ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!

ಬಾಲ್ಯದ ದಿನಗಳನ್ನು ಹಳ್ಳಿಯಲ್ಲಿಯೇ ಕಳೆದು ಈಗ ನಗರವಾಸಿಗಳಾಗಿರುವ ನನ್ನಂಥ ಹಲವರಿಗೆ ಶೌಚಾಲಯ ಎಂದರೆ ಅಚ್ಚರಿ ಮತ್ತು ಲಕ್ಷುರಿ. ಮಳೆ – ಬೇಸಗೆ – ಚಳಿಯೆನ್ನದೆ ನಾವು ಚೊಂಬು ಹಿಡಿದು ಧರೆ (ಮನೆಯ ಹಿಂಬದಿಯ ಏರು ಹತ್ತಿದರೆ ಸಿಗುವ ಕಾಡುಸಹಿತದ ಪ್ರದೇಶ) ಹತ್ತಿದರೆ ಯಾವುದೋ ದೊಡ್ಡ ಮರದ ಬುಡದಲ್ಲೋ, ಗಿಡಗಂಟಿಗಳ ಸಂದಿಯಲ್ಲೋ ನಮ್ಮ ಮಲಬಾಧೆ ತೀರಿಸಿಕೊಂಡು ಬರುವುದು Read More …

ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ

`ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ’ – ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಕರ್ನಾಟಕ ಸರ್ಕಾರವು ಈಗಲಾದರೂ ಕೈಗೊಳ್ಳಬೇಕಾದ ತುರ್ತು ಕೆಲಸಗಳಿವೆ. ಜಾಗತಿಕ ಮಟ್ಟದಲ್ಲೇ ತಂತ್ರಜ್ಞರ ನೆರವನ್ನು ಪಡೆಯುವ ಅವಕಾಶ ಇರುವ ಈ ಕಾಲಮಾನದಲ್ಲೂ ಕೆಲವೇ ವ್ಯಕ್ತಿಗಳ ಸಲಹೆ ಸೂಚನೆಗಳೇ ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಎಂದು ಸರ್ಕಾರವು ನಂಬಿರುವುದು ವಿಷಾದನೀಯ.

ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ

ಗೋವಿಂದರಾಯರ ಬದುಕಿನ ಬಗ್ಗೆ ಹೆಚ್ಚು ಬರೆಯಲು ಏನೂ ಇಲ್ಲ. ಏಕೆಂದರೆ ಅವರು ತಮ್ಮ ಜೀವಿತದ ಬಹುಪಾಲು ಕಾಲಾವಧಿಯನ್ನು  ಸರಳ ದಿನಚರಿಯಲ್ಲೇ ಕಳೆದರು. ದಿನಪತ್ರಿಕೆ ಬಿಟ್ಟರೆ ಬೇರೆ ಪುಸ್ತಕಗಳನ್ನು ಓದುವುದೇ ಕಡಿಮೆ. ಮನೆಗಾಗಿ ತರಕಾರಿ ತರುವುದು, ಮಾವಿನ ರಸಾಯನ ಮಾಡುವುದು, ಐಸ್‌ಕ್ರೀಮ್‌ ಮಾಡಿ ಫ್ರಿಜ್ಜಿನಲ್ಲಿ ಇಡುವುದು – ಇಂಥ ಮನೆಯ ಚಿಕ್ಕಪುಟ್ಟ ಕೆಲಸಗಳಲ್ಲೇ ಆತ್ಮತೃಪ್ತಿ ಹೊಂದಿದ ಜೀವ Read More …

ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ

೨೦೦೮ರ ವಿಧಾನಸಭಾ ಚುನಾವಣೆಯಲ್ಲಿ ನಾನು ಬಿ ಎಸ್‌ ಯೆಡಿಯೂರಪ್ಪನವರ ಜೊತೆಗೆ ಪ್ರವಾಸ ಮಾಡುತ್ತಿದ್ದೆ. ನನಗೆ ಅರುಣ್‌ ಜೇಟ್ಲಿ ಕೊಟ್ಟ ಕೆಲಸವೇ ಅದು. ಅವರೊಂದಿಗೆ ಸದಾ ಇರುವುದು! ಯೆಡಿಯೂರಪ್ಪನವರೂ ನನ್ನನ್ನು ಯಾವಾಗಲೂ ಪ್ರೀತಿಯಿಂದ ಕಂಡು, ಎಲ್ಲೆಡೆಗೂ ಎಡಬಿಡದೆ ಕರೆದೊಯ್ದದ್ದು ಈಗ ಹಳೆ ನೆನಪು. ಹೆಲಿಕಾಪ್ಟರ್‌ನಲ್ಲಿ ಇರೋದೇ ಆರು ಸೀಟು. ಅದರಲ್ಲಿ ಯೆಡಿಯೂರಪ್ಪನವರೊಂದಿಗೆ ನಾನು ಖಾಯಂ! ಉಳಿದಂತೆ ಆಯಾ Read More …

ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ

`ನನ್ನ ಕಚೇರಿಯಲ್ಲಿ ಯಾರಿಗಾದರೂ ಪನಿಶ್‌ಮೆಂಟ್ ಕೊಡಬೇಕು ಅಂತ ಇದ್ರೆ ಅವರಿಗೆ ವಿಂಡೋಸ್ ಆಪರೇಟೆಡ್ ಕಂಪ್ಯೂಟರ್ ಕೊಟ್ಟು ಕೂಡಿಸಿದರೆ ಆಯ್ತು!’ ತನ್ನ ಸಿಗ್ನೇಚರ್ ನಗುವನ್ನು ಬೀರುತ್ತಲೇ ರಾಧಾಕೃಷ್ಣನ್ ಹೇಳುವಾಗ ನಾನು ಪೆದ್ದುಪೆದ್ದಾಗಿ ಬರೆದುಕೊಳ್ಳುತ್ತೇನೆ. `ನೀವು ಇನ್ನೂ ವೈಸ್ವಿಗ್ (wysiwyg) ಮತ್ತು ಬಣ್ಣಬಣ್ಣದ ಪರದೆಗಳಿಂದ ಮುಕ್ತಿ ಹೊಂದಿಲ್ಲವೇ?’ ರಾಧಾಕೃಷ್ಣನ್ ಕಣ್ಣರಳಿಸಿ ಕೇಳಿದಾಗ `ಇಲ್ಲ ಸರ್, ನಾನಿನ್ನೂ ಇನ್‌ಡಿಸೈನ್ ಬಳಸುತ್ತಿದ್ದೇನೆ’ Read More …

ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!

೨೦೧೩. ಜಯನಗರದ ದೊಡ್ಡ ಹೋಟೆಲಿನಲ್ಲಿ ಕುಳಿತಿದ್ದೇನೆ. ಒಂದು ಪಾರ್ಟಿಗಾಗಿ ನನ್ನನ್ನ ಕರೆದಿದ್ದಾರೆ. ಮೊದಲು ಸ್ಟಾರ್ಟರ್‌; ತಿಳಿಹಳದಿ  ಹೋಳುಗಳ ಒಂದು ರಾಶಿ ಹೊತ್ತ ಪ್ಲೇಟು ನನ್ನ ಮುಂದಿದೆ. ಇದೇನು ಎಂದು ಕೇಳುತ್ತೇನೆ. ಪಪಾಯ ಕಾಯಿಯಿಂದ ಮಾಡಿದ ಸ್ಟಾರ್ಟರ್‌, ತುಂಬಾ ಫೇಮಸ್‌ ಎಂಬ ಉತ್ತರ ಸಿಗುತ್ತದೆ. ನಾನು ಅದರ ರುಚಿ ನೋಡುತ್ತೇನೆ. ಹುಳಿನೀರಲ್ಲಿ ತೋಯಿಸಿದ ಆ ಪಪಾಯಿ ಚೂರುಗಳು Read More …