ಒಳಗಣ್ಣು: ‘ವಿಕಲಚೇತನ’ ಪದದ ಬಳಕೆ ಎಷ್ಟು ಸರಿ…..

ಕೆಲ ದಿನಗಳ ಹಿಂದೆ ನನ್ನ ಪರೀಕ್ಷೆಗಳನ್ನು ಬರೆಯಲು ಮೈಸೂರಿಗೆ ಹೋಗಿದ್ದೆ. ಅಲ್ಲಿ ದೃಷ್ಟಿ ಸವಾಲುಳ್ಳ ನನ್ನ ಒಬ್ಬ ಸ್ನೇಹಿತರು ಕನ್ನಡ ಸ್ನಾತಕೋತ್ತರ ಪದವಿಯ ಕೊನೆಯ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ. ಅವರೂ ಸಹಾ ಈಸ್ಪೀಕ್ ಕನ್ನಡ ತಂತ್ರಾಂಶವನ್ನು ದಿನ ನಿತ್ಯದ ಕೆಲಸಗಳಿಗೆ ಅಂದರೆ ಅವರ ಶೈಕ್ಷಣಿಕ ಹಾಗು ಜ್ಞಾನಾಭಿವೃದ್ಧಿಯಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರು ನನ್ನನ್ನು ಮೈಸೂರು ವಿಶ್ವವಿದ್ಯಾಲಯದ Read More …

ಪಿ ಸಾಯಿನಾಥ್ ನೀಡುತ್ತಿರುವ ಕೌಂಟರ್ ಮೀಡಿಯಾ ಪ್ರಶಸ್ತಿಗೆ ಆಹ್ವಾನ

ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದ ಪತ್ರಕರ್ತರನ್ನು ಗುರುತಿಸಲು ಇದೇ ಮೊದಲ ಬಾರಿಗೆ ‘ಕೌಂಟರ್ ಮೀಡಿಯಾ’ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಅಭಿವೃದ್ಧಿ ಪತ್ರಿಕೋದ್ಯಮದ ಮುಖ್ಯಸ್ಥರಾದ ಪಿ ಸಾಯಿನಾಥ್ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. ಗ್ರಾಮೀಣ ಅಭಿವೃದ್ಧಿ, ಬಡತನ,ಹಸಿವಿನ ಬಗ್ಗೆ ಬರೆದು ಸಾಮಾಜಿಕ ಉನ್ನತಿಗೆ ಶ್ರಮಿಸಿದ ಇಬ್ಬರು ಪತ್ರಕರ್ತರಿಗೆ ಈ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.

ಹತ್ತನೆಯ ವರ್ಷಕ್ಕೆ ಕಾಲಿಟ್ಟ ಕನ್ನಡ ವಿಕಿಪೀಡಿಯಾ: ಶುಭಾಶಯ ಹೇಳಿ!

ಕನ್ನಡ ವಿಕಿಪೀಡಿಯಾವು ಒಂದು ಶ್ಲಾಘನೀಯ ಯತ್ನ. ವಿಶ್ವದ ಎಲ್ಲ ಜ್ಞಾನವನ್ನೂ ಕನ್ನಡದಲ್ಲಿ ನೀಡುವ ಈ ಯತ್ನಕ್ಕೀಗ ಒಂಬತ್ತು ದಾಟಿದೆ. ಈಗಲೂ ಹಲವು ಸ್ವಯಂಸೇವಕರು ಈ ಯೋಜನೆಯಲ್ಲಿ ಸಕ್ರಿಯರಾಗಿದ್ದಾರೆ. ಮೊದಲು ಮಾಹಿತಿ ತುಂಬಿದವರಿಗೆ, ಈಗ ಶ್ರಮ ಹಾಕುತ್ತಿರುವವರಿಗೆ, ಎಲ್ಲರಿಗೂ ಮಿತ್ರಮಾಧ್ಯಮದಿಂದ ಶುಭಾಶಯಗಳು.