ಸ್ಟೀವ್‌ ಜಾಬ್ಸ್‌ : ಪ್ರೊಪ್ರೈಟರಿ ತಂತ್ರಾಂಶ ಕ್ರಾಂತಿಕಾರನ ಅತ್ಯುತ್ತಮ ಭಾಷಣ ಕೇಳಿ!

ಇವತ್ತು ಬೆಳಗ್ಗೆ ಪತ್ರಿಕೆ ಬರಲ್ವಲ್ಲ ಎಂದು ಮಂಚದ ಬಳಿ ಇಟ್ಟುಕೊಂಡಿದ್ದ ಐಪ್ಯಾಡ್‌ನ್ನು ತೆರೆದು ಗೂಗಲ್‌ ನ್ಯೂಸ್‌ ಪುಟಕ್ಕೆ ಹೋದರೆ, ಮೊದಲ ಸಾಲೇ ಸ್ಟೀವ್‌ ಜಾಬ್ಸ್‌ ಇನ್ನಿಲ್ಲ ಎಂಬ ಸುದ್ದಿ. ಅಘಾತವೇ ಆಯಿತು. ೫೬ರ ಹರೆಯದಲ್ಲಿ ಏನೆಲ್ಲ ಮಾಡಿ ಇಡೀ ಜಗತ್ತಿನಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿದ ಈ ಮಹಾಶಯ ಇನ್ನಷ್ಟು ದಿನ ಇದ್ದಿದ್ದರೆ ಇನ್ನೂ ಏನೆಲ್ಲಾ ಮಾಡುತ್ತಿದ್ದರೇನೋ? 

ಸಂಬಂಧ : ನನ್ನ ಬದುಕಿನ ಹೈಪರ್‌ಲಿಂಕ್‌ಗಳ ಮೊದಲ ಕಥೆ ಓದಿ!

[ನಾನು ಬರೆದ ಮೊದಲನೇ ಕಥೆ ಇದು!  ಇಂದಷ್ಟೇ  – ೩೦.೯.೨೦೧೧- ನನ್ನ ಆತ್ಮೀಯ ಗೆಳೆಯನೊಬ್ಬ ಈ ಕಥೆಯನ್ನು ಪ್ರಕಟಿಸಿದ ಮಯೂರದ ಪ್ರತಿಯನ್ನು – ಆಗಸ್ಟ್‌ ೧೯೯೧-  ನಾಜೂಕಾಗಿ , ಹರಿದುಹೋದ ಹಿಂಪುಟವನ್ನೂ ಜೋಡಿಸಿ – ಕೊರಿಯರ್‌ ಮೂಲಕ ವಾಪಸು ಮಾಡಿದ. ಈಗ ನೋಡಿದರೆ ಈ ಕಥೆ ಒಂದು ರೀತಿಯಲ್ಲಿ ಕೊಲಾಜ್‌ ಕಥೆ. ನನ್ನ ಹಲವು ಕವನಗಳ, Read More …