`ಉಳಿದವರು ಕಂಡಂತೆ’ : ವೃತ್ತಿಪರ, ದಕ್ಷ ಮತ್ತು ಸಮಾಜ-ಸನ್ನಿವೇಶದ ಹೊಣೆಯರಿತ ನಿರ್ಮಾಣ

ಉಳಿದವರು ಕಂಡಂತೆ ಎಂಬ ಸಿನೆಮಾ ಬಂದಿದೆ, ಚೆನ್ನಾಗಿದೆಯಂತೆ ಎಂದು ಮನೆಗೆ ಬಂದ ಪತ್ರಕರ್ತ, `ಸಾಂಗತ್ಯ’ದ ಸಂಪಾದಕ ಅರವಿಂದ ನಾವಡರು ಹೇಳಿದಾಗ ಹೌದೆ ಎಂದು ನನ್ನ ಮಗನನ್ನು ಕೇಳಿದೆ. `ನಾನು ಕಾಮಾಖ್ಯದಲ್ಲಿ ನೋಡಿದೆ. ಚೆನ್ನಾಗಿದೆ. ನೀನೂ ನೋಡು’ ಎನ್ನಬೇಕೆ? ಎಲಾ ಇವನ, ಕನ್ನಡ ಸಿನೆಮಾ ಎಂದರೆ ಮೂಗು ಮುರೀತಿದ್ದವನಿಗೆ ಇದು ಹೇಗೆ ಸಾಧ್ಯವಾಯ್ತು ಎಂದು ಅಚ್ಚರಿಪಟ್ಟೆ. ಆದರೆ Read More …

ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)

೧೯೮೭ರಲ್ಲಿ ವಿಶ್ವವ್ಯಾಪಿ ಜಾಲವೇ (world wide web, www) ಇರಲಿಲ್ಲ.  ಆಗ  ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಕೆಲಸ ಮಾಡುತ್ತಿದ್ದ ನನ್ನನ್ನು ವಿಜ್ಞಾನ ಬರವಣಿಗೆಗೆ ಹಚ್ಚಿದವರು `ಉತ್ಥಾನ’ ಮಾಸಪತ್ರಿಕೆಯ ಸಂಪಾದಕರಾದ ಶ್ರೀ ಎಸ್‌ ಆರ್‌ ರಾಮಸ್ವಾಮಿಯವರು. ಎರಡನೇ ಮಹಡಿಯಿಂದ ಮೆತ್ತಗೆ ಐದನೇ ಮಹಡಿಗೆ ಬಂದು ನನ್ನ ಮೇಜಿನ ಮೇಲೆ ಒಂದೆರಡು ಪತ್ರಿಕೆಗಳನ್ನು ಚೆಲ್ಲಿ `ಒಂದು ಲೇಖನ ಕೊಡಿ’ ಎಂದು Read More …

ಸ್ವರ್ಣಭರಿತ ದೇಗುಲದ ಶಿಲಾಮೂಲ: ರೋಚಕ ಸಂಶೋಧನೆಯ ಕೃತಿ ‘ಅಳಿವಿಲ್ಲದ ಸ್ಥಾವರ’

ತಿರುವನಂತಪುರದ ಶ್ರೀ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಯಾರಿಗೆ ಗೊತ್ತಿಲ್ಲ? ಇತ್ತೀಚೆಗೆ ಈ ದೇಗುಲದ ಕೋಣೆಗಳಲ್ಲಿ ಪತ್ತೆಯಾದ ಅಪಾರ ಸ್ವಣ-ವಜ್ರಾಭರಣಗಳ ಕಥೆಯನ್ನು ನೀವೆಲ್ಲ ಕೇಳಿಯೇ ಇರುತ್ತೀರಿ. ಈ ಸಂಪತ್ತಿನ ಪ್ರಾಚೀನತೆಯ ಮೌಲ್ಯವನ್ನೂ ಲೆಕ್ಕ ಹಾಕಿದರೆ, ಈ ದೇವಸ್ಥಾನವು ಪ್ರಪಂಚದ ಅತಿ ಶ್ರೀಮಂತ ದೇವಸ್ಥಾನವಾಗುತ್ತದೆ ಎಂದೇ ತಜ್ಞರು ಹೇಳುತ್ತಾರೆ. ಆದರೆ…

‘ವಿಶ್ವ ಎನ್ನುವ ವಿಸ್ಮಯ’ ಪುಸ್ತಕ ವಿಮರ್ಶೆ : ಅಚ್ಚಗನ್ನಡದಲ್ಲಿ ಬ್ರಹ್ಮಾಂಡದ ಚಿಂತನೆಗೆ ಹಚ್ಚುವ ಕೃತಿ

ನಗರಗಳ ಪ್ರಖರ ಬೆಳಕಿನಲ್ಲಿ ಕಾಣಿಸದ ಆಗಸವನ್ನು ಹಳ್ಳಿಮೂಲೆಯ ಬಯಲಿನಲ್ಲಿ ಕೂತು ನೋಡಿದರೆ ಯಾರಿಗಾದರೂ ಪ್ರಶ್ನೆ ಹುಟ್ಟಲೇಬೇಕು: ನಾನು ಯಾರು? ಈ ನಕ್ಷತ್ರಗಳು ಏಕಿವೆ? ಅವು ಹುಟ್ಟಿದ್ದೆಲ್ಲಿ? ಈ ಬ್ರಹ್ಮಾಂಡದ ಅಸ್ತಿತ್ವದ ಮೂಲವೇನು? ಇದು ಹೀಗೆ ಅನಂತದಂತೆ ಆವರಿಸಿಕೊಂಡಿದ್ದಾದರೂ ಯಾವಾಗ? ಕವಿಯಿಂದ ಹಿಡಿದು ಇತಿಹಾಸಕಾರನವರೆಗೆ ಈ ಪ್ರಶ್ನೆಗಳು ಕಾಡುತ್ತವೆ; ಮತ್ತೆ ದಿನನಿತ್ಯದ ಜಂಜಡದಲ್ಲಿ ಎಲ್ಲವನ್ನೂ ಮರೆಯಲಾಗುತ್ತದೆ.