ಉಡುಪಿಯ ಅಕ್ಕು -ಲೀಲಾ ಪ್ರಕರಣ ನ್ಯಾಯಾಂಗ ನಿಂದನೆಯ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕರ್ನಾಟಕ ಸರಕಾರದ ಪರದಾಟ 42 ವರ್ಷಗಳ ಬದಲಿಗೆ ಕೇವಲ 5 ವರ್ಷಗಳ ವೇತನ ನೀಡುವ ಹುನ್ನಾರ

ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ 

ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯಉಡುಪಿ – ೫೭೬೧೦೨

ಪತ್ರಿಕಾ ಪ್ರಕಟಣೆ | ೯ ಡಿಸೆಂಬರ್‌ ೨೦೧೩ 

ಉಡುಪಿಯ ಅಕ್ಕು -ಲೀಲಾ ಪ್ರಕರಣ

ನ್ಯಾಯಾಂಗ ನಿಂದನೆಯ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕರ್ನಾಟಕ ಸರಕಾರದ ಪರದಾಟ:  ೪೨ ವರ್ಷಗಳ ಬದಲಿಗೆ ಕೇವಲ ೫ ವರ್ಷಗಳ ವೇತನ ನೀಡುವ ಹುನ್ನಾರ

ಉಡುಪಿದೇಶದ ಜನತೆಯೇ ತಲೆತಗ್ಗಿಸುವಂತೇ ಮಾಡಿದ್ದ ಉಡುಪಿಯ ಅಕ್ಕು ಲೀಲಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಸ್ಪಷ್ಟ ಆದೇಶವನ್ನು ಸುಮಾರು ೪ ವರ್ಷಗಳಾದರೂ ಪಾಲಿಸದಿರುವ ಕರ್ನಾಟಕ ಸರಕಾರದ ಅಽಕಾರಿಗಳು ನ್ಯಾಯಾಂಗ ನಿಂದನೆಯ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಳೆದೊಂದು ವಾರದಿಂದ ಪರದಾಡುತ್ತಿದ್ದಾರೆ.

ತಾತ್ಕಾಲಿಕ ಪರಿಹಾರ ?

೧೯೯೮ ರಿಂದ ೨೦೦೩ರ ಮಾರ್ಚ್ ತಿಂಗಳ ವರೆಗಿನ ಮೂಲ ವೇತನದ ಆಧಾರದಲ್ಲಿ ಐದು ವರ್ಷಗಳ ವೇತನ ನೀಡುವಂತೆ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಎಸ್.ಬಿಪಟಗಾರ್ ಇದೀಗ ಆದೇಶಿಸಿದ್ದಾರೆಈ ಮೂಲಕ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆಅಕ್ಕು – ಲೀಲಾರವರು ನೀಡಿರುವ ಹಿಂದಿನ ಸೇವೆಯನ್ನು ಖಾಯಂಗೊಳಿಸುವ ಯಾವುದೇ ಕ್ರಮವನ್ನು ಅಧಿಕಾರಿಗಳು ಕೈಗೊಳ್ಳದಿರುವ ಇಲಾಖೆ ಕಳೆದ ೪೨ ವರ್ಷಗಳ ಸೇವಾವಧಿಯಲ್ಲಿ ಬಾಕಿ ಉಳಿಸಿಕೊಂಡಿರುವ ವೇತನ ಬಿಡುಗಡೆ ಮಾಡದೆ ಇರುವುದನ್ನೂ ಗಮನಿಸಲಾಗಿದೆ.

ಈ ಕುರಿತು ಕೂಡಲೇ ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗುವುದು.

ನ್ಯಾಯಾಂಗ ನಿಂದನಾ ದಾವೆ

ಕಳೆದ ೪ ವರ್ಷಗಳಿಂದಲೂ ಸುಪ್ರೀಂ ಕೋರ್ಟಿನ ಆದೇಶವನ್ನು ಪಾಲಿಸದ ಸರಕಾರದ ಉದ್ಧಟತನವನ್ನು ಪ್ರಶ್ನಿಸಿ ಉಡುಪಿಯ ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನವು ಇದುವರೆಗೆ ೨೫ಕ್ಕೂ ಹೆಚ್ಚಿನ ಲೇಖನಗಳನ್ನು ಪ್ರಕಟಿಸಿ,ವಿಚಾರ ಸಂಕೀರ್ಣಗಳನ್ನು ಸಂಘಟಿಸಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಪ್ರಯತ್ನಿಸಿತುಕಳೆದೆರಡು ದಶಕಗಳಿಂದ ಉಡುಪಿ ಕ್ಷೇತ್ರವನ್ನು ಪ್ರತಿನಿಽಸುತ್ತಿದ್ದ ಮಂತ್ರಿಗಳು ಹಾಗೂ ಶಾಸಕರು ಈ ಕುರಿತು ಬರೇ ಆಶ್ವಾಸನೆಗಳನ್ನೇ ನೀಡುತ್ತಾ ಬಂದಿದ್ದರು.

ವಿವಿಧ ನ್ಯಾಯಾಲಯಗಳ ಯಾವ ತೀರ್ಪಿಗೂ ಮಣಿಯದ ಶಿಕ್ಷಣ ಇಲಾಖೆಯ ಮಂತ್ರಿ ಹಾಗೂ ಅಽಕಾರಿ ವರ್ಗದವರು ಮೇಲ್ಮನವಿಅಂತರ್ ಇಲಾಖಾ ಪತ್ರವ್ಯವಹಾರದಾಖಲೆಗಳ ಅಲಭ್ಯತೆ ಮುಂತಾದ ತಂತ್ರಗಳಿಂದ ಕಾಲಹರಣ ಮಾಡುತ್ತಲೆ ಬಂದಿದ್ದರು.

ಕಳೆದ ಜೂನ್ ತಿಂಗಳಲ್ಲಿ ಈ ಕುರಿತು ಸುಪ್ರೀಂ ಕೋರ್ಟಿನಲ್ಲಿ ನ್ಯಾಯಾಂಗ ನಿಂದನಾ ದಾವೆ ಸಲ್ಲಿಸಲಾಯಿತು.ತೀರ್ಪನ್ನು ಕಾರ್ಯಗತಗೊಳಿಸಲು ಸುಪ್ರೀಂಕೋರ್ಟು ಸೆಪ್ಟಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಅವಧಿ ನೀಡಿದ್ದರೂ ಪ್ರಯೋಜನವಾಗದಿದ್ದಾಗ ಇದೀಗ ಅಂತಿಮ ಎಚ್ಚರಿಕೆಯನ್ನು ನೀಡಿದೆಯಾವುದೇ ಕ್ಷಣದಲ್ಲಿ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಹಾಗೂ ಸಂಬಂಧಿತ ಅಧಿಕಾರಿಗಳ ಬಂಧನದ ಆದೇಶ ಹೊರಡುವ ಸುಳಿವನ್ನು ಪಡೆದಿರುವ ಅಧಿಕಾರಿಗಳು ಇದೀಗ ಎಚ್ಚತ್ತು ಏನು ಮಾಡುವುದೆಂದು ತಿಳಿಯದೇ ಪರದಾಡುತ್ತಿದ್ದಾರೆ.

ಪ್ರಕರಣದ ಹಿನ್ನೆಲೆ

ರಾಜ್ಯ ಶಿಕ್ಷಣ ಇಲಾಖೆಯಿಂದ ನಡೆಸಲ್ಪಡುತ್ತಿರುವ ಉಡುಪಿಯ ಸರಕಾರಿ ಹೆಣ್ಮಕ್ಕಳ ತರಬೇತಿ ಕೇಂದ್ರ (ಟ್ರೈನಿಂಗ್ ಶಾಲೆ ದಲ್ಲಿ ಸುಮಾರು ೪೦ ವರ್ಷಗಳ ಕಾಲ ತಾತ್ಕಾಲಿಕ ನೆಲೆಯಲ್ಲಿ ತಿಂಗಳಿಗೆ ಬರೇ ೧೫ ರೂಪಾಯಿ ಮೂಲವೇತನದಲ್ಲಿ ಸ್ವಚ್ಛತಾ ಸಿಬಂದಿಯಾಗಿ ದುಡಿದ ಶ್ರೀಮತಿ ಅಕ್ಕು ಹಾಗೂ ಶ್ರೀಮತಿ ಲೀಲಾ ೨೦೧೧ರಲ್ಲಿ ನಿವೃತ್ತಿಯಾದರು.

ತಮ್ಮ ಸೇವೆಯನ್ನು ಖಾಯಂಗೊಳಿಸಿರಿ ಹಾಗೂ ಇತರ ನೌಕರರಂತೇ ತಮಗೆ ಪೂರ್ಣ ವೇತನ ನೀಡಿರಿ ಎಂದು ಅಕ್ಕು – ಲೀಲಾ ಮಾಡಿದ ಎಲ್ಲಾ ಮನವಿಗಳು ವ್ಯರ್ಥವಾದವು.

೧೯೮೪ರ ಮೊದಲು ನಿರಂತರವಾಗಿ ೧೦ ವರ್ಷಗಳಿಗಿಂತಲೂ ಹೆಚ್ಚಿನ ಅವಽಗೆ ಸೇವೆ ನೀಡಿದ ಎಲ್ಲಾ ತಾತ್ಕಾಲಿಕ ನೌಕರರನ್ನು ಖಾಯಂಗೊಳಿಸಬೇಕು ಎಂದು ಸ್ಪಷ್ಟವಾದ ಸರಕಾರಿ ಆದೇಶವಿದ್ದರೂ ಅಕ್ಕು – ಲೀಲಾರ ಮನವಿಗಳೆಲ್ಲವನ್ನೂ ತಿರಸ್ಕರಿಸಲಾಯಿತು.

೧೯೯೮ರಲ್ಲಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮಾರ್ಗದರ್ಶನದಲ್ಲಿ ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ ದೂರು ನೀಡಿದ ಅಕ್ಕು ಲೀಲಾ ರನ್ನು ಶಿಕ್ಷಣ ಇಲಾಖೆ ಸೇವೆಯಿಂದಲೇ ವಜಾ ಮಾಡಿತು.ಸಂಬಳ ಪಡೆಯದೇ ಇದ್ದರು ಅಕ್ಕು ಲೀಲಾ ತಮ್ಮ ಸೇವೆಯನ್ನು ತಪ್ಪದೇ ನಿರ್ವಹಿಸುತ್ತಿದ್ದರು೨೦೦೩ ರಲ್ಲಿ ಈ ಪ್ರಕರಣದಲ್ಲಿ ತೀರ್ಪು ನೀಡಿದ ನ್ಯಾಯಮಂಡಳಿ ಇವರೀರ್ವರ ಸೇವೆಯನ್ನು ಖಾಯಂಗೊಳಿಸಿ ೧೯೭೧ ರಿಂದಲೂ ಅವರಿಗೆ ಇತರರಂತೆ ವೇತನ ಪಾವತಿಸಲು ಆದೇಶಿಸಿತು.

ಈ ಆಜ್ಞೆಯನ್ನು ಪ್ರಶ್ನಿಸಿ ದಾವೆ ಹೂಡಿದ ಕರ್ನಾಟಕ ಸರಕಾರದ ವಾದವನ್ನು ತಿರಸ್ಕರಿಸಿದ ಕರ್ನಾಟಕ ಹೈಕೋರ್ಟ್ ೨೦೦೪ರಲ್ಲಿ ಸ್ಪಷ್ಟವಾದ ಆದೇಶ ನೀಡಿ ಆಡಳಿತ ನ್ಯಾಯ ಮಂಡಳಿಯು ನೀಡಿದ ಆಜ್ಞೆಯನ್ನೇ ಪಾಲಿಸುವಂತೇ ಸೂಚಿಸಿತ್ತು.

ಇದೀಗ ಪ್ರಕರಣವನ್ನು ಸುಪ್ರೀಂ ಕೋರ್ಟಿಗೆ ಕೊಂಡೊಯ್ದ ಕರ್ನಾಟಕ ಸರಕಾರ ಅಲ್ಲೂ ಮುಖಭಂಗವನ್ನು ಎದುರಿಸಿತ್ತು೨೦೧೦ರ ಜನವರಿ ತಿಂಗಳಲ್ಲಿ ಅಂತಿಮ ಆದೇಶ ನೀಡಿದ ಸುಪ್ರೀಂ ಕೋರ್ಟ್ ಅಕ್ಕು – ಲೀಲಾರ ಸೇವೆಯನ್ನು ಖಾಯಂಗೊಳಿಸಿ ಅವರ ಸೇವೆಗೆ ೧೯೭೧ರಿಂದಲೂ ಪೂರ್ಣ ವೇತನ ನೀಡುವಂತೇ ಸೂಚಿಸಿತ್ತು.

ಡಾರವೀಂದ್ರನಾಥ್ ಶ್ಯಾನುಭಾಗ್

ಅಧ್ಯಕ್ಷರು

ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ (ರಿ.)

ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯಉಡುಪಿ – ೫೭೬೧೦೨

ದೂರವಾಣಿ೮೯೭೧೦೩೩೫೮೨

ಲಗತ್ತಿಸಿದೆ

ಶ್ರೀ ಎಸ್ಬಿಪಟಗಾರಅಧೀನ ಕಾರ್ಯದರ್ಶಿ (ಸಾಮಾನ್ಯ), ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಇವರು ದಿನಾಂಕ ೫.೧೨.೨೦೧೩ ರಂದು (ಉಲ್ಲೇಖ ಇಡಿ ಪಿಟಿಐ ೨೦೧೨ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ನಿರ್ದೇಶಕರಿಗೆ ಬರೆದ ಪತ್ರ

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ನಿರ್ದೇಶಕರು ದಿನಾಂಕ ೬.೧೨.೨೦೧೩ರಂದು(ಉಲ್ಲೇಖಶಿತ ೬ ಖಾಯಂ ಸೇವೆ ೨೦೧೦೧೧ಉಡುಪಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗೆ ಬರೆದ ಪತ್ರ

ಗಮನಿಸಿಅಕ್ಕು ಮತ್ತು ಲೀಲಾರ ಚಿತ್ರಗಳನ್ನು ನೀವು ಈ ಕೆಳಗಿನ ಕೊಂಡಿಯಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು

http://mitramaadhyama.co.in/archives/3030

ಹೆಚ್ಚುವರಿ ದಾಖಲೆಗಳಿಗೆ ಇಲ್ಲಿ ಕ್ಲಿಕ್ ಮಾಡಿ: http://goo.gl/33g0Fs

ENGLISH PRESS NOTE

 

Human Rights Protection Foundation, Udupi.
First Floor,Vaikunta Baliga College of Law, Kunjibettu Udupi- 576 102

Press Release issued on 9.12.2013

Akku Leela Case, Udupi

Frantic Karnataka state Government over Punishment for Contempt of court, but orders pay only 5 years’ arrears, instead of 42 years

Udupi: In a very disgraceful case of Akku-Leela from Udupi which has made the entire country bow in shame, the officials of Karnataka Government who failed to follow Supreme Court orders even after 4 years are now trying to escape punishment for contempt of court.

Provisional Compensation?

S.B Patgar, the Under Secretary Department of Education has ordered to pay 5 years’ salary arrears from March 1998 to 2003 calculating on basic pay. It has been observed that the officials made no attempts in making Akku-Leela’s jobs permanent or to pay back the arrears of the last 42 years.

The Supreme Court will be notified of the same immediately.

Contempt of Court

The Human Rights Protection Foundation, Udupi, has endeavored to create a public opinion by publishing over 25 articles and conducting several seminars questioning the adamancy of the Government for not obeying Supreme Court orders even after 4 years. The ministers and MLAs representing the Udupi Constituency have offered nothing but empty assurances.

The Ministers and officials of Department of Education did not move a hair to the orders of different Courts and wasted time evading responsibility under the pretext of moving the higher courts,

A petition for contempt of court was filed in the Supreme Court for the same in the month of June. Since giving a time limit until September and October was of no avail, the Supreme Court has now given an ultimatum. The Secretary of Education and some related officials are now in panic on receiving the indication that they could be arrested any moment.

The Background Story

The two women, Smt. Akku and Smt Leela, put in about four decades of service, as temporarily appointed cleaners, at the Government Women Teachers’ Training Institute on a monthly salary of Rs. 15 before retiring in 2011. Their umpteen requests for making their job permanent and paying their complete salary went in vain.

Despite the clear orders from the Government to make all the temporary employees who served for over a period of 10 years prior to 1984, permanent, Akku – Leela’s pleas were disregarded.

In 1998 when Akku – Leela complained to the Administrative Tribunal of Karnataka, under the guidance of Human Rights Protection Foundation, Udupi, the Department of Education terminated them from service. But Akku- Leela continued to serve without any salary. The court’s verdict in 2003 was in favour of Akku –Leela, ordering for their jobs to be made permanent and their well deserved salaries due from 1971 to be paid.

Karnataka Government questioned these orders and moved The High Court, which in-turn overruled the argument gave clear orders in 2004, seconding the verdict of the Administrative Tribunal.

The Karnataka Government dragged the matter to Supreme Court and faced the same fate. In January 2010, it was ordered by the Supreme Court to make the posts of Akku-Leela permanent and pay their salaries due since 1971.

Dr Ravindranath Shanbhag

President

Human Rights Protection Foundation, Udupi.
First Floor,

Vaikunta Baliga College of Law,

Kunjibettu Udupi- 576 102

ENCLOSED:

  1. Letter from S B Patagar, Under Secretary (General), Department of Primary and Higher Education dated 5 December 2013, REF: ED 33 PTI 2012 to Director Department of State Educational Research and Training

  2. Letter from Director Department of State Educational Research and Training, dated 6.12.2013, REF: Shi Ta 6 Khayam Seve 2010-11 to Principal, District Education and Training Centre, Udipi

PLEASE NOTE: YOUCAN DOWNLOAD THE IMAGES OF AKKU AND LEELA FROM THE FOLLOWING LINK

http://mitramaadhyama.co.in/archives/3030

LINK TO ADDIONAL DOCUMENTS: http://goo.gl/33g0Fs

Leave a Reply