ಪರಿಹಾರ ಪಡೆಯುವುದು ಎಂಡೋಸಲ್ಫಾನ್‌ ಸಂತ್ರಸ್ತರ ಹಕ್ಕು, ಭಿಕ್ಷೆಯಲ್ಲ

ಸರಕಾರಿ ಸ್ವಾಮ್ಯದ ಗೇರು ಅಭಿವೃದ್ಧಿ ನಿಗಮ ಸಾವಿರಾರು ಹೆಕ್ಟೇರು ಭೂಮಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲ ಎಂಡೋಸಲ್ಫಾನ್‌ ಸುರಿದ ೧೦ ಸಾವಿರಕ್ಕೂ ಅಧಿಕ ಮಕ್ಕಳು ರೋಗಗ್ರಸ್ತರಾಗಿದ್ದಾರೆ. ಆದುದರಿಂದ ಸರಕಾರದಿಂದ ಸೂಕ್ತ ಪರಿಹಾರ ಪಡೆಯುವುದು ಅವರ ಹಕ್ಕು, ಅದು ಭಿಕ್ಷೆಯಲ್ಲವೆಂದು ಸರಕಾರಿ ಅಧಿಕಾರಿಗಳು ತಿಳಿದುಕೊಳ್ಳಬೇಕಾಗಿದೆ.

ಉಡುಪಿಯ ಅಕ್ಕು -ಲೀಲಾ ಪ್ರಕರಣ: ಕೊನೆಗೂ ಸುಪ್ರೀಂಕೋರ್ಟಿಗೆ ಮಣಿದ ಕರ್ನಾಟಕ ಸರಕಾರ : ೪೨ ವರ್ಷಗಳ ನಂತರ ಸೇವೆ ಸಕ್ರಮಗೊಳಿಸಿ ಹೊರಟ ಸರಕಾರಿ ಆದೇಶ

ಉಡುಪಿ: ಸ್ಥಳೀಯ ಸರಕಾರಿ ಶಾಲೆಯೊಂದರಲ್ಲಿ ಸ್ವಚ್ಛತಾ ಸಿಬಂದಿಯಾಗಿ ದುಡಿಯುತ್ತಿದ್ದ ಶ್ರೀಮತಿ ಅಕ್ಕು ಹಾಗೂ ಶ್ರೀಮತಿ ಲೀಲಾ ಅವರಿಗೆ ೪೨ ವರ್ಷಗಳಿಂದ ಬರಬೇಕಿದ್ದ ಸಂಬಳದ ಹಣ ಹಾಗೂ ನಿವೃತ್ತಿ ಸೌಲಭ್ಯವನ್ನು ಸಂಪೂರ್ಣವಾಗಿ ಪಾವತಿಸುವಂತೇ ತಾನು ಆದೇಶ ಹೊರಡಿಸಿರುವುದಾಗಿ ಕರ್ನಾಟಕ ಸರಕಾರ ಸಲ್ಲಿಸಿದ್ದ ಅಫಿದಾವತ್ ಗಮನಿಸಿದ ಸುಪ್ರೀಂಕೋರ್ಟ್ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆಯ ಕಾರ್ಯಾಚರಣೆಯನ್ನು ಕೈಬಿಟ್ಟಿದೆ.

ಮಾರುತಿ ತಂತ್ರಾಂಶ ಅಭಿವೃದ್ಧಿ, ತೃತೀಯ ತಂಡದ ಪರಾಮರ್ಶೆ ಕುರಿತ ಪತ್ರವ್ಯವಹಾರಗಳು ಇಲ್ಲಿವೆ!

ಮಾರುತಿ ತಂತ್ರಾಂಶ ಸಂಸ್ಥೆ, ಹಾಸನ, ಇವರ ತಂತ್ರಾಂಶ ಕುರಿತಂತೆ ತಂತ್ರಾಂಶ ಸಮಿತಿಯ ಅಧ್ಯಕ್ಷರು, ಸದಸ್ಯರು, ಮತ್ತು ಐಐಐಟಿ-ಬಿ ( ಈ ಸಂಸ್ಥೆಯು ತೃತೀಯ ತಂಡವಾಗಿ ತಂತ್ರಾಂಶವನ್ನು ವ್ಯಾಲಿಡೇಟ್‌ ಮಾಡಿತ್ತು) – ಈ ಸಂಬಂಧವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನಡೆದ ಪತ್ರ ವ್ಯವಹಾರದ ಪ್ರಮುಖ ಕಂತನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. ಸಾರ್ವಜನಿಕರು, ತಂತ್ರಾಂಶ ತಜ್ಞರು ಈ ದಾಖಲೆಗಳನ್ನು Read More …

`ಬ್ಯಾಂಡ್‌ವಿಡ್ತ್‌ ಚಾಲೆಂಜಡ್‌’ ಡಾ|| ಪವನಜರಿಗೆ `ವಿಜುಯಲಿ ಚಾಲೆಂಜಡ್‌’ ಶ್ರೀನಿವಾಸಮೂರ್‍ತಿ ಪತ್ರ: ನಮ್ಮ ಬಗ್ಗೆ ತಿಳಿದಿದ್ದರೂ ನೀವು ಹೀಗೆ ಮಾಡಿದ್ದು ಸರಿಯೆ?

ಮದ್ದೂರಿನ ಹಿರಿಯ ಸಿವಿಲ್ ತೀರ‍್ಪುಗಾರರ ತೀರ‍್ಪುಮನೆಯಲ್ಲಿ ೨ನೆ ನೆರವಿಗ (SDA) ಆಗಿರುವ ಶ್ರೀ ಶ್ರೀನಿವಾಸಮೂರ್‍ತಿಯವರು ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ಸದಸ್ಯ, ಮತ್ತು ಈ ತಂತ್ರಾಂಶಗಳ ತಯಾರಿ ಸಮಯದಲ್ಲಿ ಸಮಿತಿಯ ವತಿಯಿಂದ ತಾಂತ್ರಿಕ ಮೇಲ್ವಿಚಾರಣೆ ಮಾಡುತ್ತಿದ್ದ ಡಾ|| ಯು ಬಿ ಪವನಜರಿಗೆ ಮತ್ತು ಮಾರುತಿ ತಂತ್ರಾಂಶ ಸಂಸ್ಥೆಗೆ  ಬರೆದ ಪತ್ರ ಇಲ್ಲಿದೆ. ಮುಖ್ಯವಾಗಿ ಇದು ಕರ್ನಾಟಕ Read More …

ಕರ್ನಾಟಕ ಸರ್ಕಾರದ ತಂತ್ರಾಂಶ ಅವಾಂತರ : ತಿಳಿವಳಿಕೆಗೆ ಕುರುಡು – ಪ್ರಜಾವಾಣಿಯಲ್ಲಿ ನನ್ನ ಲೇಖನ ಮತ್ತು ಇತರ ಬಳಕೆದಾರರ ಅತಿಮುಖ್ಯ ಅಭಿಪ್ರಾಯಗಳು

ಸಮಕಾಲೀನ ಸಂದರ್ಭದಲ್ಲಿ  ಕನ್ನಡಕ್ಕೆ ಅಗತ್ಯವಿರುವ ತಾಂತ್ರಿಕತೆಯ ಅರಿವು, ಪರಿಣತಿ ಇಲ್ಲದ ಸಂಸ್ಥೆ­ಯೊಂದು ಅಭಿವೃದ್ಧಿಪಡಿಸಿದ ತಂತ್ರಾಂಶವನ್ನು ಬಳಸ­ದೆಯೇ ‘ಬಳಕೆಗೆ ಯೋಗ್ಯ’ ಎಂದು ಶಿಫಾರಸು ಮಾಡಿದರೆ ಆಗುವುದಿ­ನ್ನೇನು? ಅಂಧರಿಗಿದ್ದ ಅನುಕೂಲಗಳನ್ನೆಲ್ಲ ಸ್ಥಗಿತಗೊಳಿಸುವ ವಿಕೃತ ಬ್ರೈಲ್‌ ತಂತ್ರಾಂಶ; ಆಂಡ್ರಾಯ್ಡ್‌ ಗೊತ್ತಿರುವ ಪ್ರಾಥ­ಮಿಕ ಹಂತದವರೂ ಕೆಲ ತಾಸು­ಗಳಲ್ಲಿ  ರೂಪಿಸಬಹುದಾದ ಮೊಬೈಲ್‌ ಕೀಲಿಮಣೆ;  ಒಮ್ಮೆ ವಕ್ಕರಿಸಿದರೆ ಎಂದೆಂದೂ ಬೇರೆ ಫಾಂಟ್‌ಗಳನ್ನು ಬಳ­ಸಲು ಬಿಡದ Read More …