ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !

೬೦ಕ್ಕೂ ಹೆಚ್ಚು ಸಹಕಾರ ಸಂಸ್ಥೆಗಳು ಹೂಡಿದ ಹಣ ೧.೮೦ ಕೋಟಿ ರೂಪಾಯಿ. ಅದರ ಯೋಜನೆಯ ರೂವಾರಿಯೆಂಬ ಅಧಿಕಪ್ರಸಂಗ, ಹಮ್ಮಿನಿಂದ ಈ ಮನೋಹರ ಮಸ್ಕಿ ಮಾಡಿದ್ದೇನು? ಕ್ರಿಮಿನಲ್ ಕೂಟಕ್ಕೆ ಅಕ್ರಮ ಸಾಲದ ನೆಪದಲ್ಲಿ ೮೦ ಲಕ್ಷ ರೂ. ದುರ್ಬಳಕೆ.    ವಿಷಯ ಗೊತ್ತಾಗಿದ್ದೇ ತಡ, ಹಲವು ಸಹಕಾರಿ ರಂಗದ ಧುರೀಣರು ಮಸ್ಕಿಯೆಂಬ ಮಾಯಾಂಗನೆಯ ಮೋಹದಿಂದ ಹೊರಬಂದರು; ಪರಿಣಾಮ: Read More …

ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……

(ಮನೋಹರ ‘ಮಸ್ಕಿ’ ಅಲ್ಲ, ಮನೋಹರ ಸ್ಕೀಮ ಎಂದು ವೈಯೆನ್ಕೆ ಹೇಳಿದ್ದನ್ನು ಉಲ್ಲೇಖಿಸಿ ಮತ್ತು ‘ಮನೋಹರ ಮಸ್ಕಿಯೂ, ಬಿತ್ತನೆ ಕೆಲಸವೂ’ ಎಂಬ ‘ವಿಜಯ ಕರ್ನಾಟಕ’ದ ಶೀರ್ಷಿಕೆಯಿಂದ ಪ್ರೇರೇಪಿತ ಶೀರ್ಷಿಕೆ)

ರಂಗನಾಥರ ಬಹುಮುಖೀ ಬದುಕು

ಕ್ಯಾಮೆರಾ ಇಲ್ಲದೆ ಇದ್ದರೂ ನಾನು ಪತ್ರಕರ್ತನಂತೆ ಬೀಗುತ್ತಿದ್ದ ಆ ದಿನಗಳಲ್ಲಿ ರಂಗನಾಥ ನನಗೆ ತಮ್ಮದೇ ಒಂದು ಎಸ್ ಎಲ್ ಆರ್ ಕ್ಯಾಮೆರಾವನ್ನು ಕಡ ಕೊಟ್ಟಿದ್ದರು. ನಿನ್ನದೇ ಕ್ಯಾಮೆರಾ ಅಂತ  ತಿಳ್ಕೋ… ನಾನು ಕೇಳ್ದಾಗೆಲ್ಲ ಕೊಡು ಎಂದು ತಮಾಷೆ ಮಾಡಿದ್ದರು. ನಾನು ಸುಮಾರು ಐದು ವರ್ಷ ಅವರ ಕ್ಯಾಮೆರಾವನ್ನು ಇಟ್ಟುಕೊಂಡಿದ್ದೆ. ಫಿಲ್ಮ್ ಹಾಕುವುದಷ್ಟೇ ನನ್ನ ಕೆಲಸ. ನನ್ನ Read More …

ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು

ರಂಗನಾಥ ಯಾರು ಮಾರಾಯ್ರೆ ಎಂದು ನನ್ನ ಬ್ಲಾಗ್ ಓದುಗ ಮತ್ತು ಪ್ರಿಯ ಹಿರಿಯ ಪತ್ರಕರ್ತ ಶ್ರೀ ನಾಗೇಶ್ ಹೆಗಡೆ ಕೇಳಿದ್ದಾರೆ. ಇಂಥ ವ್ಯಕ್ತಿಯ ಬಗ್ಗೆ ನೆನಪಿಸಿಕೊಂಡು ಬರೆಯುವ ನಿಮ್ಮಂಥ ಮಿತ್ರ ನನಗೆ ಸಿಕ್ಕಿದ್ದು ನಿಜಕ್ಕೂ ಖುಷಿಯಾಗಿದೆ ಎಂದು ಹೊಸ ಗೆಳೆಯ, ವಾಸ್ತುಶಾಸ್ತ್ರಜ್ಞ ಸತ್ಯು ಬರೆದಿದ್ದಾರೆ. ಸತ್ಯು, ನಿಮ್ಮ ಮನೆಯ ಕೂಗಳತೆಯಲ್ಲೇ ರಂಗನಾಥರ ಮನೆ ಇದೆ; ನಾನು Read More …

ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..

ಹಾಗಾದ್ರೆ ನಾವಿನ್ನು ಲಾಂಗ್ ಟರ್ಮ್ ಪ್ಲಾನ್ ಮಾಡಬಹುದಲ್ವೆ ಎಂದು ನಾನು ಅವರನ್ನು ಕೇಳಿದೆ. ನಿಜ ಕಣಯ್ಯ, ಶಾರ್ಟ್ ಟರ್ಮ್ ಪ್ಲಾನ್ ಸಕ್ಸೆಸ್ ಆಗಿಲ್ವಲ್ಲ….. ಲಾಂಗ್‌ಟರ್ಮೇ ಮಾಡ್ಬೇಕು ಎಂದು ಗಹಗಹಿಸುತ್ತ ಸಿಗರೇಟು ಎಳೆದರು ರಂಗನಾಥ. ಹೊರಗೆ ಜುಮುರು ಮಳೆ ಹೊಯ್ಯುತ್ತಿತ್ತು. ಅವರ ಸಿಗರೇಟು ಸೇದುವ ತಾರಸಿಯಲ್ಲಿ ನಾವು ನಿಂತಿದ್ದೆವು.

ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!

ಮುಂಬಯಿ ದಾಳಿಯ ಬಗ್ಗೆನೋ, ನಕ್ಸಲರು ಯಾರನ್ನೋ ಹೊಡೆದು ಹಾಕಿದ ಬಗ್ಗೆನೋ ತಲೆ ಕೆಡಿಸ್ಕೊಂಡು ಕೊಂಚ ಚಿಂತನ-ಮಂಥನ ನಡೆಸೋಣ ಅಂತ ಎಲ್ಲ ಗ್ಲಾಸ್‌ಮೇಟ್‌ಗಳು ಪಬ್‌ಗೆ ಹೋಗಿ ಕೂತಿದ್ದರೆ ಹಾಗೆ ಫಕ್ಕನೆ ಹೋಗಿ ಹೊಡೆದುಬಿಡೋದೆ? 

ಲೋಕಾಯುಕ್ತರೆ, ಇನ್ಯಾಕೆ ತಡ?

ಕೊನೆಗೂ ಶ್ರೀಸಾಮಾನ್ಯನ ಒಂದು ಹಳೆಯ ಕನಸು ನನಸಾಗಿದೆ. ಜನಪ್ರಧಿನಿಧಿಗಳು ಭ್ರಷ್ಟರಾಗಿದ್ರೆ ಅವರನ್ನು ಯಾಕೆ ಅರೆಸ್ಟ್ ಮಾಡಲ್ಲ ಎಂದು ಜನ ಕೇಳ್ತಾ ಇದ್ರು. ಅವರ ಈ ಪ್ರಶ್ನೆಗೆ ಲೋಕಾಯುಕ್ತ ಸಂತೋಷ ಹೆಗ್ಡೆ ಉತ್ರ ಕೊಟ್ಟಿದಾರೆ. ಹಾಗಂತ ಅವ್ರು ಸುಮ್ನೆ ಏನೋ ಸ್ಟಂಟ್ ಮಾಡಿಲ್ಲ  ಅನ್ನೋದು ಸದ್ಯಕ್ಕಂತೂ ಗೋಚರವಾಗುತ್ತೆ.