ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್

ಪಾಲೋ ಕೊಯೆಲ್ಹೋ ಬರೆದ ಕಾದಂಬರಿಗಳೆಲ್ಲವೂ ತುಂಬಾ ಚೆನ್ನಾಗಿವೆ ಅಂತೇನಿಲ್ಲ. ನಾನು ಇತ್ತೀಚೆಗೆ ಅವನ ಬ್ರೈಡಾ, ಬೈ ದಿ ರಿವರ್ ಪೆಡ್ರಾ, ಐ ಸ್ಯಾಟ್ ಎಂಡ್ ವೆಪ್ಟ್ ಮತ್ತು `ದಿ ವಿನ್ನರ್ ಸ್ಟಾಂಡ್ಸ್ ಅಲೋನ್’ ಕಾದಂಬರಿಗಳನ್ನು ಓದಿದೆ. ಮೊದಲೆರಡೂ ಕಾದಂಬರಿಗಳೂ ಹಳೆಯವೇ. ವಿನ್ನರ್ ಮಾತ್ರ ಹೊಸತು.

ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು

ಕೆಲವೇ ದಿನಗಳ ಹಿಂದೆ ಬರೆದಿದ್ದೆ: ನಾನು ಕೊಳಲು ಕ್ಲಾಸ್ ಮುಗಿಸಿಕೊಂಡು ಬರುವಾಗೆಲ್ಲ ಹತ್ತಾರು ಸಲ ರಾಜಲಕ್ಷ್ಮಿ ಮನೆಗೆ ಹೋಗಿ ಗಮ್ಮತ್ತಾದ ಮಾತುಕತೆ ನಡೆಸಿ ಚಾ ಕುಡಿದು ಬರುತ್ತಿದ್ದೆ ಎಂದು. ಈ ತಿಂಗಳ ಮೊದಲ ವಾರದಲ್ಲಿ ರಾಜಲಕ್ಷ್ಮಿಯ ಕಥಾ ಸಂಕಲನದ ಬಿಡುಗಡೆಗೆ ಹೋದಾಗಲೂ ಅದೇ ಗಮ್ಮತ್ತಿನ ಅನುಭವ. ಹೊಸ್ತಿಲಲ್ಲೇ ನಿಂತಿದ್ದ ರಾಜಲಕ್ಷ್ಮಿಗೆ ಶುಭ ಹಾರೈಸುವ ಹೊತ್ತಿಗೆ ಎಂದಿನಂತೆ Read More …

ಜಯಲಕ್ಷ್ಮಿ ಮೇಡಂ ಜೊತೆ ಒಂದು ಗಂಟೆ

ಮೇ ೧೫ ನನ್ನ ಪಾಲಿಗೆ ಅವಿಸ್ಮರಣೀಯ ದಿನ. ಅವತ್ತು ನಾನು ನನ್ನ ಎಸೆಸೆಲ್ಸಿ ಮ್ಯಾಥ್ಸ್ ಮೇಡಂ ಜಯಲಕ್ಷ್ಮಿಯವರನ್ನು ಅವರ ಮನೆಯಲ್ಲೇ ಭೇಟಿ ಮಾಡಿದೆ. ಬಾಗಿಲು ತೆರೆದವರೇ ಗುರುತಿದೆಯಾ ಮಾರಾಯಾ ಎಂದು ಅಚ್ಚರಿ ಮತ್ತು ಪ್ರೀತಿಯಿಂದ ವಿಚಾರಿಸಿಕೊಂಡರು. ಎಂದಿನಂತೆ ಪ್ರಾಕ್ಟಿಕಲ್ ಮಾತುಗಳು.  

ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು

ನಾನೇನೂ ಸಂಗೀತಗಾರನೂ ಅಲ್ಲ, ವಿಧೇಯ ಸಂಗೀತಾರ್ಥಿಯೂ ಅಲ್ಲ. ಆದರೆ ಆರು ವರ್ಷಗಳ ಹಿಂದೆ ಆರಂಭಿಸಿದ, ಎರಡು ವರ್ಷಗಳಿಂದ ತಡವರಿಸಿಕೊಂಡು ಬಂದ ಸಂಗೀತ ಕ್ಲಾಸಿನ ನಂತರದ ಕ್ಷಣಗಳಲ್ಲಿ ನನ್ನ ಜೊತೆಗೆ ಇದ್ದ, ಇರುವವರ ಬಗ್ಗೆ ಬರೆಯಬೇಕು ಅಂತ ಈ ಬೆಳಗ್ಗೆ ಅನ್ನಿಸಿ…… ನಿಮ್ಮೆದುರು ಆ ನೆನಪು ಹಂಚಿಕೊಳ್ಳಲು ಕೂತಿದ್ದೇನೆ.

ಪಾಕಿಸ್ತಾನಿ ಗಝಲ್‌ಗಳ ಖಜಾನೆ

ಪಾಕಿಸ್ತಾನಿ ಗಝಲ್‌ಗಳನ್ನು ಕೇಳುವುದು ನನಗೊಂದು ವಿಚಿತ್ರ ಹುಚ್ಚು. ಅದರಲ್ಲೂ ಪಠಾಣ್ ಖಾನ್‌ನಂಥ ಗಝಲ್ ಗಾಯಕರ ಚೀಸ್ ಸಿಕ್ಕರೆ ಮುಗಿದೇ ಹೋಯ್ತು…. ಎಷ್ಟೋ ವರ್ಷಗಳ ಹಿಂದೆ ನನ್ನ ಬ್ಲಾಗ್‌ಸ್ಪಾಟ್‌ನಲ್ಲಿ ಪಾಕಿಸ್ತಾನಿ ಗಝಲ್‌ಗಳು ದೊರೆಯುವ ಕೆಲವು ಕೊಂಡಿಗಳನ್ನು ಪ್ರಕಟಿಸಿದ್ದೆ. ಈಗ ಕಾಲ ಬದಲಾಗಿದೆ.

ನನ್ನ ಮೇಡಂ ಜಯಲಕ್ಷ್ಮಿ

`ನನ್ನ ಮೇಡಂ ಜಯಲಕ್ಷ್ಮಿ ‘ಎಂಬ ಕವನವನ್ನು ಬರೆದು ಎಟೋ ವರ್ಷಗಳಾದ ಮೇಲೆ….. ಅವರನ್ನು ಖುದ್ದು ಕಾಣುವುದಕ್ಕೆ ಹರಸಾಹಸ ಮಾಡುತ್ತಿದ್ದೇನೆ. ನಿಮ್ಮ ಹರಕೆಯೂ ಸಏರಿಕೊಂಡರೆ ಖಂಡಿತ ಮೇ ತಿಂಗಳಲ್ಲಿ ಅವರನ್ನು ಕಾಣುವೆ. ನನ್ನ ಕವನ ಸಂಕಲನ `ವರ್ತಮಾನದ ಬಿಸಿಲುನಲ್ಲೂ ಈ ಕವನವನ್ನು ನೀವು ಕಾಣಬಹುದು. ಅಷ್ಟಮಟ್ಟಿಗೆ ಜಯಲಕ್ಷ್ಮಿ ಮೇಡಂ ನನ್ನ ಮೇಲೆ ಪ್ರಭಾವ ಬೀರಿದ್ದಾರೆ. ಅವರನ್ನು ನಾನು Read More …