ಬಯೋಟೆಕ್ನಾಲಜಿ ರೆಗ್ಯುಲೇಟರಿ ಅಥಾರಿಟಿ ಆಫ್‌ ಇಂಡಿಯಾ ವಿರೋಧಿಸಿ: ಮುಖ್ಯಮಂತ್ರಿಯವರಿಗೆ ಮಿತ್ರಮಾಧ್ಯಮ ಸಹಿತ ಹಲವು ಸಂಘಟನೆಗಳ ಮನವಿ

ಕೇಂದ್ರ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಬಯೋ ಟೆಕ್ನಾಲಜಿ ರೆಗ್ಯಲೇಟರಿ ಅಥಾರಿಟಿ ಆಫ್ ಇಂಡಿಯಾ ಮಸೂದೆಯನ್ನು ವಿರೋಧಿಸಿ ಕರ್ನಾಟಕವು ಪ್ರಧಾನಮಂತ್ರಿಯವರನ್ನು ಆಗ್ರಹಿಸಿ ಮಿತ್ರಮಾಧ್ಯಮವೂ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಅಕ್ಟೋಬರ್‌ ೨೩ರಂದು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಡಿ ವಿ ಸದಾನಂದ ಗೌಡರನ್ನು ಭೇಟಿ ಮಾಡಿ ಆಗ್ರಹಿಸಿವೆ. ಮಿತ್ರಮಾಧ್ಯಮದಿಂದ ಬೇಳೂರು ಸುದರ್ಶನ, ಗ್ರೀನ್‌ಪೀಸ್‌ ನಿಂದ ರಾಜೇಶ್‌,  ಸ್ವದೇಶಿ ಜಾಗರಣ Read More …

ಮಿತ್ರಮಾಧ್ಯಮ ಮ್ಯಾಗಜಿನ್‌ ಸಂಚಿಕೆ ೧ ಓದಿ

ಮಿತ್ರಮಾಧ್ಯಮದಲ್ಲಿ ಬಂದ ನನ್ನ ಲೇಖನಗಳನ್ನು ಆಗಾಗ ಮ್ಯಾಗಜಿನ್‌ ರೂಪದಲ್ಲಿ ಪ್ರಕಟಿಸುವ ಉಮೇದಿನಿಂದ ಈ ಮ್ಯಾಗಜಿನ್‌ ಪ್ರಕಟವಾಗಿದೆ. ಮುಂದಿನ ದಿನಗಳಲ್ಲಿ ಇದನ್ನೊಂದು ಪುಟ್ಟ, ವೈವಿಧ್ಯಮಯ ಮ್ಯಾಗಜಿನ್‌ ಮಾಡುವುದಕ್ಕೆ ಪ್ರಯತ್ನಿಸಲಾಗುವುದು. ಓದಿ, ನಿಮ್ಮ ಅಭಿಪ್ರಾಯ ತಿಳಿಸಿ.

ಸಂಚಯ ಸಾಹಿತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ

ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸಂಚಯ ಸಾಹಿತ್ಯ ಪತ್ರಿಕೆಯು ಈ ವರ್ಷವೂ ಕನ್ನಡದ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಿದೆ. ವಿವರಗಳಿಗೆ ಕೆಳಗಿನ ಚಿತ್ರವನ್ನು ಓದಿ!

ಗೂಗಲ್+ : ಅಂತರಜಾಲದ +ಟಿವ್ ಚೇಂಜ್!

ಬೆಂಗಳೂರಿನ ವಿದ್ಯಾನಿಯೊಬ್ಬಳು ತನ್ನ ಗೆಳೆಯನ ಫೇಸ್‌ಬುಕ್‌  ಕಂಡ ವಿದಾಯದ ಹೇಳಿಕೆಯನ್ನು ನೋಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಎಲ್ಲ ಸಮಾಜಪ್ರಿಯ ಮನಸ್ಸುಗಳನ್ನು ಕದಡಿದೆ. ಜಗತ್ತಿನಲ್ಲೆಡೆ ಪ್ರಸಿದ್ಧವಾದ ಸೋಶಿಯಲ್ ನೆಟ್ವರ್ಕ್ ನಾಡಿನ ಒಂದು ಜೀವಕ್ಕೇ ಎರವಾಯಿತಲ್ಲ! ಈ ಘಟನೆ ನಡೆದ ದಿನವೇ ಇರಬೇಕು… ಹುಡುಕಾಟದ ಜಾಲತಾಣವಾಗಿ ಇಡೀ ಜಗತ್ತನ್ನೆಲ್ಲ ಕುಣಿಸುತ್ತಿರುವ ಗೂಗಲ್ ಜಾಲತಾಣದ ಪುಟದಲ್ಲಿ ನಿಮ್ಮನ್ನು ಗುರುತಿಸುವ ಒಂದು Read More …

‘ಇಜ್ಞಾನ’ ಸಂಚಿಕೆ ಓದಿ

ಗೆಳೆಯ ಟಿ ಜಿ ಶ್ರೀನಿಧಿಯ ಉತ್ಸಾಹಕ್ಕೆ ಸಮ ನಿಲ್ಲುವರಾರು? ಅವರು ಈಗ ತಂದಿರೋ ಇಜ್ಞಾನ ಸಂಚಿಕೆ ಓದಿ! ಅಜ್ಞಾನದ ನಿವಾರಣೆಗಾಗಿ ಶ್ರೀನಿಧಿ ಮಾಡ್ತಾ ಇರೋ ಪ್ರಯತ್ನವನ್ನು ಬೆಂಬಲಿಸಿ.

ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ

ನನ್ನ ಮಿತ್ರ ವೆಂಕಟೇಶ ಕಣ್ಣನ್‌ ಕಳೆದ ವರ್ಷದಿಂದ ನೈಟ್‌ ಇಂಟರ್‌ನ್ಯಾಶನಲ್‌ ಜರ್ನಲಿಸಂ ಫೆಲೋ ಆಗಿದ್ದಾರೆ. ಅವರೊಂದಿಗೆ ನಾನೂ ಮಾಹಿತಿ ಹಕ್ಕು ಮತ್ತು ಮಾಧ್ಯಮ ಕುರಿತಂತೆ ಹಲವು ಚಟುವಟಿಕೆಗಳಲ್ಲಿ ಭಾಗವಹಿಸಿದ್ದೇನೆ. ಈಗ ಅವರು ಮಾಧ್ಯಮ ಮಿತ್ರರಿಗಾಗಿ ರೂಪಿಸಿದ ಮಾಹಿತಿ ಹಕ್ಕು ಕೈಪಿಡಿಯನ್ನು ಮಿತ್ರಮಾಧ್ಯಮದ ಓದುಗರಿಗಾಗಿ ನೀಡುತ್ತಿದ್ದೇನೆ. ಈ ಕೊಂಡಿಯಲ್ಲಿ ಕೈಪಿಡಿಯನ್ನು ಪಡೆದುಕೊಳ್ಳಿ.

ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?

“ಮೂರ್ಖರನ್ನು ಅವರಿಗಿದ್ದ ಸ್ವಾತಂತ್ರ್ಯದಿಂದ ಬೇರ್ಪಡಿಸಿದ ,  ಕಂಪ್ಯೂಟರನ್ನು ತಣ್ಣನೆಯ ಬಂದೀಖಾನೆಯಾಗಿ ಮಾಡಿದ,  ಮುಂಚೂಣಿ ನಾಯಕ ಸ್ಟೀವ್‌ ಜಾಬ್ಸ್‌ ತೀರಿಕೊಂಡಿದ್ದಾರೆ. ಭ್ರಷ್ಟ ಮೇಯರ್‌ ಡೇಲಿ ತೀರಿಕೊಂಡಾಗ, ಶಿಕಾಗೋದ ಮೇಯರ್‌ ಹೆರಾಲ್ಡ್‌ ವಾಶಿಂಗ್ಟನ್‌ `ಅವರು ತೀರಿಕೊಂಡಿದ್ದಾರೆ ಎಂದು ನನಗೆ ಸಂತಸವಾಗಿಲ್ಲ; ಆದರೆ ಆತ ಇಲ್ಲ ಎಂಬ ಸುದ್ದಿಯಿಂದ ಸಂತಸವಾಗಿದೆ’ ಎಂದಿದ್ದರು. ನಿಜ ಸಾವು ಯಾರಿಗೂ ಬರಬಾರದು. ಅದರಲ್ಲೂ ಸ್ಟೀವ್‌ Read More …