ಕ್ರಿಸ್: ನಿನ್ನಿಂದ ನಾವು ಕಲಿಯೋದು ತುಂಬಾ ಇದೆ !

ಜೇಮ್ಸ್ ಗಲಿಯೆನ್ ಆ ಪ್ರಯಾಣಿಕನನ್ನು ಕಂಡಿದ್ದೇ ಫೇರ್‌ಬ್ಯಾಂಕ್ಸ್‌ನಿಂದ ಐದು ಮೈಲು ದೂರ ಸಾಗಿದ ಮೇಲೆ. ಅಲಾಸ್ಕಾದ ಆ ಮುಂಜಾನೆಯಲ್ಲಿ ನಖಶಿಖಾಂತ ನಡುಗುತ್ತ, ಹೆಬ್ಬೆಟ್ಟು ತೋರುತ್ತ ನಿಂತ ಯುವಕನ ಬೆನ್ನೇರಿದ ಚೀಲದಿಂದ ಬಂದೂಕೊಂದು ಇಣುಕುತ್ತಿತ್ತು. `ನಾನು ಅಲೆಕ್ಸ್’ ಎಂದಷ್ಟೆ ಪರಿಚಯಿಸಿಕೊಂಡ ಆತ ಡೆನಾಲಿ ರಾಷ್ಟ್ರೀಯ ಪಾರ್ಕಿನ ತುತ್ತತುದಿಗೆ ಹೋಗಿ ಕೆಲವು ತಿಂಗಳುಗಳ ಕಾಲ ಇರಬೇಕಿದೆ ಎಂದ. ಅವನ Read More …

‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’

ಈ ಕೆಳಗಿನ ಮಾತುಗಳನ್ನು  ಯಾರು ಹೇಳಿರಬಹುದು ಎಂದು ಊಹಿಸುತ್ತ ಓದಿಕೊಳ್ಳಿ. `ಮೊದಲೇನೋ ಈ ಕ್ರಾಂತಿಯು ಭಾರೀ ಯಶ ಸಾಧಿಸಿದಂತೆ ಕಂಡಿತು. ಜನಸಂಖ್ಯೆ ಬೆಳೆದಂತೆ ಮತ್ತು ಆಹಾರದ ಬೇಡಿಕೆ ಹೆಚ್ಚಿದಂತೆ ಆಹಾರದ ಬೆಲೆ ಇಳಿಯಲಿಲ್ಲ. ೯೦ರ ದಶಕದಲ್ಲಂತೂ ಈ ಹಸಿರು ಕ್ರಾಂತಿಗೆ ನಾವೆಂಥ ದುಬಾರಿ ಬೆಲೆ ತೆತ್ತಿದ್ದೇವೆ ಎಂಬುದು ಅರಿವಾಯಿತು.

ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್

ಪ್ರತಿ ರಾತ್ರಿ ಒಂಬತ್ತೂವರೆ ಆಗುತ್ತಿದ್ದಂತೆ ಪಂಜಾಬಿನ ಭಟಿಂಡಾ ರೈಲು ನಿಲ್ದಾಣದಿಂದ ಟ್ರೈನ್ ನಂ. ೩೩೯ ನಿಧಾನವಾಗಿ ರಾಜಸ್ಥಾನದ ಬಿಕಾನೇರಿನತ್ತ ಗಾಲಿ ಎಳೆಯುತ್ತ ಸಾಗುತ್ತದೆ. ಈ ರೈಲಿನ ಹೆಸರೇ ಕ್ಯಾನ್ಸರ್ ಟ್ರೈನ್. ಪ್ರತಿದಿನ ಇಲ್ಲಿಂದ ಕನಿಷ್ಟ ೬೦ ಕ್ಯಾನ್ಸರ್ ರೋಗಿಗಳು ಬಿಕಾನೇರಿನ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರಕ್ಕೆ ಹೋಗುತ್ತಾರೆ.

ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ

ಹಾಲಿವುಡ್ ಸಿನೆಮಾ ನೋಡುವ ವಿಪರೀತ ಚಟದಲ್ಲಿ ಯಾವ ಸಿನೆಮಾ ಬಂದರೂ ನೋಡುತ್ತಿದ್ದ ೮೦ರ ದಶಕದಲ್ಲಿ ನನ್ನನ್ನು ತೀವ್ರವಾಗಿ ಕಲಕಿದ ಸಿನೆಮಾ `ದಿ ಕಿಲ್ಲಿಂಗ್ ಫೀಲ್ಡ್ಸ್’. ಮೂರು ಆಸ್ಕರ್ ಪ್ರಶಸ್ತಿಗಳನ್ನು ದಕ್ಕಿಸಿಕೊಂಡ ಈ ಸಿನೆಮಾ ಯುದ್ಧ, ಕ್ರಾಂತಿ, ದೇಶಗಳ ನಡುವಣ ಸಂಘರ್ಷ, ಮಾನವತೆ, ಸ್ನೇಹ, ಹಿಂಸೆ – ಎಲ್ಲವನ್ನೂ ಎಲ್ಲ ಫ್ರೇಮುಗಳಲ್ಲಿ ತೋರಿಸುತ್ತ ಎದೆ ಕದಡುತ್ತದೆ. ಅದ್ಭುತ Read More …

ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !

ಯುಜಿ೯೯ ಎಂಬ ಕಾಂಡಕೊರಕ ಫಂಗಸ್ (ಸ್ಟೆಮ್ ರಸ್ಟ್)  ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಅನಾಹುತ ನೋಡಿ: ಮೊದಲು ಉಗಾಂಡದಲ್ಲಿನ ಗೋಧಿಯನ್ನು ಸಂಪೂರ್ಣ ತಿಂದುಹಾಕಿದ ಈ ಫಂಗಸ್ ಕೀನ್ಯಾ, ಸುಡಾನ್, ಯೆಮೆನ್, ದಾಟಿ, ಇರಾನ್‌ನ್ನೂ ತಲುಪಿದೆ. ಮುಂದೆ ಇದು ಅಫಘಾನಿಸ್ತಾನವನ್ನು ಹಾಯ್ದು, ಪಾಕಿಸ್ತಾನದ ಗೋಧಿ ಬೆಳೆಯನ್ನೆಲ್ಲ ಕಬಳಿಸಿ ಭಾರತಕ್ಕೆ ವಕ್ಕರಿಸಲಿದೆ.  ಆಮೇಲೆ ರಶ್ಯಾ, ಚೀನಾ, ಅಲ್ಲಿಂದ ಸಾಗರೋತ್ತರ Read More …

ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)

`ಟಿಬೆಟನ್ ಧರ್ಮಗುರು ದಲಾಯಿ ಲಾಮಾರವರು ಅರುಣಾಚಲಕ್ಕೆ ಭೇಟಿ ನೀಡಬಾರದು; ಯಾಕೆಂದರೆ ಅರುಣಾಚಲ ಪ್ರದೇಶದ ಮೇಲೆ ನಾವಿನ್ನೂ ಹಕ್ಕು ಸಾಧಿಸುತ್ತಿದ್ದೇವೆ’ ಎಂದು ಚೀನಾ ಬಾಯಿ ಬಿಟ್ಟಿದೆ. ಇಷ್ಟು ದಿನ ಭಾರತದ ಹೊರಗೆ ದಲಾಯಿ ಲಾಮಾ ಪ್ರವಾಸ ಮಾಡಿದರೆ ಉರಿದೇಳುತ್ತಿದ್ದ ಚೀನಾ ಈಗ ಭಾರತದೊಳಗೇ ದಲಾಯಿ ಲಾಮಾ ಅಡ್ಡಾಡಬಾರದು ಎಂದು ಫರ್ಮಾನು ಹೊರಡಿಸಿದೆ! ದಲಾಯಿ ಲಾಮಾ ಎಲ್ಲಿಗೆ ಭೇಟಿ Read More …

ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)

ಇತ್ತೀಚೆಗೆ ‘ಅಡಿಕೆ ಪತ್ರಿಕೆ’ ಯಲ್ಲಿ ಪತ್ರಕರ್ತ ನಾಗೇಶ ಹೆಗಡೆ ಬರೆದಿದ್ದಾರೆ: ‘ಚೀನೀಯರೆಲ್ಲ ಯಾಕೆ ಚೀನೀಯರ ಥರಾನೇ ಕಾಣುತ್ತಾರೆ?’ ಎಂಬ ಪ್ರಶ್ನೆಯನ್ನು ಕೆದಕಿದವರಿಗೆ ಅನೇಕ ಕರಾಳ ಸತ್ಯಗಳು ತೆರೆದುಕೊಳ್ಳುತ್ತವೆ. ಇಡೀ ಅಷ್ಟುದೊಡ್ಡ ಚೀನಾ ರಾಷ್ಟ್ರದಲ್ಲಿ ಚೀನೀ ಮುಖದವರನ್ನು, ಮಂಡಾರಿನ್ ಭಾಷಿಕರನ್ನು ಬಿಟ್ಟರೆ ಬೇರೆ ಯಾರೂ ಉಳಿಯದ ಹಾಗೆ ಸಾವಿರ ವರ್ಷಗಳ ಹಿಂದೆಯೇ ಬಹುದೊಡ್ಡ ಜನಾಂಗೀಯ ನರಮೇಧ ನಡೆದುಹೋಗಿತ್ತು. Read More …