ನನ್ನ ಹಿಡನ್‌ ಅಜೆಂಡಾ ಮತ್ತು ಇತರ ಕಥೆಗಳು

ಗಮನಿಸಿ: ಈ ಬ್ಲಾಗನ್ನು ಮರುಪ್ರಕಟ ಮಾಡುವುದಾಗಲೀ, ಹೈಪರ್‌ಲಿಂಕ್‌ ಮಾಡುವುದಾಗಲೀ ನಿಷಿದ್ಧ. ನನ್ನ ಮಾತುಗಳು ಅಸಹನೀಯವಾಗುವಂತೆ, ನನ್ನ ಮೌನವೂ ಹಲವರಿಗೆ ಪ್ರಶ್ನೆಯಾಗಿದೆ. ಸೋತವರು ಮೌನವಾಗಿರುತ್ತಾರೆ ಎಂಬುದು ಪ್ರತೀತಿ. `ಕೆಲಸ ಬಿಟ್ಟಿರ? ನಮಗೆ ಗೊತ್ತಿತ್ತು ಬಿಡಿ’ ಎನ್ನುವವರು ಕೆಲವರು; `ನೀವು ತುಂಬಾ ದಿನ ಎಲ್ಲೂ ನಿಲ್ಲೊಲ್ಲ ಅಂತ ಮತ್ತೆ ಪ್ರೂವ್‌ ಆಯ್ತು ನೋಡಿ’ ಎಂದು ಹಲವರು – ಈ Read More …

ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!

ನೀವು ಕನ್ನಡದಲ್ಲಿ ಮಾತನಾಡುತ್ತೀರಿ. ಕಂಪ್ಯೂಟರ್‌, ನಿಮ್ಮದೇ ಧ್ವನಿಯಲ್ಲಿ ನೀವು ಮಾತಾಡಿದ್ದನ್ನು ಗ್ರೀಕ್‌ ಭಾಷೆಯಲ್ಲಿ ಅಥವಾ ಇನ್ನಾವುದೇ ಭಾಷೆಯಲ್ಲಿ,  ವಾಕ್ಯದಲ್ಲಿ ಇರಬೇಕಾದ ಎಲ್ಲ ಏರಿಳಿತಗಳೊಂದಿಗೆ ಅನುವಾದಿಸಿ ಉಲಿಯುತ್ತದೆ! ಇಂಥದ್ದೊಂದು ಮಹತ್ತರ ಸಂಶೋಧನೆಯನ್ನು ಮೈಕ್ರೋಸಾಫ್ಟ್‌ ಸಂಸ್ಥೆಯು ಸಾಕಾರಗೊಳಿಸುತ್ತಿದೆ. ಮೈಕ್ರೋಸಾಫ್ಟನ್ನು ಟೀಕಿಸುವವರೂ `ಅಬ್ಬ, ಎಂಥ ಕ್ರಾಂತಿಕಾರಿ ಸಂಶೋಧನೆ’ ಎಂದು ಅಚ್ಚರಿಪಡುವಂಥ ಈ ಸಂಶೋಧನೆಯನ್ನು ಮಾರ್ಚ್‌ ೬ರಂದು ಮೈಕ್ರೋಸಾಫ್ಟ್‌ ತನ್ನ ಜಾಲತಾಣದಲ್ಲಿ Read More …

ರಂಗನಾಥಜ್ಜ ಮೈಸೂರಿಗೆ ಹೊರಟರು

ವಿದ್ವಾನ್‌ ಎನ್‌ ರಂಗನಾಥ ಶರ್ಮಾ ನನಗೆ ರಂಗನಾಥಜ್ಜ ಆಗಬೇಕು. ಹತ್ತು ವರ್ಷಗಳ ಹಿಂದೆ ಅವರನ್ನು `ನೂತನ’ ಕಚೇರಿಯಲ್ಲಿ ಭೇಟಿಯಾಗಿದ್ದೆ. ಇವತ್ತು ಅವರ ಮನೆಗೆ ಹೋಗಿ ಅವರ ಜೊತೆ ಹತ್ತು ನಿಮಿಷ ಮಾತನಾಡಿ ಬಂದೆ.  ಅವರನ್ನು ನಾನು ಭೇಟಿಯಾಗಿದ್ದೇ ಇದು ಎರಡನೇ ಸಲ! ನಾನು ಅವರ ತಂಗಿಯ ಮೊಮ್ಮಗ. ಅವರ ತಂಗಿ ಸೀತಮ್ಮ ಎಂದರೆ ನನ್ನ ತಂದೆಯ ತಾಯಿ.