ಸಂಬಂಧ : ನನ್ನ ಬದುಕಿನ ಹೈಪರ್‌ಲಿಂಕ್‌ಗಳ ಮೊದಲ ಕಥೆ ಓದಿ!

[ನಾನು ಬರೆದ ಮೊದಲನೇ ಕಥೆ ಇದು!  ಇಂದಷ್ಟೇ  – ೩೦.೯.೨೦೧೧- ನನ್ನ ಆತ್ಮೀಯ ಗೆಳೆಯನೊಬ್ಬ ಈ ಕಥೆಯನ್ನು ಪ್ರಕಟಿಸಿದ ಮಯೂರದ ಪ್ರತಿಯನ್ನು – ಆಗಸ್ಟ್‌ ೧೯೯೧-  ನಾಜೂಕಾಗಿ , ಹರಿದುಹೋದ ಹಿಂಪುಟವನ್ನೂ ಜೋಡಿಸಿ – ಕೊರಿಯರ್‌ ಮೂಲಕ ವಾಪಸು ಮಾಡಿದ. ಈಗ ನೋಡಿದರೆ ಈ ಕಥೆ ಒಂದು ರೀತಿಯಲ್ಲಿ ಕೊಲಾಜ್‌ ಕಥೆ. ನನ್ನ ಹಲವು ಕವನಗಳ, Read More …

ಒಂದು ಮುತ್ತಿನ ಕಥೆ

ಈ ಸಲ ರಾಜಿಗೆ ಸರಿಯಾಗಿ ಹೇಳಿಬಿಡಬೇಕು.ನಾಳೆ ಎಷ್ಟು ಹೊತ್ತಾದರೂ ಸರಿ, ನನ್ನ ಜೊತೆಗೆ ಕಾಲ ಕಳೆಯಲು ಬರಲೇಬೇಕೆಂದು.ಅವಳಿಗೆ ಹೇಳಲೇಬೇಕು, ನಾನು ಅವಳಿಗೆ ಒಂದು ಮುತ್ತು ಕೊಡುವುದು ಬಾಕಿ ಇದೆ ಎಂದು.ಎಷ್ಟು ದಿನ ಆಂತ ಹೀಗೆ ಕಾಯುವುದು ? ಅವಳಿಗೆ ಈಗಲಾದರೂ ಗೊತ್ತಾಗುವುದಿಲ್ವಾ ? ಹಾಗಾದರೆ ಅವಳು ನನಗೆ ದಿನಾಲೂ ಫೋನು ಮಾಡುವುದಾದರೂ ಯಾಕೆ ? ವಾರಕ್ಕೊಂದು Read More …

ನಾಯಿಬೆಲ್ಟು

ಅನಿಟಾ. ಟಿ ಬಂದ ಅಕ್ಷರಗಳೆಲ್ಲ ಟಕಾರದ್ದು ಎಂದು ತಿಳಿದೇ ಬೆಳೆದವಳು. ಈ ಡಿಜಿಟಲ್ ಕಚೇರಿಯಲ್ಲಿ ಪ್ರೊಡ್ಯೂಸರ್. ಅವಳ ಕಣ್ಣುಗಳಲ್ಲಿ ಏನಿದೆ ?  ಯಾವುದೇ ಐಟಿ ಕಚೇರಿಗೆ ಹೋಗಿ ಶೂಟಿಂಗ್ ಮಾಡಬಲ್ಲೆ ಅನ್ನೋ ಉತ್ಸಾಹ.  ಅವಳ ಉಡುಗೆ ಗರಿಗರಿ. ಒಮ್ಮೆ ಪ್ಯಾಂಟು, ಟೀ ಶರ್ಟು. ಇನ್ನೊಮ್ಮೆ ಚೂಡಿದಾರ್. ಅವಳನ್ನೂ ಸೇರಿಸ್ಕೊಂಡು ಎಲ್ಲರ ಕುತ್ತಿಗೆಯಲ್ಲಿ ನಾಯಿಬೆಲ್ಟು ಮಾತ್ರ ಜೋತುಬಿದ್ದಿರುತ್ತೆ. Read More …

ಬಿಲಾಸ

‘ನೀನೂ ಕಲಾವಿದ; ನಾನೂ ಕಲಾವಿದ. ಚೌಕಾಶಿ ಯಾಕೆ ಮಾಡ್ತೀಯ? ಕೊಡು ನಾನೂರಾಐವತ್ತು ’ ಬಲಬೀರ್ ಕಣ್ಣಲ್ಲಿ ಕಣ್ಣಿಟ್ಟು ಹೇಳಿದಾಗ ನಾನು ಮಾತಾಡಲಾಗಲಿಲ್ಲ. ಬಾನ್ಸುರಿ ಏನೆಂದು ಗೊತ್ತಿಲ್ಲದೇ ಪೀಪಿ ಥರ ಊದಬೇಕೆಂದು ಯಾವುದೋ ಭಾಷೆಯ ಯಾವುದೋ ಯುವಕ ಅವನ ಬಳಿ ವಾದಿಸುತ್ತಿದ್ದ. ಅವನ ಗೆಳತಿಯಂತೂ ಹೇಗಾದರೂ ತನ್ನ ಹುಡುಗ ಬಾನ್ಸುರಿ ಬಾರಿಸಿಯೇ ಬಾರಿಸುತ್ತಾನೆ ಎಂಬ ಹುಮ್ಮಸ್ಸಿನಲ್ಲಿ ಪರ್ಸ್ Read More …

ಹದಿನಾರನೇ ಕೆಲಸ

(Published in Hosadigantha Yugadi 2008 issue) ಇನ್ನೇನು ವಿಮಾನ ಬೆಂಗಳೂರಿನಿಂದ ಬಂದೇ ಬಿಡುತ್ತದೆ ಎಂಬಂತೆ ದೂರದ ಗೋಪುರದ ಸೂಚಕ ದೀಪವು ಗಿರಗಿರ ತಿರುಗುತ್ತ ಮಿನುಗತೊಡಗಿತು. ನಮ್ಮ ಫೋಟೋಗ್ರಾಫರ್ ಗಡಬಡಿಸಿ ಸೀದಾ ಟರ್ಮಾಕಿನತ್ತ ನಡೆದ. ದಿನದ ಮೊದಲನೇ ವಿಮಾನ ಬಂತಲ್ಲ ಎಂಬ ಕರ್ತವ್ಯಪ್ರeಯಿಂದ ಪೇದೆಗಳು ಎದ್ದು ಟೋಪಿಯನ್ನು ಸರಿಪಡಿಸಿಕೊಂಡು, ಪ್ಯಾಂಟನ್ನು ಬಿಗಿ ಮಾಡಿಕೊಳ್ಳುತ್ತ ನಿಂತರು. ಸಖಿಯರೇ Read More …

ಹಸಿರೆಲೆ,ಗಡಿಯಾರ,ಪಾಪಿನ್ಸ್

ಒಂದು ಹಸಿರು ಎಲೆ ನನ್ನ ಹಳೆ ಡೈರಿಯ ಒಳಗೆ ಕೂತಿದೆ. ನಿಮ್ಮ ಡೈರಿಯಲ್ಲೂ ಅಂಥ ಒಂದು ಎಲೆಯೋ, ಹೂವೋ, ಕಾಗದವೋ. ನಾನು ನಿಮ್ಮನ್ನು ನೋಡಿಲ್ಲ. ನಿಮ್ಮ ನೆನಪುಗಳನ್ನು ತಿಳಿದಿಲ್ಲ. ನನ್ನನ್ನು ಕ್ಷಮಿಸಿ. ನಾನು ಬದಿರೋದನ್ನ ನೀವು ಓದುತ್ತೀರಿ. ಅಷ್ಟೆ. ಅದಕ್ಕಾಗಿ ನಾನು ಆ ಹಸಿರು ಎಲೆಯ ಕಥೆಯನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುತ್ತಿದ್ದೇನೆ.

ಶಂಕರನಾರಾಯಣನ ಸೈಕಲ್ಲು ಪುರಾಣ

೧೯೮೩ರ ಅಕ್ಟೋಬರ್ ತಿಂಗಳಿನ ಮೂವತ್ತನೇ ತಾರೀಖಿನ ದಿನಚರಿ ಪುಟದಿಂದಲೇ ಈ ಕಥೆಯನ್ನು ಆರಂಭಿಸಬಹುದಾದರೆ… ಭಾನುವಾರ ಮುತ್ತಣ್ಣ. ಸೋಮವಾರ ರಾಮರಾವ್. ಮಂಗಳವಾರ ಸುಬ್ರಹ್ಮಣ್ಯ ಭಟ್. ಬುಧವಾರ ಮಂಜಣ್ಣ. ಗುರುವಾರ ಕೃಷ್ಣಾರೆಡ್ಡಿ. ಶುಕ್ರವಾರ ಮಂಗಳಗೌರಿ. ಶನಿವಾರ ಖಾಲಿ.