ಮೂರು ಜೈವಿಕ ಇಂಧನ ಹಾಡುಗಳು

1. ಜೈವಿಕ ಇಂಧನ ಚಿರಂತನ   ಹೊಂಗೆಯ ದೀಪವ ಹೊತ್ತಿಸಬನ್ನಿ ಬೇವಿನೆಣ್ಣೆಯನು ಬಸಿಯುವ ಬನ್ನಿ ಹಿಪ್ಪೆಯ ಹಿಂಡಿಯ ಬಳಸುವ ಬನ್ನಿ ಜೈವಿಕ ಇಂಧನ ಒಳ್ಳೆಯದಣ್ಣ ಡೀಸೆಲ್ ಪೆಟ್ರೋಲ್ ಎಷ್ಟು ದಿನ? ಜೈವಿಕ ಇಂಧನ ಚಿರಂತನ !

ನೀನೇನಂಥ ಮೆದು ಹುಡುಗನಲ್ಲ

ಒಂದು ಕ್ಷಣದಲ್ಲಿ ನೀನು ನನ್ನನ್ನು ಬೈದುಕೊಳ್ಳುತ್ತೀಯೆ ಎಂಥ ಕಟುಹೃದಯಿ, ಅಶಾಂತ, ನಿರ್ದಯಿ ಎದೆ ಒಳಗೆ ಘನವಾಗಿ ಹರಿಯುತ್ತಿದೆ ಯಾವುದೋ ದ್ವೇಷ.  ನೀನೇನಂಥ ಮೆದು ಹುಡುಗನಲ್ಲ, ಬರಿಯ ಕಲ್ಲು.    ಒಂದು ದಿನವೂ ನೀನು ಹೀಗೆ ಕರ್ಟನು ಸರಿಸಿದವನಲ್ಲ,  ಒಂದು ಹುಸಿಜೋಕಿಗೂ ನಕ್ಕವನಲ್ಲ,  ಬೆಳಗ್ಗೆ ಎದ್ದು ಹದವಾಗಿ ಮಾತಾಡುವುದಿಲ್ಲ ಚಾ ಕುಡಿವಾಗ ಕಣ್ಣು ವಾರೆನೋಟಕ್ಕೂ ಗತಿಯಿಲ್ಲದಂತೆ  ಪೇಪರಿಗೆ Read More …

ಅಪಾರ, ನಿನ್ನ ಜೊತೆ…

I wrote this poem as a small reaction in Apara’s blog stanzas of Madyasaara. Those poems are now a book…  ಅಪಾರ, ನಿನ್ನ ಜೊತೆ ಕೆಲವೊಮ್ಮ್ಮೆ  ನಾನೂ ಕೂತಿದ್ದೆ  ಖಾಸಾ ಖಾಸ್ ಮಾತುಗಳನ್ನು ಎಗ್ಗಿಲ್ಲದೆ ಕಿರುಚುತ್ತ ಮಾತ್ರ ಎಗ್ ಬೋಂಡಾಗಳನ್ನು ಕಚಕಚ ಜಗಿಯುತ್ತ!  ಖಂಡವಿದೆಕೋ ಎಂದು ಕತ್ತರಿಸಿಕೊಂಡ  ಅಂಜಲ್ Read More …

ಶೂನ್ಯಗಳ ಕುರಿತು

ನನ್ನ ಹಿರಿಯ ಗೆಳೆಯ, ನನ್ನೊಳಗಿನ ಕವಿಯನ್ನು ತಿದ್ದಿ ತೀಡಿದ ಕಣಜನಹಳ್ಳಿ ನಾಗರಾಜ್ ಈಗಿನ ಪೀಳಿಗೆಯ ಸಾಹಿತಿಗಳಿಗೆ ಗೊತ್ತಿಲ್ಲದ ಕವಿ. ಅವರು ಕವನದ ಮಾರುಕಟ್ಟೆಯಲ್ಲಿ ಏನಾದರೂ ಸ್ಟ್ರಾಟೆಜಿ ಮಾಡಿದ್ದರೆ ಇಷ್ಟು ಹೊತ್ತಿಗೆ ನಾಡಿನ ಪ್ರಖ್ಯಾತ ಕವಿಯಾಗುತ್ತಿದ್ದರು. ಏನೋ, ಗೊತ್ತಿಲ್ಲ, ಒಂಥರದ ನಿಗೂಢ, ಮೌನದ ಹಳ್ಳಿ ಬದುಕಿಗೆ ಹಿಂದಿರುಗಿದರು. ಅವರು ೧೯೮೪ರ ಒಂದು ಚಳಿಗಾಲದ ದಿನ ಭದ್ರಾವತಿ ಆಕಾಶವಾಣಿಯಲ್ಲಿ Read More …

ತಣ್ಣಗೆ ಮಲಗಿದೆ ರಸ್ತೆ

ಮಗು, ತಣ್ಣಗೆ ಮಲಗಿದೆ ರಸ್ತೆ, ಎಬ್ಬಿಸಬೇಡ. ಭರ್ರನೆ ಬೀಸೋ ಗಾಳಿಗೆ ಬೀಗಬೇಡ.  ಟಾರು ಗೀರುತ್ತ ಹಾಗೆ ರೊಯ್ಯನೆ ಹೋಗಬೇಡ.  ಹೆದ್ದಾರಿಯಿದು. ನಗರದುದ್ದಕ್ಕೂ ಹರಿದಿರೋ ರಕ್ತನಾಳ ಕೆಲವೊಮ್ಮೆ ಬಿಗಿಯಾಗಿ ಸುತ್ತುತ್ತೆ ನಮ್ಮನ್ನೆ.  ಉಸಿರುಗಟ್ಟಿಸೋದಿರಲಿ, ಕಪಾಲವನ್ನೇ ಒಡೆದು ಮೈಮೇಲೆ ಚೆಲ್ಲಿಕೊಳ್ಳುತ್ತೆ ಮಾಂಸ-ಮಜ್ಜನ.     ಮಗು, ತಣ್ಣಗೆ ಮಲಗಿದೆ ರಸ್ತೆ ಎಬ್ಬಿಸಬೇಡ.  ಜಡೆ ಕಟ್ಟಿ ಕುಳಿತುಕೋ, ನಿನ್ನ ಝರಿ Read More …

ಕುರುಹಿಲ್ಲದ ನೆರಳು

ಮತ್ತೆ ನೋಡಿದರೆ ಕಾಣದ ಹಾಗೆ ನೆಲದಲ್ಲೇ ಕರಗಿಹೋಗಿದ್ದ ಕುರುಹಿಲ್ಲದ ನೆರಳು ಎಲ್ಲಿಯವರೆಗೆ ಹಾದು ಹೋಗಿರಬಹುದು ಒಳಗೆ ನೆಲ ಕದಡಿರಬಹುದು, ನೀರು ತಣ್ಣಗೆ ಕೊಯ್ದಿರಬಹುದು ಅಥವಾ ಲಾವಾರಸ ಹೀಗೆ ಮುಟ್ಟಿ ಮುಟ್ಟಿ ಸುಟ್ಟಿರಬಹುದು ನನ್ನ ನೆರಳಿನ ಕೋಮಲತೆಯನ್ನು ಬರಿದೆ ಭಾವಿಸಬಾರದು ಎಂದು ಕರೆದಿದ್ದೆ ಯಾರದೋ ಹೆಸರು ನೆರಳು ಬೆರಗಾಗಬಾರದು ಎಂದು ಬರೆದಿದ್ದೆ ಎಂಥದೋ  ಹಾಳೆ ಯಾರ ಎದೆಯೊಳಗೂ Read More …

ಆಶಾ ನನ್ನ ಆಶಾ

ಎಲ್ಲಿರಬಹುದು ಈ ಆಶಾ ಎಟ್ ಯಾಹೂ ಡಾಟ್‌ಕಾಮ್ ಎಂಬ ಹುಡುಗಿ/ಹುಡುಗ/ಮುದುಕ/ಮುದುಕಿ/ಪೋರ? ಯಾವ ಕಂಪ್ಯೂಟರಿನಲ್ಲಿ ಟಕಟಕಾಯಿಸುತ್ತಿರಬಹುದು ಯಾವ ಪ್ರಾಸೆಸರಿನಲ್ಲಿ ಎಷ್ಟು ರಭಸವಾಗಿ ಧುಮ್ಮಿಕ್ಕಬಹುದು ಊಹಿಸಿದ್ದೀರ? ಎಲ್ಲಿಂದಳೋ ಬರೆಯುತ್ತಾಳೆ ಭ್ರಮಾಧೀನ ವಿಶ್ವದೊಳಗೆ ಬೆಳಕಿನಂತೇ ತೂರಿ ನನ್ನ ಮೇಜಿನ ಮೇಲೆ ಬಿದ್ದಿದೆ ಅವಳ ಮೇಲು. ಏನೋ? ನೀನು ಯಾರೋ? ಬೇಕಾ ನನ್ನ ಸ್ನೇಹ? ಬರೀತೀಯಾ ಕಾಗದ? ಕೇಳಿದ್ದಾಳೆ ಸ್ಫುಟವಾಗಿ ಎರಡೇ Read More …