ನಿನಗಾಗಿ

ನಿನಗಾಗಿ ಉಡುಗೊರೆಯ ತಂದಿರುವೆ ನೋಡೇ ತೆಗೆದುಕೋ ನನ್ನನ್ನೆ ಪೂರ್ಣವಾಗಿ ಸುಖಮಜಲುಗಳ ನಿನಗೆ ತೋರಿಸುವೆ ತೆರೆದರೆ ಪಡೆದುಕೋ ನನ್ನನ್ನೆ ಪೂರ್ಣವಾಗಿ. ಗತನೆನಪುಗಳ ಭಗ್ನ ಗೋಡೆಗಳ ಮರೆತುಬಿಡು ತೆಗೆದುಕೋ ನನ್ನನ್ನೆ ಪೂರ್ಣವಾಗಿ ಹಿತ ರಾತ್ರಿಗಳು , ನವಿರು ಹಗಲುಗಳು ಅರಳಲಿವೆ ಪಡೆದುಕೋ ನನ್ನನ್ನೆ ಪೂರ್ಣವಾಗಿ. ನಮ್ಮ ಸ್ನೇಹದ ನೂರು ಗಳಿಗೆಗಳು ಕಾಯುತಿವೆ ತೆಗೆದುಕೋ ನನ್ನನ್ನೆ ಪೂರ್ಣವಾಗಿ. ನಿನ್ನೊಳಗೆ ಹೊರಗೆ Read More …

ಆಪ್ಟಿಮಿಸಮ್

ಬೆರಳುಗಳ ತಟ್ಟದಿರು ಹುಡುಗಿ ನಾನು ನಡುಗುವೆ ನಿನ್ನ ಸ್ಪರ್ಶಕ್ಕೆ ಕಣ್ಣುಗಳ ಕೂಡಿಸದಿರು ಕಡುಸಂಜೆ ನಾನು ನಡುಗುವೆ ನಿನ್ನ ಪ್ರೀತಿಗೆ ಅಂಗೈ ಹಿಡಿದು ಬಿಸಿಯೇರಿದಂತೆ ನಾನು ನಡುಗುವೆ ಕಣೇ ನಿನ್ನ ಹಣೆಮುಟ್ಟಿ ಹೇಳುವೆ ಕೇಳು ನಾನು ನಡುಗುವೆ ನಿನ್ನ ಹಿತಕ್ಕೆ ನನ್ನ ಈ ಹೆದರಿಕೆಗೆ ದಿನಮಾನಗಳು ಬೆದರೋ ಹಕ್ಕಿಗಳು, ಅಳುವ ಹೃದಯಗಳು ದಿಕ್ಕಿಲ್ಲದೆ ಅದುರುವ ಹಣೆಗೆರೆಗಳು ಕಾರಣ Read More …

ಊಹೆಗಳು

ಕಾನು ಕತ್ತಲು ಬತ್ತಿ, ಧಗೆಯ ಬಿಗಿ ಹಗುರಾಗಿ, ಹೊಗೆ ಮಂಜು ಹರಡುತ್ತ ; ನೆತ್ತಿಯ ಪಕ್ಕ ಎದ್ದಿರುವ ಬೆಳ್ಳಿ ಚುಕ್ಕೆ ; ನೋಡುವಳು ಅವಳು ಹೊರಗೆ ಕಟ್ಟೆಯ ಮೇಲೆ ಕೂಡುವಳು ಹೂವ ಕಡೆಗೆ ಚಿಗುರು ನಾಚಿಕೆಯಲ್ಲಿ ಅರಳುತ್ತ, ಯೌವ್ವನದಲ್ಲಿ ನರಳುತ್ತ ; ಎಲೆಯ ತುಟಿ ತುದಿಯಲ್ಲಿ ಹನಿ. ಹನಿಯ ಮೌನದ ಬಗ್ಗೆ ಹಾಡುತ್ತ ಅಲ್ಲಿ ಅಂಗಳದಲ್ಲಿ Read More …

ನಾಳೆ ಬರಬಹುದೇ ?

ನಿನ್ನ ಗುರ್ತಿದೆ ನನಗೆ ಎದೆ ಕಳಚಿ ನಡೆದವಳೆ ಸ್ವಪ್ನಸೂಕ್ಷ್ಮದ ಸಮಯ ಬೇಡವೆಂದೆ. ಅಪಮುಹೂರ್ತದ ಹೊತ್ತು ಕಳೆದೆ ಮುತ್ತಿನ ಗುರ್ತು ಕೆನೆಮಾತು, ತುಟಿಗೀತ ತೊರೆದುಬಿಟ್ಟೆ ಸಾಲುಬೆಟ್ಟದ ನೆರಳುಸಂಜೆಗೆ ಮುನ್ನ ಕಡಿದಿದ್ದೆ ಬೆರಳು- ದಿಕ್ಕುಗಳು ತೆಕ್ಕೆಮುಕ್ಕೆ. “ಹೆಜ್ಜೆ  ಹಿತವಿಲ್ಲ ಸಖ, ನಿನ್ನ ಜತೆ ಸಾಕು” ಹೌದು ಬಿಡು ಎದೆ ಕವಾಟಕ್ಕೆ ಧಕ್ಕೆ. ಏಕಾಂತದೆದೆ ಕೊಟ್ಟು ಹೋಗಿಬಿಟ್ಟೆಯ ಹುಡುಗೀ ಹಣೆಗೆ Read More …

ಹಾಡು

ನನಗೆ ಹಾಡು ಕಚಗುಳಿಯಿಟ್ಟು ಕೇಳುವುದಿಷ್ಟ ಸ್ಪಷ್ಟ ಪದಗಳ ಕಟ್ಟು ನನಗೆ ಹಾಡು. ನೀನೂ ಹಾಡು ದನಿ ಹರಿಸುವುದಿಷ್ಟ ಕಷ್ಟವಿದೆಯೇ ಹೇಳು ? ನೀನು ಹಾಡು. ಅವಳು ಹಾಡು ತನಿ ಬೆರೆಸಿ ಎರೆಯುವಳಲ್ಲ ನಷ್ಟವಿದೆಯೇ ಹಾಡು ? ಅವಳು ಹಾಡು. ಅವರು ಹಾಡು ಹಂದರದಲ್ಲಿ ಬೆಳೆದದ್ದು ದಿಟ- ಬಯಕೆಗಳು. ಸತ್ಯವೇ ಅವರ ಹಾಡುಗಳು. ನಾವು ಹಾಡುಗಳು ಇಲ್ಲ Read More …

ಓದಬೇಡ

ನನ್ನ ಕವನ ಓದಬೇಡ ಯಾಕೆ ಗೊತ್ತ ಹುಡುಗೀ ಅಕ್ಷರಗಳ ಆಟದಲ್ಲಿ ನಾನು ಇರುವುದಿಲ್ಲ. ಪದಗಳಲ್ಲಿ ಪವನಪತ್ರ ನೋಡಿ ನಲಿಯಬೇಡ ನದಿ ಹರಿಸುವೆ, ನಾನು ತೇಲಿ ಬರುವುದಿಲ್ಲ. ಯಾವುದೋ ವಿಷಾದಗಾನ ಎದೆಯ ತೀಡಿದಾಗ ಸಖೀ ನೆಲದ ಮೇಲೆ ಮಲಗುವಾಸೆ ಅದೂ ನಡೆವುದಿಲ್ಲ. ಎಲ್ಲಿಯೋ ಕಳೆದ ನೆನಪು ಎದೆಯ ತುಂಬಿದಾಗ ಈಗ ಬಿಲ ಸೇರುವ ಬಯಕೆ ಗೊತ್ತ, ಬಯಲೆ Read More …

ನಾಳೆಯೇ ಮುಂಜಾನೆ

ಧುಮ್ಮಿಕ್ಕದಿರು ಹುಡುಗಿ ರಭಸ ಗೆಲ್ಲದು ನಿನ್ನ ಎದೆಗೆ ಒಬ್ಬಂಟಿತನ ಕೆಲವು ಸಂಜೆ. ತಟದಲ್ಲಿ ನಡೆವಾಗ ಕಣ್ಣು ತೀಡಲಿ ಗಾಳಿ ತೇಲಿಬಿಡು ವೇದನೆಗಳ ತಡವರಿಸದಿರು ಇನ್ನು ಕೆಲವೇ ಹೊತ್ತು ಕಾದಿರಿಸು ಕಾಮನೆಗಳ. ತುಟಿಯಲ್ಲಿ ತುಡಿವ ನೂರು ಏಕಾಂತಗಳು ಹಣೆಗೆ ಮುತ್ತಿಡುವಂಥ ಕಟು ದುಃಖಗಳು ಬರಲಿ ಬರಲೀ ಹುಡುಗಿ……..ಬರಲಿ ಜಾರಿಹೋಗಲಿ ನೆನಪು ಕಮರಿಯಲ್ಲಿ. ಬೆಚ್ಚಗೆ ಸುಡುವ ಹುಡುಗರು ಇರಲಿ Read More …