Characters: Skull Mantra

Characters: Skull Mantra


ಶಾನ್: ಕಾದಂಬರಿಯ ನಾಯಕ. ಅತ್ತ ಅಪ್ಪನೂ ಸಿಗದೆ, ಇತ್ತ ಮಗನನ್ನೂ ಕಾಣದೆ ಜೈಲಿನಲ್ಲಿ ಕೊಳೆಯುತ್ತಿರುವ ಮಾಜಿ ತನಿಖಾ ಅಧಿಕಾರಿ. ಟಿಬೆಟ್ ಸಂಸ್ಕೃತಿ ಬಗ್ಗೆ ಭಾವುಕ.
ತಾನ್: ಲ್ಹಾದ್ರಂಗ್ ಕೌಂಟಿಯ ಕರ್ನಲ್. ಮುಂಗೋಪಿ, ಅತಿ ಧೂಮಪಾನಿ. ಮುಖದಲ್ಲಿ ಕಾಣುವ ಅಸಹನೆಯಂತೆಯೇ ಎದೆಯೊಳಗೆ ಕಾರ್ಯನಿಷ್ಠೆ. ಬೆದರಿಸಿಯಾದರೂ ಶಾನ್ ಮೂಲಕ ಕೊಲೆ ವರದಿ ಸಿದ್ಧಪಡಿಸಲು ಮುಂದಾಗುವ ಮುದುಕ.
ಕೋ : ಕರ್ನಲ್ ತಾನ್‌ನ ಸಹಾಯಕಿ
ಹು : ಗಣಿ ಸಚಿವಾಲಯದ ನಿರ್ದೇಶಕ. ಮಾತು ಕಡಮೆ.
ತ್ರಿನ್ಲೆ : ಹಿರಿಯ ಲಾಮಾ. ಬಾಣದ ಮಂತ್ರ ಜಪಿಸಿ ಹಾರಿಹೋಗುವ ಭಿಕ್ಷು.
ತ್ಸೊಮೋ : ಕುರಿ ಕಾಯುವ ಕಾಯಕದ ಯುವ ಭಿಕ್ಷು. ಮುಂದೆ ಮಹಾನ್ ವಿರಕ್ತನ ಪಟ್ಟ ಸೇರಿರುವ ಪಂಡಿತ.
ಜೆ : ಇನ್ನೊಬ್ಬ ಹಿರಿಯ ಲಾಮಾ. ಎಲ್ಲರ ಗೌರವಕ್ಕೆ ಪಾತ್ರ.
ಯೆಶೆ: ಸೆರೆಮನೆಯಿಂದ ಹೊರಗೆ ಬಂದು ಕೆಲಸಕ್ಕೆ ಸೇರುವ ಕನಸು ಹೊತ್ತ ಟಿಬೆಟನ್ ಯುವಕ. ಶಾನ್‌ನ ಸಹಾಯಕ. ಟಿಬೆಟನ್ ನಂಬಿಕೆಗಳನ್ನು ಸದಾ ನಂಬುವ ಪಥಭ್ರಷ್ಟ ಭಿಕ್ಷು.
ಲೀ ಐದಾಂಗ್: ಕಿರುಗಣ್ಣಿನಲ್ಲೇ ಎಲ್ಲ ಬಲ್ಲೆ ಎಂದು ಸೂಚಿಸುವ  ಲ್ಹಾದ್ರಂಗ್ ಪ್ರಾಂತದ ಸಹ ಪ್ರಾಸಿಕ್ಯೂಟರ್. ಹರಿತ ಮುಖದಲ್ಲಿ ಎಂಥವರನ್ನೂ ಮೋಡಿ ಮಾಡುವ ಖಚಿತತೆ.
ಫೆಂಗ್: ದಪ್ಪ ದೇಹದ ಟ್ರಕ್ ಡ್ರೈವರ್. ಕೊನೆಗೂ ಆತ ತನ್ನ ಅಜ್ಜನಿಗೆ ಕಾಗದ ಬರೆದೇಬಿಟ್ಟ: `ಅಜ್ಜ, ನಿನ್ನ ಬೆನ್ನೇರುವಾಸೆ.’
ರೆಬೆಕ್ಕಾ ಫೋಲರ್ : ಟಿಬೆಟಿನಲ್ಲಿ ಬೆದರಿದ ಹರಿಣಿ. ಭಯಗ್ರಸ್ತ ಬದುಕಿನಲ್ಲಿ ಸಾಂತ್ವನ ಹುಡುಕುತ್ತ ಅಲೆಯುತ್ತಿರುವ ಗಣಿ ವ್ಯವಸ್ಥಾಪಕಿ.
ಟೇಲರ್ ಕಿಂಕೇಡ್: ಗಣಿಯ ಇಂಜಿನಿಯರ್, ಆಥವಾ ಪರ್ವತಾರೋಹಿ! ಹಾರ್ಮೋನಿಕಾದಲ್ಲಿ ಹಾಡುವ ಖುಷಿಯೇ ಅವನ ದಿನಚರಿ.
ಡಾಸುಂಗ್: ಬೀಜಿಂಗ್ ವಿಶ್ವವಿದ್ಯಾಲಯದಲ್ಲಿ ಓದಿ ಬಂದ ವೈದ್ಯೆ.
ಸಂಗ್‌ಪೋ : ಈ ಭಿಕ್ಷು ಮಾತಾಡಲಾರ. ಸದಾ ಕೂತ ಸ್ಥಿತಿಯಲ್ಲೇ ಧ್ಯಾನ. ಕೊಲೆ ಮಾಡಿದ ತಪ್ಪು ಒಪ್ಪಿಕೊಳ್ಳುವುದೂ ಇಲ್ಲ.
ಜಿಗ್ಮೆ : ಸಂಗ್‌ಪೋನ ಪ್ರತಿಬಿಂಬ.

Leave a Reply