿಸಿದ ಸುಪ್ರೀಂಕೋರ್ಟ್ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆಯ ಕಾರ್ಯಾಚರಣೆಯನ್ನು ಕೈಬಿಟ್ಟಿದೆ.