ಅಂತರಜಾಲ ಬಳಕೆ: ಇರಲಿ ಕೊಂಚ ಎಚ್ಚರಿಕೆ

ಅಂತರಜಾಲ ಅಥವಾ ಇಂಟರ್‌ನೆಟ್ ಬಗ್ಗೆ ಎಷ್ಟು ಬಗೆಯ ಕಿವಿಮಾತುಗಳನ್ನು ಹೇಳಿದರೂ ಸಾಕಾಗುವುದಿಲ್ಲ. ಯಾಕೆಂದರೆ ಹೊಸ ಬಳಕೆದಾರರು ಬರುತ್ತಲೇ ಇದ್ದಾರೆ. ಕಂಪ್ಯೂಟರ್ ನಿರಕ್ಷರತೆಯೂ ಒಂದು ಸಮಸ್ಯೆಯೇ. ಆದ್ದರಿಂದ ಮತ್ತೆ ಮತ್ತೆ ಈ ಅಂಕಣದಲ್ಲಿ ಅಂತರಜಾಲದ ಬಗ್ಗೆ ಬರೆಯುವ ಅಗತ್ಯವಿದೆ. ನಾವೀಗ ಕಂಪ್ಯೂಟರನ್ನಷ್ಟೇ ಕಲಿತರೆ ಸಾಕಾಗದು. ಕಂಪ್ಯೂಟರ್ ಸಂಸ್ಕೃತಿಯನ್ನು ಬೆಳೆಸಬೇಕು. ಅಂದರೆ ಮತ್ತಷ್ಟು ಹೊತ್ತು ಗಣಕದ ಮುಂದೆ ಕುಳಿತುಕೊಳ್ಳುವುದಲ್ಲ. Read More …

ಮುಂಡುರುಕು ಮಕ್ಕಳ ಲೆಕ್ಕ ಮತ್ತು ನಮ್ಮ ಬ್ರಹ್ಮಾಂಡದ ಗಣಿತ

ಅವರಿಗೆ ಶಿಕ್ಷಣವಿಲ್ಲ, ನಕಾಶೆ ಗೊತ್ತಿಲ್ಲ; ಗ್ರಾಫ್ ಅರಿವಿಲ್ಲ, ರೂಲರ್ ತಿಳಿದೇ ಇಲ್ಲ. ಆದರೂ ಅವರೆಲ್ಲ ಗಣಿತದಲ್ಲಿ ಮುಂದು! ಬ್ರೆಝಿಲ್ ದೇಶದ ಅಮೆಝಾನ್ ನದೀತಟದ ಮುಂಡುರುಕು ಬುಡಕಟ್ಟು ಜನರನ್ನು ನೋಡಿದರೆ, ಮನುಷ್ಯನ ತಿಳಿವಳಿಕೆಯೆಲ್ಲ ಮೊದಲೇ ಇದ್ದಿದ್ದೇ ಹೊರತು ಕಾಲಾನುಕ್ರಮ ಅರಿವಿಗೆ ಬಂದಿದ್ದೇನಲ್ಲ ಎಂದೇ ಅನಿಸುತ್ತದೆ.

ತುಂಡು ಕ್ರಿಕೆಟಿಗೆ ಬೇಕೇ ಬೇಕು ತುಂಡುಲಂಗದ ಚೀರು ಚಿಂಗಾರಿಯರು

ಕರ್ನಾಟಕದ ವಿಧಾನಸಭಾ ಚುನಾವಣೆಗಳ ನಡುವೆಯೇ ತೂರಿಬಂದ ಐ ಪಿ ಎಲ್ ಟಿ೨೦ ಕ್ರಿಕೆಟ್ ಪಂದ್ಯಾವಳಿಗಳ ವರದಿಗಳಲ್ಲಿ , ಛಾಯಾಚಿತ್ರಗಳಲ್ಲಿ ಕಂಡುಬಂದಿದ್ದು ದಾಂಡಿಗರಲ್ಲ; ಚೀರು ಚಿಂಗಾರಿಯರು! ಅರ್ಥಾತ್ ಚೀರ್‌ಗರ್ಲ್ಸ್. ಪಂದ್ಯದಲ್ಲಿ ಸ್ಕೋರ್ ಮಾಡಿದವರಿಗಿಂತ ಈ ಚಿಂಗಾರಿಯರ ಚಿತ್ರಗಳೇ ಪತ್ರಿಕೆಗಳಲ್ಲಿ ರಾರಾಜಿಸಿದವು. ಇವರೆಲ್ಲ ಚೀರಿದ್ದಕ್ಕೇ ನಮ್ಮ ಕ್ರಿಕೆಟ್ ಕಲಿಗಳು ರನ್ ಗಳಿಸಿದರು ಎಂಬಂತೆ, ಸೇರಿದ್ದ ಜನಸಮೂಹಕ್ಕೂ ಈ ಚಿಂಗಾರಿಯರೇ Read More …