ಚಿಮಾಮಂಡ ಎನ್ಗೋಜಿ ಅದೀಚೆ: ಅಪ್ಪಟ ದೇಸಿ ಕತೆಗಾರ್ತಿ

ಆಫ್ರಿಕಾ ಖಂಡವನ್ನು ಈಗ ಕತ್ತಲಿನ ಖಂಡ ಎಂದು ಕರೆಯುವುದೇ ತಪ್ಪು. ಎಂತೆಂಥ ಲೇಖಕರು, ಕಥೆಗಾರರು ಅಲ್ಲೀಗ ಮೂಡಿದ್ದಾರೆ. ಹೆಚ್ಚಾಗಿ ಪಾಶ್ಚಾತ್ಯ ಇಂಗ್ಲಿಶ್‌ ಸಾಹಿತ್ಯವನ್ನೇ ಓದುವ ನಾವು ಪೂರ್ವದೇಶಗಳ, ಆಫ್ರಿಕಾದ ಸಾಹಿತ್ಯವನ್ನು ಓದುವುದು ಅಪರೂಪವೇ. ನಾನಂತೂ ಆಫ್ರಿಕಾದ ಸಾಹಿತ್ಯವನ್ನು ಓದಿಯೇ ಇಲ್ಲ . ಅಚಾನಕವಾಗಿ ಪುಸ್ತಕದ ಅಂಗಡಿಯಲ್ಲಿ ಒಳ್ಳೆಯ ಕವರ್‌ಪೇಜ್‌ ಇದೆಯಲ್ಲ ಎಂದು ಅದೀಚೆಯ ಕಥಾ ಸಂಕಲನ Read More …

ನಾನ್‌ಜಿಂಗ್ ! ನಾನ್‌ಜಿಂಗ್!! : ಲೈಫು ಇಷ್ಟೇನಾ?

೨೦ನೇ ಶತಮಾನದಲ್ಲಿ ಚೀನಾದಲ್ಲಿ ನಡೆದ ನರಮೇಧಗಳಿಗೆ ಲೆಕ್ಕವಿಲ್ಲ. ಚೀನಾದ ಕಮ್ಯುನಿಸ್ಟ್ ಚಳವಳಿಯ ಪರ ಮತ್ತು ವಿರೋಧಿಗಳ ಸಾವನ್ನಷ್ಟೇ ನಾನು ಹೇಳುತ್ತಿಲ್ಲ. ಜಪಾನ್ – ಚೀನಾ ಸಮರಗಳಲ್ಲೂ ಲಕ್ಷಗಟ್ಟಳೆ ಜನ ಸತ್ತರು. ಆ ಕಾಲದಲ್ಲಿ ಜಪಾನ್ ಪೂರ್ವಜಗತ್ತಿನ ಬಲಾಢ್ಯ ಮತ್ತು ಆಕ್ರಮಣಕಾರಿ ದೇಶವಾಗಿತ್ತು. ಚೀನಾವು ಕಮ್ಯುನಿಸ್ಟ್ ಆಡಳಿತಕ್ಕೆ ಸಿಕ್ಕಿದ ಮೇಲಂತೂ ನರಮೇಧಗಳು ತಣ್ಣಗೆ ನಡೆಯತೊಡಗಿದವು. ಈ ಮಧ್ಯೆ Read More …

ಹಾರರ್, ಸಸ್ಪೆನ್ಸ್ ಥ್ರಿಲ್ಲರ್‌ಗಳ ಹೊಸ ಹೀರೋ : ನಿರ್ದೇಶಕ ಬ್ರಾಡ್ ಆಂಡರ್‌ಸನ್

ಥ್ರಿಲ್ಲರ್‌ಗಳನ್ನು ನೋಡುವಾ ಅಂತ ಇತ್ತೀಚೆಗೆ ಹುಡುಕಿದಾಗ ಸಿಕ್ಕಿದ ‘ಟ್ರಾನ್ಸ್‌ಸೈಬೀರಿಯನ್’ ಎಂಬ ಸಿನೆಮಾ ನೋಡಿ ನಾನು ತತ್ತರಿಸಿದೆ. ಬ್ರಾಡ್ ಆಂಡರ್‌ಸನ್ ನಿರ್ದೇಶನದ ಈ ಸಿನೆಮಾ ಅಪ್ಪಟ ಶಾಸ್ತ್ರೀಯ ಸಸ್ಪೆನ್ಸ್, ಆಕ್ಷನ್, ಥ್ರಿಲ್ಲರ್‌ಗಳ ಸಾಲಿಗೆ ಸೇರುತ್ತೆ. ಇನ್ನೇನು ಕೆಲವೇ ವಾರಗಳಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಪ್ರೇಮಿಗಳ ಮೇಲೆ ದಾಳಿ ಮಾಡಲಿರೋ ‘ವ್ಯಾನಿಶಿಂಗ್ ಆನ್ ದಿ ಸೆವೆನ್ಥ್ ಸ್ಟ್ರೀಟ್’ ಸಿನೆಮಾದ ನಿರ್ದೇಶಕನೂ Read More …

ನಿಂದನೆಯ ಕವಲೊಡೆದ ಚರ್ಚೆಗೆ ನನ್ನ ಪ್ರತಿಕ್ರಿಯೆ

(ವಿಜಯ ಕರ್ನಾಟಕದಲ್ಲಿ ೧೯.೮.೨೦೧೦ರಂದು ಪ್ರಕಟಿತ) ಜುಲೈ ೨೬ರಂದು ಶ್ರೀ ವಿನಾಯಕ ಕೋಡ್ಸರರವರು ‘ಕವಲು’ ಕಾದಂಬರಿಯ ಬಗ್ಗೆ ಬರೆದ ಲೇಖನಕ್ಕೆ ನಾನು ಕಳಿಸಿದ ಪ್ರತಿಕ್ರಿಯೆಯನ್ನು ಪ್ರಕಟಿಸುವ ಬದಲು, ನಾನು ಉಲ್ಲೇಖವಾಗಿ ಕಳಿಸಿಕೊಟ್ಟ ‘ಕವಲು’ ಕುರಿತು ನಾನು ನನ್ನ ವೆಬ್‌ಸೈಟಿನಲ್ಲಿ ಬರೆದ ವಿಮರ್ಶೆಯನ್ನು – ಭೈರಪ್ಪನವರ ಒಳ್ಳೆಯ ಕಾದಂಬರಿಗಳ ಬಗ್ಗೆ ಉಲ್ಲೇಖಿಸಿದ ಸಾಲುಗಳನ್ನು ಕಡಿತಗೊಳಿಸಿ – ಜುಲೈ ೨೯ರಂದು Read More …

ಎಸ್ ಎಲ್ ಭೈರಪ್ಪನವರ ‘ಕವಲು’ : ಹಳಸಲು ವಿಚಾರಗಳ ತೆವಲು

‘ಕವಲು’ ಕಾದಂಬರಿ ಬಿಡುಗಡೆಯಾಗಿ ಒಂದೇ ವಾರದಲ್ಲಿ ಮೂರು ಮರುಮುದ್ರಣಗಳನ್ನು ಕಂಡಿದೆ. ಹಾಗಾದರೆ ಅದು ಕಾದಂಬರಿಯ ಯಶಸ್ಸು ಅಲ್ಲವೆ? ಇಷ್ಟಾಗಿಯೂ ಭೈರಪ್ಪನವರು ತಮ್ಮ ಕಾದಂಬರಿಗಳ ಮೇಲೆ `ಸರಿಯಾದ’ ವಿಮರ್ಶೆ ಆಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸುವುದೇಕೆ? ಕಾದಂಬರಿಯ ಯಶಸ್ಸಿನ ಮಾನದಂಡ ಯಾವುದು? ಅದರ ಮಾರಾಟವೋ, ಓದುಗರಲ್ಲಿ ಕಾದಂಬರಿಯನ್ನು ಓದಿದ ಮೇಲೆ ಮನಸ್ಸಿನಲ್ಲಿ ನಿಲ್ಲುವ ಭಾವುಕ ಕ್ಷಣಗಳೋ, ವಿಮರ್ಶಕರು ಅಳೆದು Read More …

ಕಟಿನ್: `ಭೀಕರ’ವೂ ಕ್ಷುಲ್ಲಕವಾದ ಆ ಕ್ಷಣಗಳು…

ಎರಡನೇ ಮಹಾಯುದ್ಧ ಯಾರಿಗೆ ಗೊತ್ತಿಲ್ಲ? ಹಿಟ್ಲರ್‌ನ ಶತ್ರು – ಮಿತ್ರ ದೇಶಗಳ ನಡುವೆ ಆರೇಳು ವರ್ಷ ನಡೆದ ಈ ಯುದ್ಧದಲ್ಲಿ ಸತ್ತವರೆಷ್ಟು ಎಂಬುದೆಲ್ಲ ಈಗ ಇತಿಹಾಸ. ಜರ್ಮನಿಯ ನಾಝಿಗಳು ಸ್ಥಾಪಿಸಿದ್ದ ಯಾತನಾಶಿಬಿರಗಳನ್ನು ಯಾರು ತಾನೇ ಮರೆಯಲು ಸಾಧ್ಯ? ೧೯೯೩ರಲ್ಲಿ ಬಂದ ಸ್ಟೀವನ್ ಸ್ಪೀಲ್‌ಬರ್ಗ್ ನಿರ್ದೇಶನದ ಶಿಂಡ್ಲರ್ಸ್ ಲಿಸ್ಟ್ ಸಿನೆಮಾದಿಂದ ಹಿಡಿದು, ಕಳೆದ ವರ್ಷ ಬಂದ ದಿ Read More …