ಪತ್ರಕರ್ತರೇ, ಟೈಂ ಉಂಟಾ?2: ಹಳ್ಳಿಗಾ!? ಟೈಮಿಲ್ಲ ಕಣ್ರೀ…..!

ಹಾಗಾದರೆ ಕ್ಷೇತ್ರದರ್ಶನಕ್ಕೆ ಒಳಹಳ್ಳಿಗಳಿಗೆ ವರ್ಷದಲ್ಲಿ ಪತ್ರಕರ್ತರು ಎಷ್ಟು ಸಾರಿ ಹೋಗುತ್ತಾರೆ? ಅಲ್ಲಿ ಹೇಗೆ ವರ್ತಿಸುತ್ತಾರೆ? ಏನು ನೋಡುತ್ತಾರೆ? ಎಷ್ಟು ಸಮಯದಲ್ಲಿ ಹೇಗೆ ಮಾಹಿತಿ ಸಂಗ್ರಹಿಸುತ್ತಾರೆ? ಯಾರ ಸಹಾಯ ಪಡೆಯುತ್ತಾರೆ? ಸಂಗ್ರಹಿತ ಮಾಹಿತಿಗಳನ್ನು ಹೇಗೆ ಖಚಿತಪಡಿಸಿಕೊಳ್ಳುತ್ತಾರೆ? ಅದನ್ನು ಯಾವಾಗ, ಹೇಗೆ ಪ್ರಕಟಿಸುತ್ತಾರೆ? ಮುಂತಾಗಿ ಸುದ್ದಿ ಮಾಡುವ ಮಂದಿಯ ಸುತ್ತ ಒಂದು ನೋಟ ಹರಿಸಿದರೆ ಮಾಧ್ಯಮ ಮಾರ್ಗದ ಪ್ರಸ್ತುತ Read More …

ನೀನೇನಂಥ ಮೆದು ಹುಡುಗನಲ್ಲ

ಒಂದು ಕ್ಷಣದಲ್ಲಿ ನೀನು ನನ್ನನ್ನು ಬೈದುಕೊಳ್ಳುತ್ತೀಯೆ ಎಂಥ ಕಟುಹೃದಯಿ, ಅಶಾಂತ, ನಿರ್ದಯಿ ಎದೆ ಒಳಗೆ ಘನವಾಗಿ ಹರಿಯುತ್ತಿದೆ ಯಾವುದೋ ದ್ವೇಷ.  ನೀನೇನಂಥ ಮೆದು ಹುಡುಗನಲ್ಲ, ಬರಿಯ ಕಲ್ಲು.    ಒಂದು ದಿನವೂ ನೀನು ಹೀಗೆ ಕರ್ಟನು ಸರಿಸಿದವನಲ್ಲ,  ಒಂದು ಹುಸಿಜೋಕಿಗೂ ನಕ್ಕವನಲ್ಲ,  ಬೆಳಗ್ಗೆ ಎದ್ದು ಹದವಾಗಿ ಮಾತಾಡುವುದಿಲ್ಲ ಚಾ ಕುಡಿವಾಗ ಕಣ್ಣು ವಾರೆನೋಟಕ್ಕೂ ಗತಿಯಿಲ್ಲದಂತೆ  ಪೇಪರಿಗೆ Read More …

ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ

೨೦೦೮ರ ಈ ವರ್ಷಕ್ಕೆ ಟಿಬೆಟಿನಿಂದ ಒಂದು ಲಕ್ಷ ಟಿಬೆಟನ್ ಸಮುದಾಯವು ದೇಶಭ್ರಷ್ಟವಾಗಿ ಭಾರತಕ್ಕೆ ಬಂದು ೪೯ ಸುದೀರ್ಘ ವರ್ಷಗಳಾಗುತ್ತಿದೆ. ಗೌರವ ಮತ್ತು ಘನತೆಯೊಂದಿಗೆ ತಮ್ಮ ತಾಯ್ನಾಡಿಗೆ ಮರಳುವ ದಿನಕ್ಕಾಗಿ ಇವರೆಲ್ಲ ದೃಢನಿಶ್ಚಿತರಾಗಿ ಕಾಯುತ್ತಿದ್ದಾರೆ. ಕಮ್ಯುನಿಸ್ಟ್  ಚೀನಾದ ಟಿಬೆಟ್ ಆಕ್ರಮಣದಿಂದ ಟಿಬೆಟನ್ನರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ ; ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದಾರೆ. ಈವರೆಗೆ ೧೨ ಲಕ್ಷ ಟಿಬೆಟನ್ನರು Read More …

ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು

ನಿನ್ನೆಯಷ್ಟೇ ನಾನು ಮಾವೋ ಎಂಬ ಏಳುಕೋಟಿ ಸಾವಿನ ಸರದಾರನ ಬಗ್ಗೆ ಬಂದ ಪುಸ್ತಕದ ಅನುವಾದವನ್ನು (ನಿಮಗೆ ಗೊತ್ತಿಲ್ಲದ ಮಾವೋ) ಕೈಗೆತ್ತಿಕೊಳ್ಳಬೇಕೆಂದು ನಿರ್ಧರಿಸಿದ್ದೆ. ಅದರಂತೆ ವೆಬ್‌ಸೈಟಿನಲ್ಲಿ ಪುಸ್ತಕದ ಬಗ್ಗೆ ಒಂದೆರಡು ಬ್ಲಾಗ್‌ಗಳನ್ನು ಸಿದ್ಧ ಮಾಡಿಟ್ಟು ಇವತ್ತಿಗೆ ಶೆಡ್ಯೂಲ್ ಮಾಡಿದ್ದೆ. ಆದರೆ ದುರಂತ ನೋಡಿ, ಈ ಸಾವಿನ ಸರದಾರನ ಬಂಟರು ಮತ್ತೊಂದು ಜೀವವನ್ನು ತೆಗೆದಿದ್ದಾರೆ. ಮಲೆನಾಡಿನ ಹಸಿರು ಮತ್ತೆ Read More …

ಮಾವೋ: ಗೊತ್ತಿಲ್ಲದ ಇತಿಹಾಸದ ಮೊದಲ ಪುಟ

ಮಾವೋ ತ್ಸೆ ತುಂಗ್.  ದಶಕಗಳ ಕಾಲ ಜಗತ್ತಿನ ಕಾಲುಭಾಗದಷ್ಟು ಜನರ ಮೇಲೆ ನಿರಂಕುಶ ಪ್ರಭುತ್ವ ಹೊಂದಿದವ.  ಅವನೇ ಈ ಜಗತ್ತಿನ ಇತಿಹಾಸದಲ್ಲಿ ಏಳು ಕೋಟಿ ಜನರು ಶಾಂತಿಕಾಲದಲ್ಲೇ ಸಾಯುವುದಕ್ಕೆ ಕಾರಣ. ಇಪ್ಪತ್ತನೇ ಶತಮಾನದಲ್ಲಿ ಅವನ ಹಾಗೆ ನರಮೇಧ ನಡೆಸಿದವರೇ ಇಲ್ಲ.  ಹುಟ್ಟಿದ್ದು ಚೀನಾದ ಹೊಟ್ಟೆಯಲ್ಲಿರುವ ಹುನಾನ್ ಪ್ರಾಂತದ ಶಾವೋಸಾನ್ ಕಣಿವೆಯ ಒಂದು ರೈತಾಪಿ ಕುಟುಂಬದಲ್ಲಿ. ಜನ್ಮದಿನಾಂಕ Read More …