ಹದಿನಾರನೇ ಕೆಲಸ

(Published in Hosadigantha Yugadi 2008 issue) ಇನ್ನೇನು ವಿಮಾನ ಬೆಂಗಳೂರಿನಿಂದ ಬಂದೇ ಬಿಡುತ್ತದೆ ಎಂಬಂತೆ ದೂರದ ಗೋಪುರದ ಸೂಚಕ ದೀಪವು ಗಿರಗಿರ ತಿರುಗುತ್ತ ಮಿನುಗತೊಡಗಿತು. ನಮ್ಮ ಫೋಟೋಗ್ರಾಫರ್ ಗಡಬಡಿಸಿ ಸೀದಾ ಟರ್ಮಾಕಿನತ್ತ ನಡೆದ. ದಿನದ ಮೊದಲನೇ ವಿಮಾನ ಬಂತಲ್ಲ ಎಂಬ ಕರ್ತವ್ಯಪ್ರeಯಿಂದ ಪೇದೆಗಳು ಎದ್ದು ಟೋಪಿಯನ್ನು ಸರಿಪಡಿಸಿಕೊಂಡು, ಪ್ಯಾಂಟನ್ನು ಬಿಗಿ ಮಾಡಿಕೊಳ್ಳುತ್ತ ನಿಂತರು. ಸಖಿಯರೇ Read More …

ಒಲಿಂಪಿಕ್ಸ್ ಮೋಜಿಗೆ ಮುನ್ನ ಒಂದು ಕ್ಷಣ

ಲೋಪೆಜ್ ಲೋಮೊಂಗ್ ಸತ್ತೇ ಹೋಗಿದ್ದ ಎಂದೇ ಎಲ್ಲರೂ ಭಾವಿಸಿದ್ದರು. ಸುಡಾನ್ ದೇಶದ ಕಿಮೋಟೋಂಗ್‌ನಲ್ಲಿದ್ದ ತನ್ನದೇ ಗೋರಿಗೆ ಲೊಮೊಂಗ್ ಕಳೆದ ಡಿಸೆಂಬರಿನಲ್ಲಿ ಭೇಟಿ ಕೊಡಬೇಕಾಯಿತು! ಅವನು ಬಳಸುತ್ತಿದ್ದ ಸರ ಮತ್ತಿತರೆ ಪ್ರಿಯ ವಸ್ತುಗಳೂ ಈ ಗೋರಿಯಲ್ಲಿ ಹೂತುಹೋಗಿದ್ದವು.

ಮನುಕುಲದ ಏಳಿಗೆಯಾಗಲಿ, ಕದಿಯಲು ಬಿಡಿ!

ಎರಡು ವಾರಗಳ ಕೆಳಗೆ ಪಿ೨ಪಿ ಎಂಬ ಕಡತ ಹಂಚಿಕೆ ವಿಷಯದ ಬಗ್ಗೆ ಬರೆದಿದ್ದೆ. ನಾವು ಯಾವುದೇ ಸಿನೆಮಾವನ್ನು ಹೇಗೆ ಖಾಸಗಿ ಬಳಕೆಗೆ ಜಗತ್ತಿನ ಇನ್ನೊಂದು ಗಣಕದಿಂದ ಪಡೆಯಬಹುದು, ಕದಿಯುವುದಕ್ಕೆ ಸಮಾನವೇ ಆದರೂ ಹೇಗೆ ಈ ಬಳಕೆಯಿಂದ ನಮ್ಮ ಗಣಕದಲ್ಲೇ ಜಗತ್ತಿನ ಎಲ್ಲ ಪುಸ್ತಕಗಳನ್ನು ಇಳಿಸಿಕೊಳ್ಳಬಹುದು, ಇತ್ಯಾದಿ ವಿವರಿಸಿದ್ದೆ. ಹಂಚಿ ಉಂಡರೆ ಹಸಿವಿಲ್ಲ ಎಂದೂ ಬರೆದಿದ್ದೆ. ಹೌದು, Read More …

ನಾವಿನ್ನೂ ವಿಕಿರಣ ಕಸಕ್ಕೆ ಸುರಿಹೊಂಡ ಹುಡುಕಿಲ್ಲ!

ಪರಮಾಣುಶಕ್ತಿಯ ಬಳಕೆ ಮಾಡುತ್ತ ಈಗಾಗಲೇ ಅರ್ಧ ಶತಮಾನ ಕಳೆದಿದ್ದೇವೆ. ವಿಶ್ವದ ಬಲಾಢ್ಯ ದೇಶಗಳಲ್ಲಿ ಪರಮಾಣು ಸ್ಥಾವರಗಳಿವೆ. ಭಾರತವೂ ಇಂಥ ಶಕ್ತಿಯುತ ದೇಶಗಲ್ಲೊಂದು. ಎಲ್ಲ ಸರಿ. ಆದರೆ ಪರಮಾಣು ಕಸವನ್ನು ಎಲ್ಲಿ ಎಸೆಯುತ್ತಿದ್ದಾರೆ? ಕಸದ ಬುಟ್ಟಿ ಎಲ್ಲಿದೆ? ಪರಮಾಣು ಶಕ್ತಿಯ ಸದ್ಬಳಕೆಯೋ, ದುರ್ಬಳಕೆಯೋ ಏನಾದರಾಗಲಿ, ಕಸವಂತೂ ಹುಟ್ಟಿಕೊಳ್ಳುತ್ತದೆ. ಪರಮಾಣು ಸ್ಥಾವರಗಳಲ್ಲಿ ಬಳಸುವ ಕಸಬರಿಗೆ, ಮೇಜು, ಕುರ್ಚಿಗಳಿಂದ ಹಿಡಿದು Read More …

ಕದಿಯೋಣು ಬಾರಾ, ಕಲಿಯೋಣು ಬಾ !

ಬಹುದಿನಗಳಿಂದ ಬರೆಯಬೇಕೇ, ಬೇಡವೇ ಎಂಬ ಜಿಜ್ಞಾಸೆಯಲ್ಲಿದ್ದ ವಿಷಯವನ್ನು ಈಗ ನಿಮ್ಮ ಮುಂದೆ ಸಂಕ್ಷಿಪ್ತವಾಗಿ ಇಡುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಮೊದಲೇ ಹೇಳಿಬಿಡುತ್ತೇನೆ: ವಾಣಿಜ್ಯದ, ಹಣಕಾಸಿನ ಕಾರಣಕ್ಕಾಗಿ ಕದಿಯುವುದು ಅಪರಾಧ. ಪುಸ್ತಕಗಳನ್ನು, ಸಿನೆಮಾ ಸಿಡಿಗಳನ್ನು ಲೈಬ್ರರಿಗಳಿಂದ ಕದಿಯುವುದು ಅಕ್ಷಮ್ಯ. ಇನ್ನೊಬ್ಬರು ಖರೀದಿಸಿದ್ದನ್ನು ಅವರಿಗೂ ಒಂದು ಪ್ರತಿಯನ್ನು ಬಿಡದೆ ಲಪಟಾಯಿಸುವುದು ತರವಲ್ಲ. ಮುಖ್ಯವಾಗಿ ಕದಿಯುವುದೇ ತಪ್ಪು. ಅಕಸ್ಮಾತ್ ಕದ್ದರೆ ಅದನ್ನು Read More …

ಪುಟವಿನ್ಯಾಸಕ್ಕೆ ಹಲವು ತಂತ್ರಾಂಶಗಳು; ಇಮ್ಯಾಜಿನೇಶನ್ ಮಾತ್ರ ನಿಮ್ಮದೇ!

ನಮ್ಮಲ್ಲಿ ಡೆಸ್ಕ್‌ಟಾಪ್ ಪಬ್ಲಿಶಿಂಗ್ (ಡಿಟಿಪಿ) ಬಂದು ಸುಮಾರು ಇಪ್ಪತ್ತು ವರ್ಷಗಳಾದವು. ಆಗಿನಿಂದಲೂ ಪುಸ್ತಕಗಳ ಪುಟವಿನ್ಯಾಸ ಮಾಡಲು ಪೇಜ್‌ಮೇಕರ್ ಎಂಬ ತಂತ್ರಾಂಶವನ್ನು ಬಳಸುತ್ತಲೇ ಇದ್ದೇವೆ. ಇದರೊಂದಿಗೇ ಇನ್ನಷ್ಟು ತಂತ್ರಾಂಶಗಳನ್ನೂ ನಾವು ಬಳಸಿಕೊಳ್ಳಬಹುದು. ನನ್ನ ಅನುಭವದಲ್ಲಿ ಕಂಡ ಕೆಲವು ತಂತ್ರಾಂಶಗಳನ್ನು ಇಲ್ಲಿ ನಮೂದಿಸುತ್ತಿದ್ದೇನೆ. ಪೇಜ್‌ಮೇಕರ್ ಬಿಟ್ಟರೆ ಉಳಿದೆಲ್ಲವೂ ಹೆಚ್ಚು ಬಳಕೆಯಲ್ಲಿ ಇಲ್ಲ. ದಿನಪತ್ರಿಕೆಗಳು ಸಾಮಾನ್ಯವಾಗಿ ಕ್ವಾರ್ಕ್ ಎಕ್ಸ್‌ಪ್ರೆಸ್ ಮತ್ತು Read More …

ರಸಗೊಬ್ಬರ: ಮಾಹಿತಿಯಲ್ಲೂ ಕೊರತೆ!

ಹಾವೇರಿಯ ಗಲಭೆಯಲ್ಲಿ ನಮ್ಮ ಅನ್ನದಾತ ಸಿದ್ದಲಿಂಗಪ್ಪ ಚೂರಿ ಮೃತರಾದರು. ಕೇಂದ್ರ ಸರ್ಕಾರವು ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಕ್ಕೆ ಸಿದ್ದಲಿಂಗಪ್ಪನವರು ಪ್ರಾಣ ತೆರಬೇಕಾಯಿತು. ನಿಮಗೆ ಗೊತ್ತಿದೆಯೋ ಇಲ್ಲವೋ….  ಕೇಂದ್ರ ಸರ್ಕಾರದ ರಸಗೊಬ್ಬರ ಸಚಿವಾಲಯದ ವೆಬ್‌ಸೈಟಿನಲ್ಲಿ ರಸಗೊಬ್ಬರ ಇಲಾಖೆಯು ದೇಶದ ಎಲ್ಲ ರೈತರಿಗೆ ರಸಗೊಬ್ಬರವನ್ನು ಪೂರೈಸುವುದು ತನ್ನ ಹೊಣೆಗಾರಿಕೆ ಎಂದು ಸಾರ್ವಜನಿಕವಾಗಿ ಘೋಷಿಸಿದೆ. Making available fertilizers to farmers Read More …