ತದಡಿಗೆ ಬರುತ್ತಿದ್ದಾರೆ: ವಸುಂಧರೆಯ ಒಡಲಿಗೇ ಬಹುಬಾಂಬ್ ಇಡುವವರು!

`ನಮ್ಮ ಬಳಿ ಡಾಟಾ ಇಲ್ಲ. ಈ ಬಗ್ಗೆ ಒಂದು ವಿಶ್ವಸ್ತರದ ಸಂಸ್ಥೆಯ ಮೂಲಕ ಅಧ್ಯಯನ ಮಾಡಿಸುತ್ತೇವೆ’ ವಿಕಾಸಸೌಧದ ಆ ಸುಸಜ್ಜಿತ ಕೋಣೆಯಲ್ಲಿ ಕುಳಿತ ರಾಜ್ಯ ಸರ್ಕಾರದ ಇಂಧನ ಇಲಾಖೆಯ ಕಾರ್ಯದರ್ಶಿಯವರು ಖಚಿತವಾಗಿ ಹೇಳಿದರು. `ಹಾಗೆ ಅಧ್ಯಯನ ಮಾಡುವ ಅಗತ್ಯವಿಲ್ಲ. ಸುಮ್ಮನೆ ಅದಕ್ಕೆ ಯಾಕೆ ಹಣ ಖರ್ಚು ಮಾಡುತ್ತೀರಿ…. ನಾವಂತೂ ತದಡಿಗೆ ಇಂಥ ಯಾವುದೇ ಯೋಜನೆ ಬರುವುದಕ್ಕೆ Read More …

ವರ್ತಮಾನದ ಹೊಸ ವಾರ್ತೆಗಳು

ಕಲಿಯುಗ ಅಂಕಣ ಶುರುವಾಗಿ ಒಂದು ವರ್ಷ ಕಳೆದೇ ಹೋಗಿದೆ! ನನ್ನ ಅಂಕಣದ ನೀತಿಯನ್ನೇ ಮೊದಲ ಲೇಖನವಾಗಿ ಬರೆದಿದ್ದೆ. ಬಹುಶಃ ಅವೆಲ್ಲವನ್ನೂ ಪೂರೈಸಲು ಸಾಧ್ಯವಾಗಿಲ್ಲದಿರಬಹುದು; ಆದರೆ ಹಲವು ಬಾರಿ ರಾಜಕೀಯ ಮತ್ತು ವಿವಾದಾಸ್ಪದ ವಿಷಯಗಳ ಬಗ್ಗೆ ಬರೆಯುವ ಒತ್ತಡ ಒಳಗೊಳಗೇ ಮೂಡಿದ್ದರೂ, ಅವುಗಳನ್ನು ಮೀರಿ ನನ್ನ ಅಂಕಣದ ನೀತಿಯನ್ನು ಪಾಲಿಸಿದ್ದೇನೆ ಎಂಬ ಸಮಾಧಾನ ನನಗಿದೆ. ಈ ವರ್ಷ Read More …

ರಿಸೆಶನ್ ಬಂದಿದೆ, ಎಚ್ಚರವಿರಲಿ!

ಅಮೆರಿಕಾದಲ್ಲಿ ಆರ್ಥಿಕ ಹಿನ್ನಡೆಯಾಗ್ತಾ ಇದೆ; ಅಂದ್ರೆ ಏನು? ಇಷ್ಟು ದಿನ ಶೇ. ೨.೪ ರ ಗತಿಯಲ್ಲಿ ಬೆಳೆಯುತ್ತಿದ್ದ ಆ ದೇಶದ ಆರ್ಥಿಕತೆ ಈಗ ಶೇ. ೧.೯ಕ್ಕೆ ಕುಸಿದಿದೆ. ೨೦೦೮ರ ಈ ಹನ್ನೊಂದನೇ ಆರ್ಥಿಕ ಹಿನ್ನಡೆ (ರಿಸೆಶನ್)ಯ ಸಾಧ್ಯತೆ ಶೇ. ೬೦ರಷ್ಟಿದೆಯಂತೆ. ಅಮೆರಿಕಾದಲ್ಲಿ ೪.೪೮ ಲಕ್ಷ ಜನ ಈಗಾಗಲೇ, ಈ ವರ್ಷವೇ ಕೆಲಸ ಕಳೆದುಕೊಂಡಿದ್ದಾರೆ. ಕಳೆದ ವರ್ಷ Read More …

ಒಲಿಂಪಿಕ್ಸ್ ಮೋಜಿಗೆ ಮುನ್ನ ಒಂದು ಕ್ಷಣ

ಲೋಪೆಜ್ ಲೋಮೊಂಗ್ ಸತ್ತೇ ಹೋಗಿದ್ದ ಎಂದೇ ಎಲ್ಲರೂ ಭಾವಿಸಿದ್ದರು. ಸುಡಾನ್ ದೇಶದ ಕಿಮೋಟೋಂಗ್‌ನಲ್ಲಿದ್ದ ತನ್ನದೇ ಗೋರಿಗೆ ಲೊಮೊಂಗ್ ಕಳೆದ ಡಿಸೆಂಬರಿನಲ್ಲಿ ಭೇಟಿ ಕೊಡಬೇಕಾಯಿತು! ಅವನು ಬಳಸುತ್ತಿದ್ದ ಸರ ಮತ್ತಿತರೆ ಪ್ರಿಯ ವಸ್ತುಗಳೂ ಈ ಗೋರಿಯಲ್ಲಿ ಹೂತುಹೋಗಿದ್ದವು.

ಮನುಕುಲದ ಏಳಿಗೆಯಾಗಲಿ, ಕದಿಯಲು ಬಿಡಿ!

ಎರಡು ವಾರಗಳ ಕೆಳಗೆ ಪಿ೨ಪಿ ಎಂಬ ಕಡತ ಹಂಚಿಕೆ ವಿಷಯದ ಬಗ್ಗೆ ಬರೆದಿದ್ದೆ. ನಾವು ಯಾವುದೇ ಸಿನೆಮಾವನ್ನು ಹೇಗೆ ಖಾಸಗಿ ಬಳಕೆಗೆ ಜಗತ್ತಿನ ಇನ್ನೊಂದು ಗಣಕದಿಂದ ಪಡೆಯಬಹುದು, ಕದಿಯುವುದಕ್ಕೆ ಸಮಾನವೇ ಆದರೂ ಹೇಗೆ ಈ ಬಳಕೆಯಿಂದ ನಮ್ಮ ಗಣಕದಲ್ಲೇ ಜಗತ್ತಿನ ಎಲ್ಲ ಪುಸ್ತಕಗಳನ್ನು ಇಳಿಸಿಕೊಳ್ಳಬಹುದು, ಇತ್ಯಾದಿ ವಿವರಿಸಿದ್ದೆ. ಹಂಚಿ ಉಂಡರೆ ಹಸಿವಿಲ್ಲ ಎಂದೂ ಬರೆದಿದ್ದೆ. ಹೌದು, Read More …

ನಾವಿನ್ನೂ ವಿಕಿರಣ ಕಸಕ್ಕೆ ಸುರಿಹೊಂಡ ಹುಡುಕಿಲ್ಲ!

ಪರಮಾಣುಶಕ್ತಿಯ ಬಳಕೆ ಮಾಡುತ್ತ ಈಗಾಗಲೇ ಅರ್ಧ ಶತಮಾನ ಕಳೆದಿದ್ದೇವೆ. ವಿಶ್ವದ ಬಲಾಢ್ಯ ದೇಶಗಳಲ್ಲಿ ಪರಮಾಣು ಸ್ಥಾವರಗಳಿವೆ. ಭಾರತವೂ ಇಂಥ ಶಕ್ತಿಯುತ ದೇಶಗಲ್ಲೊಂದು. ಎಲ್ಲ ಸರಿ. ಆದರೆ ಪರಮಾಣು ಕಸವನ್ನು ಎಲ್ಲಿ ಎಸೆಯುತ್ತಿದ್ದಾರೆ? ಕಸದ ಬುಟ್ಟಿ ಎಲ್ಲಿದೆ? ಪರಮಾಣು ಶಕ್ತಿಯ ಸದ್ಬಳಕೆಯೋ, ದುರ್ಬಳಕೆಯೋ ಏನಾದರಾಗಲಿ, ಕಸವಂತೂ ಹುಟ್ಟಿಕೊಳ್ಳುತ್ತದೆ. ಪರಮಾಣು ಸ್ಥಾವರಗಳಲ್ಲಿ ಬಳಸುವ ಕಸಬರಿಗೆ, ಮೇಜು, ಕುರ್ಚಿಗಳಿಂದ ಹಿಡಿದು Read More …

ಕದಿಯೋಣು ಬಾರಾ, ಕಲಿಯೋಣು ಬಾ !

ಬಹುದಿನಗಳಿಂದ ಬರೆಯಬೇಕೇ, ಬೇಡವೇ ಎಂಬ ಜಿಜ್ಞಾಸೆಯಲ್ಲಿದ್ದ ವಿಷಯವನ್ನು ಈಗ ನಿಮ್ಮ ಮುಂದೆ ಸಂಕ್ಷಿಪ್ತವಾಗಿ ಇಡುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಮೊದಲೇ ಹೇಳಿಬಿಡುತ್ತೇನೆ: ವಾಣಿಜ್ಯದ, ಹಣಕಾಸಿನ ಕಾರಣಕ್ಕಾಗಿ ಕದಿಯುವುದು ಅಪರಾಧ. ಪುಸ್ತಕಗಳನ್ನು, ಸಿನೆಮಾ ಸಿಡಿಗಳನ್ನು ಲೈಬ್ರರಿಗಳಿಂದ ಕದಿಯುವುದು ಅಕ್ಷಮ್ಯ. ಇನ್ನೊಬ್ಬರು ಖರೀದಿಸಿದ್ದನ್ನು ಅವರಿಗೂ ಒಂದು ಪ್ರತಿಯನ್ನು ಬಿಡದೆ ಲಪಟಾಯಿಸುವುದು ತರವಲ್ಲ. ಮುಖ್ಯವಾಗಿ ಕದಿಯುವುದೇ ತಪ್ಪು. ಅಕಸ್ಮಾತ್ ಕದ್ದರೆ ಅದನ್ನು Read More …