ಅಪಘಾತ ಎಂದರೇನು? ಬಗೆಗಳು, ಕಾರಣಗಳು, ಪರಿಣಾಮಗಳು

ಅಪಘಾತ ಎಂದರೆ ಅನಿರೀಕ್ಷಿತವಾಗಿ, ಯಾವುದೇ ಪೂರ್ವಯೋಜನೆಯಿಲ್ಲದೆ ನಡೆಯುವ, ದುಃಖದ ಸನ್ನಿವೇಶವನ್ನು ಉಂಟುಮಾಡುವ, ತಡೆಯಲು ಸಾಧ್ಯವಾಗದ ಮತ್ತು ಗಾಯಗಳಿಗೆ ಕಾರಣವಾಗುವ ದುರ್ಘಟನೆಯಾಗಿದೆ. ಅಪಘಾತಕ್ಕೆ ಒಳಗಾದವರು ಉದ್ದೇಶಪೂರ್ವಕವಾಗಿ ವರ್ತಿಸಿರುವುದಿಲ್ಲ. ಪ್ರತಿದಿನವೂ ಒಂದಲ್ಲ ಒಂದು ಕಡೆ ಮನುಷ್ಯರ ಮತ್ತು ಯಂತ್ರಗಳ ನಿಯಂತ್ರಣ ತಪ್ಪಿ ಅಪಘಾತಗಳು ನಡೆಯುತ್ತಲೇ ಇರುತ್ತವೆ. ನಾಗರಿಕತೆಯು ಬೆಳೆದಂತೆ, ಜನಸಂಖ್ಯೆ ಹೆಚ್ಚಿದಂತೆ, ಅವಸರದ ಬದುಕಿನಿಂದಾಗಿ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿದೆ.

ಪುಸ್ತಕ ಭಂಡಾರಗಳು

ಪುಸ್ತಕಗಳು ಎಂದಕೂಡಲೇ ಪುಟ್ಟ ಮಕ್ಕಳು ಕಣ್ಣು ಹಾಯಿಸುತ್ತಾರೆ. ಮನೆಯ ಹೆಣ್ಣುಮಕ್ಕಳು ತಮಗೆ ಬೇಕಾದ ಮಾಹಿತಿ ಇದೆಯೆ ಎಂದು ಪುಟ ತಿರುಗಿಸುತ್ತಾರೆ. ಹಿರಿಯರು ಕಾಲಕ್ಷೇಪಕ್ಕೆಂದು ಹಲವು ಪುಸ್ತಕಗಳನ್ನು ಸಂಗ್ರಹಿಸುತ್ತಾರೆ. ಇಂಥ ನೂರಾರು, ಸಾವಿರಾರು ಪುಸ್ತಕಗಳು ಇದ್ದರೆ? ಹಾಗೆ ವಿವಿಧ ವಿಷಯಗಳ ಮೇಲೆ ನೂರಾರು ಪುಸ್ತಕಗಳನ್ನು ಸಂಗ್ರಹಿಸಿ ಸಾರ್ವಜನಿಕರಿಗಾಗಿ ಮುಕ್ತವಾಗಿರುವ ವ್ಯವಸ್ಥೆಯ್ನೇ ಪುಸ್ತಕ ಭಂಡಾರ ಎಂದು ಕರೆಯುತ್ತಾರೆ.  ಪುಸ್ತಕ Read More …

ಅರ್ಥವಿಲ್ಲದ ಓದು ವ್ಯರ್ಥ

ವಿದ್ಯಾರ್ಥಿಗಳು ಪರೀಕ್ಷೆಗಾಗಿ ಓದುತ್ತಾರೆ. ಆದರೆ ಈ ಓದಿನಲ್ಲಿ ಎದುರಾಗುವ ನೂರಾರು ವಿಷಯಗಳನ್ನು ಅವರು ಅರ್ಥ ಮಾಡಿಕೊಂಡಿದ್ದಾರೆಯೇ ಎನ್ನುವುದು ಮುಖ್ಯ. ಗಣಿತದ ಒಂದು ಸಮೀಕರಣವನ್ನು ಅರ್ಥ ಮಾಡಿಕೊಳ್ಳದೇ ಹೋದರೆ  ಅದರ ಮೇಲೆ ಕೇಳುವ ಪ್ರಶ್ನೆಗಳಿಗೆ ಆರಾಮಾಗಿ ಉತ್ತರಿಸಲು ಸಾಧ್ಯವಾಗುವುದಿಲ್ಲ. ಬದಲಿಗೆ ವಿದ್ಯಾರ್ಥಿಗಳು ಸಮಸ್ಯೆ ಹಾಗೂ ಪರಿಹಾರಗಳನ್ನು ಬಾಯಿಪಾಠ ಮಾಡಿಬೇಕಾಗುತ್ತದೆ. ಇದರಿಂದ ಏನೂ ಪ್ರಯೋಜನವಿಲ್ಲ. ಆದ್ದರಿಂದ ಅರ್ಥ ಮಾಡಿಕೊಳ್ಳದೇ Read More …

ಹಿತ್ತಲ ಗಿಡ ಮದ್ದಲ್ಲ

ಯಾವುದೋ ರೋಗಕ್ಕೆ ಕಂಡಕಂಡ ಗಿಡದ ರಸವಾಗಲೀ, ಬೇರಾಗಲೀ ಔಷಧವಾಗಲಾರದು ಎಂಬುದು ಈ ನಾಣ್ಣುಡಿಯ ಸ್ಥೂಲ ಅರ್ಥ. ಆದರೆ ಇದರ ಒಳಾರ್ಥವೇ ಬೇರೆ. ನಾವು ಯಾವುದೇ ಸಮಸ್ಯೆಗೆ ಪರಿಹಾರ ಹುಡುಕುವಾಗ ತುರ್ತು ಉಪಾಯಗಳನ್ನೇ ಹುಡುಕುತ್ತೇವೆ. ಉದಾಹರಣೆಗೆ  ಬಿದ್ದು ಗಾಯವಾದರೆ ಕೂಡಲೇ ಅದನ್ನು ತಣ್ಣೀರಿನಿಂದ ತೊಳೆದು ಅದಕ್ಕೆ ಪೌಡರ್ ಹಚ್ಚುತ್ತೇವೆ. ಆದರೆ ಹೀಗೆ ತಕ್ಷಣ ಕೈಗೆ ಸಿಕ್ಕಿದ ವಸ್ತುವನ್ನು Read More …

ಜಲ ಸಂರಕ್ಷಣೆ

ಇಂದು ಎಲ್ಲೆಡೆಯೂ ಜಲಸಂರಕ್ಷಣೆಯ ಮಾತು ಕೇಳಿಬರುತ್ತಿದೆ.  ಜಲಸಂರಕ್ಷಣೆ ಎಂದರೇನು? ಮುಂದಿನ ಪೀಳಿಗೆಗಳೂ ನಮ್ಮ ಹಾಗೆಯೇ ನೀರನ್ನು ಬಳಸುವುದಕ್ಕೆ ಅವಕಾಶ ಮಾಡಿಕೊಡುವುದೇ ಜಲಸಂರಕ್ಷಣೆ ಎಂದು ಸರಳವಾಗಿ ಹೇಳಬಹುದು. ಜಲಸಂರಕ್ಷಣೆ ಯಾಕೆ ಬೇಕು? ನಮ್ಮ ಬದುಕಿನಲ್ಲಿ ನೀರಿಲ್ಲದೆ ಏನನ್ನೂ ಮಾಡಲಾಗುವುದಿಲ್ಲ. ಇಂಥ ನೀರೇ ಸಿಗದೆ ಹೋದರೆ ಬದುಕು ಬರಡಾಗುತ್ತದೆ. ನೀರಿಗಾಗಿ ಇಂದು ಎಲ್ಲೆಡೆ ಹಾಹಾಕಾರ ಕೇಳಿಬರುತ್ತಿದ.  ನಗರಗಳಲ್ಲಿ ನೀರಿನ Read More …

ದೇಶ ಸುತ್ತು, ಕೋಶ ಓದು

ದೇಶ ಸುತ್ತು ಕೋಶ ಓದು ಎನ್ನುವುದು ನಮ್ಮ ನಾಡಿನ ಹಿರಿಯರು ರೂಪಿಸಿದ ನಾಣ್ಣುಡಿ. ಈ ಮಾತು ನಮ್ಮ ದೇಶದ ಭವ್ಯ ಪರಂಪರೆಯನ್ನು  ಸೂಚಿಸುತ್ತದೆ. ಯಾಕೆಂದರೆ ದೇಶ ಸುತ್ತುವುದು ಎಂದರೆ ಪ್ರವಾಸ ಮಾಡುವುದು; ಕೋಶ ಓದು ಎಂದರೆ ಪುಸ್ತಕಗಳನ್ನು ಓದುವುದು.  ದೇಶ ಸುತ್ತಿ ಕೋಶ ಓದುವ ಬಗ್ಗೆ ನಮ್ಮ ಹಿರಿಯರು ತಮ್ಮ ಅನುಭವದಿಂದಲೇ ಬರೆದಿದ್ದಾರೆ. ಕೋಶ ಓದಿ Read More …