ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!

ನಾನು ೨೦೦೫ರ ಏಪ್ರಿಲ್ ೧೨ರಂದು ಚಂದನ ದೂರದರ್ಶನ ವಾಹಿನಿಯ ‘ಬೆಳಗು’ ಕಾರ್ಯಕ್ರಮದಲ್ಲಿ ಲೈವ್ ಸಂದರ್ಶನಕ್ಕೆ ಒಳಗಾಗಿದ್ದೆ!

ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು

ನಾನು ಓದಿದ ಶಾಲೆಯನ್ನು ನಾನು ಇತ್ತೀಚೆಗೆ ನೋಡಿದ್ದು ೨೦೦೯ರ ಮೇ ತಿಂಗಳಿನಲ್ಲಿ. ಪಶ್ಚಿಮಘಟ್ಟದ ಉದ್ದಕ್ಕೂ ಹರಡಿಕೊಂಡಿರೋ ನಾನು ಓದಿದ ಶಾಲೆಗಳೆಲ್ಲವನ್ನೂ ನೋಡಬೇಕು ಎಂದು ನಾನು ಎಂದೋ ಕಂಡ ಕನಸು ಆಗ ಬಹುತೇಕ ಕೈಗೂಡಿತು. ಕೆಲವು ಊರುಗಳಲ್ಲಿ ನನ್ನ ಶಾಲೆಯನ್ನು ಹುಡುಕುವುದೇ ದೊಡ್ಡ ಕೆಲಸವಾಯಿತು!

ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ

ಸದ್ಯಕ್ಕೆ ಇವರನ್ನು ದತ್ತಾಜಿ ಅಮ್ಮ ಎಂದೇ ಕರೆಯೋಣ. ಅವರನ್ನು ನಾನು ಎಷ್ಟೋ ವರ್ಷಗಳಿಂದ ನೋಡುತ್ತಿದ್ದೇನೆ. ಎಂದೂ ಅವರ ಮುಖದಲ್ಲಿ ಜೀವನೋತ್ಸಾಹ ಮಾಸಿದ್ದು ಕಂಡಿಲ್ಲ. ಕಿವಿ ಕೈ ಕೊಟ್ಟರೂ ಕಣ್ಣು ಸೂಕ್ಷ್ಮ. ಬದುಕನ್ನು ನೋಡುವ, ಅನುಭವಿಸುವ ಹೃದಯವೂ ಸೂಕ್ಷ್ಮ.

‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ

ಕ್ರೈಸ್ತ ಮತಪ್ರಚಾರ, ಸಾಮ್ರಾಜ್ಯಶಾಹಿ ಆಳ್ವಿಕೆ, ಗುಲಾಮಗಿರಿ, ಸಂಪತ್ತಿನ ಲೂಟಿ, ನರಮೇಧ – ಇವೆಲ್ಲವೂ ೧೫ನೇ ಶತಮಾನದಿಂದ ಇಂದಿನವರೆಗೂ ಏಶ್ಯಾ, ಆಫ್ರಿಕಾ, ಅಮೆರಿಕಾ, ಆಸ್ಟ್ರೇಲಿಯಾ ಖಂಡಗಳನ್ನು ವ್ಯಾಪಿಸಿವೆ. ಇಂದು ಮಾನವಹಕ್ಕುಗಳ ಬಗ್ಗೆ ವಿಪರೀತ ಮಾತಾಡುತ್ತಿರುವ, ಶಾಂತಿಮಂತ್ರವನ್ನು ಬೋಧಿಸುತ್ತಿರುವ ಐರೋಪ್ಯ ದೇಶಗಳೇ ಈ ಎಲ್ಲ ಅಪಚಾರಗಳಿಗೆ ಹೊಣೆಯಾಗಿವೆ ಎಂಬುದನ್ನು ಮರೆಯಲಾದೀತೆ? ಕಳೆದ ವಾರ ಓಮರ್ ಮುಖ್ತರ್ ಬಗ್ಗೆ ಬರೆದಾಗ Read More …

ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !

ಜೆಹಾದಿ (ಇಸ್ಲಾಮಿಕ್ ಧರ್ಮಯುದ್ಧ ಎಂದುಕೊಳ್ಳುವಾ)  ಅಂದಕೂಡಲೇ ಹಲವರ ಮನಸ್ಸಿನಲ್ಲಿ ಎಂಥದೋ ವಿಕ್ಷಿಪ್ತ ಭಾವ ಮೂಡುತ್ತೆ. ಸಹಜವೇ. ಇವತ್ತು ಜೆಹಾದಿ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದನೆ, ತಾಲಿಬಾನ್, ಅಲ್ ಖೈದಾಗಳ ಉಗ್ರಗಾಮಿ ಕೃತ್ಯಗಳು ನಮ್ಮನ್ನು ಧೃತಿಗೆಡಿಸಿವೆ.

ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ

ಬದುಕನ್ನು ಬಂದ ಹಾಗೆ ಸ್ವೀಕರಿಸುವುದು, ಸ್ವೀಕರಿಸಿದ್ದನ್ನು ಸಿಂಗರಿಸುವುದು, ನಾವೂ ಆನಂದಿಸುವುದು, ಇನ್ನೊಬ್ಬರಿಗೂ ಆನಂದ ಕೊಡಲು ಮನಸಾರೆ ಯತ್ನಿಸುವುದು, ಸುತ್ತಮುತ್ತ ಇರುವ ಸಹೃದಯ ಜೀವಗಳನ್ನು ಗೌರವಿಸುವುದು…. ಒಪ್ಪಿಕೊಂಡಿರುವ ಸತ್ಯ ಬದಲಾದಾಗ ಬದಲಾವಣೆಯನ್ನೂ ಪ್ರಾಂಜಲವಾಗಿ ಒಪ್ಪಿಕೊಳ್ಳುವುದು – ಇವೆಲ್ಲ ಮನುಕುಲವೆಂಬ ಬಳಗದ ಎಲ್ಲ ಸದಸ್ಯರಲ್ಲಿ ಇರಬೇಕಾದ ಗುಣಗಳು. ಈ ಗುಣಗಳು ಇರಬೇಕೆಂದು ಹೇಳುವುದು ಸುಲಭ, ಸ್ವತಃ ಆಚರಿಸುವುದು ಕಷ್ಟ!