ಇಂಟೆಗ್ರೇಟೆಡ್‌ ಪವರ್‌ ಪಾಲಿಸಿ: ಪುಸ್ತಕ ಬಿಡುಗಡೆ ಛಾಯಾಚಿತ್ರಗಳು

ದಿನಾಂಕ ೧೦ ಅಕ್ಟೋಬರ್‌ ೨೦೧೨ರಂದು ಸಮಗ್ರ ವಿಕಾಸ ಮತ್ತು ಮಿತ್ರಮಾಧ್ಯಮದ  ಜಂಟಿ ಪ್ರಾಯೋಜಕತ್ವದಲ್ಲಿ ನಡೆದ `ಇಂಟೆಗ್ರೇಟೆಡ್‌ ಪವರ್‌ ಪಾಲಿಸಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದ  ಚಿತ್ರಗಳು ಇಲ್ಲಿವೆ.  ಸಮಾರಂಭಕ್ಕೆ ಬಂದ ಎಲ್ಲರಿಗೂ ಮಿತ್ರಮಾಧ್ಯಮದ ವಂದನೆಗಳು. ಮುಖ್ಯ ಅತಿಥಿಗಳಲ್ಲದೆ ಸಭಿಕರಾಗಿ ಹಲವು ಹಿರಿಯರು, ವಿಷಯ ತಜ್ಞರು ಭಾಗವಹಿಸಿದ್ದು ವಿಶೇಷವಾಗಿತ್ತು. ಅದರಲ್ಲೂ ಬೆಂಗಳೂರಿನ ಹೆಮ್ಮೆಯ ಅಜ್ಜಿ, ಘನತ್ಯಾಜ್ಯ ವಿಲೇವಾರಿಯ ಹೋರಾಟಗಾರ್ತಿ Read More …

ಅಕ್ಕು ಮತ್ತು ಲೀಲಾ : ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಮನ್ನಣೆ ನೀಡಲು ಸಚಿವ ಕಾಗೇರಿಯವರಿಗೆ ಮಿತ್ರಮಾಧ್ಯಮ ಮನವಿ

ಅಕ್ಕು ಮತ್ತು ಲೀಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಗಮನ ಹರಿಸಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಮನ್ನಣೆ ಒದಗಿಸಬೇಕು ಎಂದು ಮಿತ್ರಮಾಧ್ಯಮವು ಇಂದು (೫ ಅಕ್ಟೋಬರ್‍ ೨೦೧೨) ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ವಿನಂತಿಸಿದೆ. ಅವರನ್ನು ಮಿತ್ರಮಾಧ್ಯಮದ ಟ್ರಸ್ಟೀಗಳಾದ ಶ್ರೀ ಬೇಳೂರು ಸುದರ್ಶನ ಮತ್ತು ಶ್ರೀ ರಾಮನಾಥ ಜಿಪಿ Read More …

‘ಇಂಟೆಗ್ರೇಟೆಡ್‌ ಪವರ್‌ ಪಾಲಿಸಿ’ ಶಂಕರಶರ್ಮ ಪುಸ್ತಕ ಬಿಡುಗಡೆಗೆ ಬನ್ನಿ! (ಅಕ್ಟೋಬರ್‌ ೧೦)

ನಮ್ಮ ನಡುವಿನ  ಪ್ರಮುಖ ಇಂಧನ ವಿಷಯತಜ್ಞ ಶ್ರೀ ಶಂಕರ ಶರ್ಮರವರು ಬರೆದಿರುವ `ಇಂಟೆಗ್ರೇಟೆಡ್‌ ಪವರ್‌ ಪಾಲಿಸಿ’ ಪುಸ್ತಕವನ್ನು ದಿನಾಂ ೧೦ ಅಕ್ಟೋಬರ್‌ ೨೦೧೨ರ ಬುಧವಾರ ಮಲ್ಲೇಶ್ವರಂ ೧೮ನೇ ಅಡ್ಡರಸ್ತೆಯಲ್ಲಿರುವ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜಿನಲ್ಲಿ ಬಿಡುಗಡೆ ಮಾಡಲಾಗುವುದು. ಈ ಕಾರ್ಯಕ್ರಮಕ್ಕೆ ಮಿತ್ರಮಾಧ್ಯಮದ ಎಲ್ಲ ಸಹೃದಯ ಬೆಂಬಲಿಗರಿಗೆ ಹೃತ್ಪೂರ್ವಕ ಸ್ವಾಗತ. ಕಾರ್ಯಕ್ರಮವು ಕಾಲೇಜಿನ ಎರಡನೇ ಮಹಡಿಯಲ್ಲಿರುವ Read More …