ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!

ಮಿಂಚಂಚೆ ಅರ್ಥಾತ್‌ ಈಮೈಲ್  ಹುಟ್ಟಿದ್ದು ಯಾವಾಗ? ಅದನ್ನು ಕಂಡು ಹಿಡಿದವರು ಯಾರು? ಈ ಪ್ರಶ್ನೆಗಳನ್ನು ನಾನು ಈಗ ಕೇಳುತ್ತಿರೋದೇಕೆ, ಅಷ್ಟೂ ಗೊತ್ತಿಲ್ಲವೆ ಎಂದು ಮೂಗು ಮುರಿಯಬೇಡಿ. ನಾನೂ ನಿಮ್ಮಂತೆಯೇ  ರೇ ಟೋಮಿಲ್‌ಸನ್‌ ಎಂಬಾತನೇ ಈಮೈಲ್‌ ಜನಕ ಎಂದು ಭಾವಿಸಿದ್ದೆ ಮತ್ತು ೨೦೦೨ರಲ್ಲಿ ವಿಜಯ ಕರ್ನಾಟಕದಲ್ಲಿ ಇದ್ದಾಗ ಅಂಥದ್ದೊಂದು ಲೇಖನವನ್ನೂ ಪ್ರಕಟಿಸಿದ್ದೆ. ಆದರೆ `ದಿ ಈಮೈಲ್‌ ರೆವೊಲುಶನ್‌: Read More …

THE ACCIDENTAL PRIME MINISTER : ಪುಸ್ತಕ ವಿಮರ್ಶೆ: `ಶಾಣ್ಯಾ’ ಸಂಜಯ ಬಾರು; `ಭೋಳ್ಯಾ’ ಡಾ||ಸಿಂಗ್‌!

ಪ್ರಧಾನಮಂತ್ರಿ, ಮುಖ್ಯಮಂತ್ರಿಯವರ ಕಚೇರಿಗಳಲ್ಲಿ ಕೆಲಸ ಮಾಡುವವರು ಅತ್ಯಂತ ಗರಿಷ್ಠ ಪ್ರಮಾಣದ ಕರ್ತವ್ಯನಿಷ್ಠೆ ಮತ್ತು ವಿಧೇಯತೆಯನ್ನು ತೋರಬೇಕು ಎನ್ನುವುದು, ನನ್ನ ಪುಟ್ಟ ಅನುಭವ. ಗೌಪ್ಯತೆಯ ಬಗ್ಗೆ ಬೇರೆ ಹೇಳಬೇಕೆ? ಇಂಥ ಸೇವೆಗಳಲ್ಲಿ ಇದ್ದಾಗ ವ್ಯಕ್ತಿಗಳನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿರುತ್ತದೆ. ಅದನ್ನೇ ನಮ್ಮ ಹೆಚ್ಚುಗಾರಿಕೆ ಎಂದು ತಿಳಿದುಕೊಳ್ಳುವುದು ಸರಿಯಲ್ಲ. ಹೀಗೆ ವ್ಯವಸ್ಥೆಯ ಮೇಲ್ಪದರದಲ್ಲಿ ಇರುವ ಉದ್ಯೋಗಿಗಳೂ ಗೌಪ್ಯತೆಗೆ Read More …

ಸ್ವರ್ಣಭರಿತ ದೇಗುಲದ ಶಿಲಾಮೂಲ: ರೋಚಕ ಸಂಶೋಧನೆಯ ಕೃತಿ ‘ಅಳಿವಿಲ್ಲದ ಸ್ಥಾವರ’

ತಿರುವನಂತಪುರದ ಶ್ರೀ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಯಾರಿಗೆ ಗೊತ್ತಿಲ್ಲ? ಇತ್ತೀಚೆಗೆ ಈ ದೇಗುಲದ ಕೋಣೆಗಳಲ್ಲಿ ಪತ್ತೆಯಾದ ಅಪಾರ ಸ್ವಣ-ವಜ್ರಾಭರಣಗಳ ಕಥೆಯನ್ನು ನೀವೆಲ್ಲ ಕೇಳಿಯೇ ಇರುತ್ತೀರಿ. ಈ ಸಂಪತ್ತಿನ ಪ್ರಾಚೀನತೆಯ ಮೌಲ್ಯವನ್ನೂ ಲೆಕ್ಕ ಹಾಕಿದರೆ, ಈ ದೇವಸ್ಥಾನವು ಪ್ರಪಂಚದ ಅತಿ ಶ್ರೀಮಂತ ದೇವಸ್ಥಾನವಾಗುತ್ತದೆ ಎಂದೇ ತಜ್ಞರು ಹೇಳುತ್ತಾರೆ. ಆದರೆ…

‘ವಿಶ್ವ ಎನ್ನುವ ವಿಸ್ಮಯ’ ಪುಸ್ತಕ ವಿಮರ್ಶೆ : ಅಚ್ಚಗನ್ನಡದಲ್ಲಿ ಬ್ರಹ್ಮಾಂಡದ ಚಿಂತನೆಗೆ ಹಚ್ಚುವ ಕೃತಿ

ನಗರಗಳ ಪ್ರಖರ ಬೆಳಕಿನಲ್ಲಿ ಕಾಣಿಸದ ಆಗಸವನ್ನು ಹಳ್ಳಿಮೂಲೆಯ ಬಯಲಿನಲ್ಲಿ ಕೂತು ನೋಡಿದರೆ ಯಾರಿಗಾದರೂ ಪ್ರಶ್ನೆ ಹುಟ್ಟಲೇಬೇಕು: ನಾನು ಯಾರು? ಈ ನಕ್ಷತ್ರಗಳು ಏಕಿವೆ? ಅವು ಹುಟ್ಟಿದ್ದೆಲ್ಲಿ? ಈ ಬ್ರಹ್ಮಾಂಡದ ಅಸ್ತಿತ್ವದ ಮೂಲವೇನು? ಇದು ಹೀಗೆ ಅನಂತದಂತೆ ಆವರಿಸಿಕೊಂಡಿದ್ದಾದರೂ ಯಾವಾಗ? ಕವಿಯಿಂದ ಹಿಡಿದು ಇತಿಹಾಸಕಾರನವರೆಗೆ ಈ ಪ್ರಶ್ನೆಗಳು ಕಾಡುತ್ತವೆ; ಮತ್ತೆ ದಿನನಿತ್ಯದ ಜಂಜಡದಲ್ಲಿ ಎಲ್ಲವನ್ನೂ ಮರೆಯಲಾಗುತ್ತದೆ.