ಗತಕಾಲದ ಸ್ಮರಣೆ, ವಿಸ್ಮರಣೆ : ಆಡ್ವಾನಿಜಿಗೊಂದು ಪತ್ರ

ಇವರಿಗೆ, ಶ್ರೀ ಎಲ್. ಕೆ. ಆಡ್ವಾನಿಜಿ, ಲೋಕಸಭೆಯ ಮಾನ್ಯ ಪ್ರತಿಪಕ್ಷ ನಾಯಕರು ಕ್ಯಾಂಪ್ : ೨೨ ಸಾವಿರ ರೂ. ದಿನಬಾಡಿಗೆಯ ಯಾವುದೋ ಒಂದು ಕೊಠಡಿ ಆರೆಂಜ್ ಕೌಂಟಿ ಕರಡಿಗೋಡು ಪೋಸ್ಟ್ ಸಿದ್ದಾಪುರ ಕೊಡಗು ಜಿಲ್ಲೆ ೫೭೧೨೫೩ ಪ್ರಿಯ ಆಡ್ವಾನಿಜಿ, ಇತಿಹಾಸ ಆಗುವುದು ಬೇರೆ, ಬರೆಯುವುದು ಬೇರೆ, ನೆನಪಿಸಿಕೊಳ್ಳುವುದು ಬೇರೆ. ಅಲ್ಲವೆ ಆಡ್ವಾನಿಜಿ……. ? ಕಳೆದ ವರ್ಷ Read More …

ವುಮೆನ್ ಟ್ರಾಫಿಕಿಂಗ್ ಕುರಿತ ಎರಡು ಸಿನೆಮಾಗಳು : ವೆಲ್ ‘ಟೇಕನ್’ : ಬೆಸ್ಟ್ ‘ಟ್ರೇಡ್’

ಡ್ರಗ್ ಟ್ರಾಫಿಕಿಂಗ್ ಮತ್ತು ವುಮೆನ್ ಟ್ರಾಫಿಕಿಂಗ್ ಕುರಿತ ಹಲವು ಸಿನೆಮಾಗಳು ಹಾಲಿವುಡ್‌ನಲ್ಲಿ ತಯಾರಾಗಿವೆ. ೨೦೦೧ರಲ್ಲಿ ಬಂದ ಟ್ರಾಫಿಕ್ ಸಿನೆಮಾ ಕಲಾತ್ಮಕತೆಯಲ್ಲೂ ಮಿಂಚಿದ ಅಪರೂಪದ ಚಿತ್ರ. ಇದರಲ್ಲಿ ಡ್ರಗ್ ಕಥೆ ಇದೆ. ಹಲವರು ಇದನ್ನು ಸ್ಟೀವನ್ ಸೋಡೆರ್‌ಬಗ್‌ನ ಮಾಸ್ಟರ್‌ಪೀಸ್ ಎಂದೂ ಕರೆಯುತ್ತಾರೆ.

ಎಂಪೈರ್‍ಸ್ ಆಫ್ ದಿ ಇಂಡಸ್: ಥ್ರಿಲ್ಲರ್ ಪ್ರವಾಸಕಥನ : ಪರಿಚಯ ಭಾಗ ೧

ಇಂಡಸ್, ಸಿಂಧು, ಇಂಡಿಯಾ, – ಯಾರನ್ನು ಕಾಡಿಲ್ಲ? ಇಂಗ್ಲೆಂಡ್ ಮೂಲದ ಪತ್ರಕರ್ತೆ ಅಲಿಸ್ ಅಲ್ಬೀನಿಯಾಗೂ ಸಿಂಧೂ ನದಿ, ಅದರ ಸಂಸ್ಕೃತಿ ಕಾಡಿ ಕಾಡಿ ಕಾಡಿ…. ಅವಳೊಮ್ಮೆ ನಿರ್ಧರಿಸಿಯೇ ಬಿಟ್ಟಳು: ಈ ಸಿಂಧೂ ನದಿಯ ಗುಂಟ ಯಾಕೆ ಪ್ರವಾಸ ಮಾಡಬಾರದು? ಹಾಗೆ ಪ್ರವಾಸ ಮಾಡಿ ಬರೆದ ಪುಸ್ತಕವೇ ಎಂಪೈರ್‍ಸ್ ಆಫ್ ದಿ ಇಂಡಸ್ : ದಿ ಸ್ಟೋರಿ Read More …

‘ದಿ ಕ್ಯೂಬ್’ ಸರಣಿ ಚಿತ್ರಗಳು: ದಿಕ್ಕೆಟ್ಟ ಬದುಕಿಗೆ ಆರೇ ಬಾಗಿಲು

೧೯೯೭ರ ದಿನಗಳಲ್ಲಿ ನೀವು ಇಂಗ್ಲಿಶ್ ಸಿನೆಮಾ ನೋಡಬೇಕಂದ್ರೆ ಯಾವುದೋ ಸಿಡಿ ಲೈಬ್ರರಿಗೆ ಮೆಂಬರ್ ಆಗಬೇಕಿತ್ತು. ಅಂಥ ಒಂದು ದಿನ ನಾನು ಮಲ್ಲೇಶ್ವರದ ಸಿಡಿ ಲೈಬ್ರರಿಯಿಂದ ತಂದ ಸಿನೆಮಾ ‘ದಿ ಕ್ಯೂಬ್.’ ನೋಡಿದಾಗ ಇದೇನು ವಿಚಿತ್ರ ಎನ್ನಿಸಿತು. ಈ ಸಿನೆಮಾ ಮಾಡಿದ್ದು ಕೆನಡಾದ ಮಂದಿ. ಹಾಲಿವುಡ್‌ನವರು ಇದರಲ್ಲಿಲ್ಲ. ಆದರೂ ಹಾಲಿವುಡ್‌ನ ಮಿಸ್ಟರಿ ಸಿನೆಮಾಗಳನ್ನು ಮೀರಿಸುವ ಸೈನ್ಸ್ ಫಿಕ್ಷನ್ Read More …

ಕ್ಷುದ್ರ ಮನಸ್ಸಿನ ರಕ್ಕಸ ಬೆಂಗಳೂರಿನ ಬಗ್ಗೆ ಮೊದಲ ಮತ್ತು ಕೊನೇ ಬ್ಲಾಗ್

ಈ ಬೆಂಗಳೂರು ನಗರದ ಬಗ್ಗೆ ಯಾವುದೇ ಅನುಕಂಪವನ್ನೂ ಇಟ್ಟುಕೊಳ್ಳಬಾರದು; ಅದರ ಬಗ್ಗೆ ಯಾವುದೇ ಲೇಖನವನ್ನು ಬರೆಯಬಾರದು ಎಂದು ನಾನು ಎರಡು ವರ್ಷಗಳ ಹಿಂದೆ ಮಾಡಿಕೊಂಡಿದ್ದ ಸ್ವಯಂನಿರ್ಧಾರವನ್ನು ಮುರಿದು ಬೆಂಗಳೂರಿನ ಬಗ್ಗೆ ಮೊದಲ ಮತ್ತು ಕೊನೆಯ ಲೇಖನವನ್ನು ಬರೆಯುತ್ತಿದ್ದೇನೆ. ಪದೇ ಪದೇ ಬೆಂಗಳೂರಿನ ತೊಂದರೆ ತಾಪತ್ರಯಗಳ ಬಗ್ಗೆ ದಿನಪತ್ರಿಕೆಗಳಲ್ಲಿ ಸುದ್ದಿಗಳನ್ನು, ಛಾಯಾಚಿತ್ರಗಳನ್ನು ನಿಮ್ಮಲ್ಲಿ ಬಹಳಷ್ಟು ಜನ ನೋಡಿರುತ್ತೀರಿ. Read More …

“ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ

ನಿಕೋಲಾಸ್ ಕೇಜ್ ನನ್ನ ನೆಚ್ಚಿನ, ಮೊದಲ ದರ್ಜೆಯ ಹಾಲಿವುಡ್ ನಟ. ಅವನಿಗೆ ತುಂಬಾ ಅಭಿಮಾನಿಗಳಿದ್ದಾರೆ. ನೋಡಲು ಹಾಲಿವುಡ್ ಫಾರ್ಮುಲಾದ ಸ್ಫುರದ್ರೂಪಿಯಾಗೇನೂ ಕಾಣುವುದಿಲ್ಲ. ಕೆಲವೊಮ್ಮೆ ಬೋಳು ಬೋಳು ತಲೆ ಕಾಣಿಸುವುದೂ ಇದೆ. ಏನೇ ಹೇಳಿ, ನಿಕೋಲಾಸ್ ಕೇಜ್ ನಿಜಕ್ಕೂ ಅದ್ಭುತ ಕಲಾವಿದ. ಅವನ ೮ಎಂಎಂ ಸಿನಿಮಾ ನೋಡಿದರೆ ನಿಮಗೆ ಕಣ್ಣೀರು ಬರದಿದ್ದರೆ ಕೇಳಿ ಅಥವಾ ಕಾನ್ ಏರ್ನಲ್ಲಿ Read More …

ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ

ವೆಂಕಟೇಶ್‌ಕುಮಾರ್ ಹಿಂದುಸ್ತಾನಿ ಗಾಯನವನ್ನು ಕೇಳುತ್ತ ಕೇಳುತ್ತ ನೀವೂ ಮೈ ಮರೆಯುತ್ತೀರಿ. ಮಾಧುರ್ಯ, ಭಾವ, ಲಯ, ಎಲ್ಲವನ್ನೂ ಹದವಾಗಿ ಮಿಳಿತಗೊಳಿಸಿ ಮಂದ್ರದಿಂದ ತಾರಕಕ್ಕೆ ಏರುಹಾದಿಯಲ್ಲಿ ಸಲೀಸಾಗಿ ಜಾರಿ ಹಾಗೇ ಗೊತ್ತಾಗದಂತೆ ಮೆಲುವಾಗಿ ಇಳಿದು ನಿಮ್ಮನ್ನು ಮುದಗೊಳಿಸುತ್ತ ಹೋಗುತ್ತಾರೆ. ಅವರ ಮಾಲ್‌ಕೌಂಸ್ ಕೇಳುತ್ತಲೇ ನನ್ನ ಪ್ರವಾಸದಲ್ಲಿ ಸಂಗ್ರಹಿಸಿದ ಪುಸ್ತಕಗಳ ಬಗ್ಗೆ ಕಿರುಟಿಪ್ಪಣಿಯನ್ನು ಬರೆಯುತ್ತಿದ್ದೇನೆ. ಸುಂದರ ವದನ ಕೇ ಎಂದು Read More …