ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ

ಇಂದು (ಫೆಬ್ರುವರಿ ೭, ಶನಿವಾರ) ನಯನ ಸಭಾಂಗಣದಲ್ಲಿ ನಡೆದ ಕನ್ನಡ ಓಸಿಆರ್‍ ಪ್ರಾತ್ಯಕ್ಷಿಕೆ ಸಭೆಯಲ್ಲಿ ಮೂವತ್ತೈದಕ್ಕೂ ಹೆಚ್ಚು ಕನ್ನಡ ಐಟಿ ತಜ್ಞರು ಮತ್ತು ಕಾರ್ಯಕರ್ತರು ಭಾಗವಹಿಸಿ ಸಭೆಯನ್ನು ಯಶಗೊಳಿಸಿದ್ದಾರೆ. ಅವರಿಗೆಲ್ಲ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಸಭೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಓಸಿಆರ್‌ನ್ನು ಪ್ರೊ. ಎ ಜಿ ರಾಮಕೃಷ್ಣನ್‌, ಕಲೈಡೋ ಸಾಫ್ಟ್‌ವೇರ್‌ನ ಓಸಿಆರ್‌ನ್ನು ಶ್ರೀ ಪ್ರಕಾಶ್‌, Read More …

ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ

ಗೋವಿಂದರಾಯರ ಬದುಕಿನ ಬಗ್ಗೆ ಹೆಚ್ಚು ಬರೆಯಲು ಏನೂ ಇಲ್ಲ. ಏಕೆಂದರೆ ಅವರು ತಮ್ಮ ಜೀವಿತದ ಬಹುಪಾಲು ಕಾಲಾವಧಿಯನ್ನು  ಸರಳ ದಿನಚರಿಯಲ್ಲೇ ಕಳೆದರು. ದಿನಪತ್ರಿಕೆ ಬಿಟ್ಟರೆ ಬೇರೆ ಪುಸ್ತಕಗಳನ್ನು ಓದುವುದೇ ಕಡಿಮೆ. ಮನೆಗಾಗಿ ತರಕಾರಿ ತರುವುದು, ಮಾವಿನ ರಸಾಯನ ಮಾಡುವುದು, ಐಸ್‌ಕ್ರೀಮ್‌ ಮಾಡಿ ಫ್ರಿಜ್ಜಿನಲ್ಲಿ ಇಡುವುದು – ಇಂಥ ಮನೆಯ ಚಿಕ್ಕಪುಟ್ಟ ಕೆಲಸಗಳಲ್ಲೇ ಆತ್ಮತೃಪ್ತಿ ಹೊಂದಿದ ಜೀವ Read More …

ಉಡುಪಿಯ ಅಕ್ಕು -ಲೀಲಾ ಪ್ರಕರಣ: ಕೊನೆಗೂ ಸುಪ್ರೀಂಕೋರ್ಟಿಗೆ ಮಣಿದ ಕರ್ನಾಟಕ ಸರಕಾರ : ೪೨ ವರ್ಷಗಳ ನಂತರ ಸೇವೆ ಸಕ್ರಮಗೊಳಿಸಿ ಹೊರಟ ಸರಕಾರಿ ಆದೇಶ

ಉಡುಪಿ: ಸ್ಥಳೀಯ ಸರಕಾರಿ ಶಾಲೆಯೊಂದರಲ್ಲಿ ಸ್ವಚ್ಛತಾ ಸಿಬಂದಿಯಾಗಿ ದುಡಿಯುತ್ತಿದ್ದ ಶ್ರೀಮತಿ ಅಕ್ಕು ಹಾಗೂ ಶ್ರೀಮತಿ ಲೀಲಾ ಅವರಿಗೆ ೪೨ ವರ್ಷಗಳಿಂದ ಬರಬೇಕಿದ್ದ ಸಂಬಳದ ಹಣ ಹಾಗೂ ನಿವೃತ್ತಿ ಸೌಲಭ್ಯವನ್ನು ಸಂಪೂರ್ಣವಾಗಿ ಪಾವತಿಸುವಂತೇ ತಾನು ಆದೇಶ ಹೊರಡಿಸಿರುವುದಾಗಿ ಕರ್ನಾಟಕ ಸರಕಾರ ಸಲ್ಲಿಸಿದ್ದ ಅಫಿದಾವತ್ ಗಮನಿಸಿದ ಸುಪ್ರೀಂಕೋರ್ಟ್ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆಯ ಕಾರ್ಯಾಚರಣೆಯನ್ನು ಕೈಬಿಟ್ಟಿದೆ.

ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ

೨೦೦೮ರ ವಿಧಾನಸಭಾ ಚುನಾವಣೆಯಲ್ಲಿ ನಾನು ಬಿ ಎಸ್‌ ಯೆಡಿಯೂರಪ್ಪನವರ ಜೊತೆಗೆ ಪ್ರವಾಸ ಮಾಡುತ್ತಿದ್ದೆ. ನನಗೆ ಅರುಣ್‌ ಜೇಟ್ಲಿ ಕೊಟ್ಟ ಕೆಲಸವೇ ಅದು. ಅವರೊಂದಿಗೆ ಸದಾ ಇರುವುದು! ಯೆಡಿಯೂರಪ್ಪನವರೂ ನನ್ನನ್ನು ಯಾವಾಗಲೂ ಪ್ರೀತಿಯಿಂದ ಕಂಡು, ಎಲ್ಲೆಡೆಗೂ ಎಡಬಿಡದೆ ಕರೆದೊಯ್ದದ್ದು ಈಗ ಹಳೆ ನೆನಪು. ಹೆಲಿಕಾಪ್ಟರ್‌ನಲ್ಲಿ ಇರೋದೇ ಆರು ಸೀಟು. ಅದರಲ್ಲಿ ಯೆಡಿಯೂರಪ್ಪನವರೊಂದಿಗೆ ನಾನು ಖಾಯಂ! ಉಳಿದಂತೆ ಆಯಾ Read More …

ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ

`ನನ್ನ ಕಚೇರಿಯಲ್ಲಿ ಯಾರಿಗಾದರೂ ಪನಿಶ್‌ಮೆಂಟ್ ಕೊಡಬೇಕು ಅಂತ ಇದ್ರೆ ಅವರಿಗೆ ವಿಂಡೋಸ್ ಆಪರೇಟೆಡ್ ಕಂಪ್ಯೂಟರ್ ಕೊಟ್ಟು ಕೂಡಿಸಿದರೆ ಆಯ್ತು!’ ತನ್ನ ಸಿಗ್ನೇಚರ್ ನಗುವನ್ನು ಬೀರುತ್ತಲೇ ರಾಧಾಕೃಷ್ಣನ್ ಹೇಳುವಾಗ ನಾನು ಪೆದ್ದುಪೆದ್ದಾಗಿ ಬರೆದುಕೊಳ್ಳುತ್ತೇನೆ. `ನೀವು ಇನ್ನೂ ವೈಸ್ವಿಗ್ (wysiwyg) ಮತ್ತು ಬಣ್ಣಬಣ್ಣದ ಪರದೆಗಳಿಂದ ಮುಕ್ತಿ ಹೊಂದಿಲ್ಲವೇ?’ ರಾಧಾಕೃಷ್ಣನ್ ಕಣ್ಣರಳಿಸಿ ಕೇಳಿದಾಗ `ಇಲ್ಲ ಸರ್, ನಾನಿನ್ನೂ ಇನ್‌ಡಿಸೈನ್ ಬಳಸುತ್ತಿದ್ದೇನೆ’ Read More …

ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!

೨೦೧೩. ಜಯನಗರದ ದೊಡ್ಡ ಹೋಟೆಲಿನಲ್ಲಿ ಕುಳಿತಿದ್ದೇನೆ. ಒಂದು ಪಾರ್ಟಿಗಾಗಿ ನನ್ನನ್ನ ಕರೆದಿದ್ದಾರೆ. ಮೊದಲು ಸ್ಟಾರ್ಟರ್‌; ತಿಳಿಹಳದಿ  ಹೋಳುಗಳ ಒಂದು ರಾಶಿ ಹೊತ್ತ ಪ್ಲೇಟು ನನ್ನ ಮುಂದಿದೆ. ಇದೇನು ಎಂದು ಕೇಳುತ್ತೇನೆ. ಪಪಾಯ ಕಾಯಿಯಿಂದ ಮಾಡಿದ ಸ್ಟಾರ್ಟರ್‌, ತುಂಬಾ ಫೇಮಸ್‌ ಎಂಬ ಉತ್ತರ ಸಿಗುತ್ತದೆ. ನಾನು ಅದರ ರುಚಿ ನೋಡುತ್ತೇನೆ. ಹುಳಿನೀರಲ್ಲಿ ತೋಯಿಸಿದ ಆ ಪಪಾಯಿ ಚೂರುಗಳು Read More …