ವಿದ್ಯಾರ್ಥಿಗಳು ಪರೀಕ್ಷೆಗಾಗಿ ಓದುತ್ತಾರೆ. ಆದರೆ ಈ ಓದಿನಲ್ಲಿ ಎದುರಾಗುವ ನೂರಾರು ವಿಷಯಗಳನ್ನು ಅವರು ಅರ್ಥ ಮಾಡಿಕೊಂಡಿದ್ದಾರೆಯೇ ಎನ್ನುವುದು ಮುಖ್ಯ. ಗಣಿತದ ಒಂದು ಸಮೀಕರಣವನ್ನು ಅರ್ಥ ಮಾಡಿಕೊಳ್ಳದೇ ಹೋದರೆ  ಅದರ ಮೇಲೆ ಕೇಳುವ ಪ್ರಶ್ನೆಗಳಿಗೆ ಆರಾಮಾಗಿ ಉತ್ತರಿಸಲು ಸಾಧ್ಯವಾಗುವುದಿಲ್ಲ. ಬದಲಿಗೆ ವಿದ್ಯಾರ್ಥಿಗಳು ಸಮಸ್ಯೆ ಹಾಗೂ ಪರಿಹಾರಗಳನ್ನು ಬಾಯಿಪಾಠ ಮಾಡಿಬೇಕಾಗುತ್ತದೆ. ಇದರಿಂದ ಏನೂ ಪ್ರಯೋಜನವಿಲ್ಲ. ಆದ್ದರಿಂದ ಅರ್ಥ ಮಾಡಿಕೊಳ್ಳದೇ ಓದುವುದು ಯಾವ ಪ್ರಯೋಜನಕ್ಕೂ ಬಾರದು ಎನ್ನುವುದು ಈ ಗಾದೆ ಮಾತಿನ ತಾತ್ಪರ್ಯ. 

ವಿದ್ಯಾರ್ಥಿಗಳು ಯಾವುದೇ ವಿಷಯವನ್ನು ಅರ್ಥ ಮಾಡಿಕೊಂಡರೆ ಅವರಿಗೆ ಮುಂದಿನ ವೃತ್ತಿಜೀವನದಲ್ಲಿ ಯಶಸ್ಸು ಸಿಗುತ್ತದೆ. ಬದುಕಿನಲ್ಲಿ ಬರುವ ಹಲವಾರು ಸಮಸ್ಯೆಗಳಿಗೆ ಪುಸ್ತಕಗಳಿಂದಲೇ ಪರಿಹಾರ ಸಿಗುತ್ತದೆ ಎನ್ನುವುದು ನಿಜ. ಕೇವಲ ವಿeನ, ತಂತ್ರeನವಷ್ಟೇ ಅಲ್ಲ, ಸಾಮಾಜಿಕ ಸಮಸ್ಯೆಗಳಿಗೆ, ಆರೋಗ್ಯದ ಸಮಸ್ಯೆಗಳಿಗೆ ಪುಸ್ತಕಗಳಲ್ಲಿ ಉತ್ತರ ಇರುತ್ತದೆ. ಆದ್ದರಿಂದ ಪುಸ್ತಕಗಳನ್ನು  ಕೇವಲ ಪರೀಕ್ಷೆಯ ಕಾರಣಕ್ಕಾಗಿ ಓದದೇ ಅರ್ಥ ಮಾಡಿಕೊಳ್ಳಬೇಕು. ಆಗ ಪ್ರಶ್ನೆಗಳಿಗೆ ಉತ್ತರ ನೀಡುವುದು ಒಂದು ಸಮಸ್ಯೆ ಆಗುವುದಿಲ್ಲ. ಪರೀಕ್ಷೆಯಲ್ಲೂ ಗೆಲ್ಲಬಹುದು ; ಬದುಕಿನಲ್ಲೂ ಚೆನ್ನಾಗಿ ಇರಬಹುದು.

Please follow and like us: