ಮಿತ್ರಮಾಧ್ಯಮದಿಂದ `ಶಿಲ್ಪಶ್ರೀ ತನಿಖಾ ವರದಿ ಪ್ರಶಸ್ತಿ ೨೦೧೦’

 ಪ್ರತಿಭಾನ್ವಿತ ಪತ್ರಕರ್ತೆ ದಿ. ಶಿಲ್ಪಶ್ರೀ ನೆನಪಿನಲ್ಲಿ ಮಿತ್ರಮಾಧ್ಯಮವು ತನಿಖಾ ವರದಿ ಪ್ರಶಸ್ತಿಯನ್ನು ಸ್ಥಾಪಿಸಿದೆ. ೨೦೦೯ರ ಆಗಸ್ಟ್ ೧೫ರಿಂದ ೨೦೧೦ರ ಆಗಸ್ಟ್ ೧೫ರ ಅವಧಿಯಲ್ಲಿ ಪ್ರಕಟವಾಗುವ ಕನ್ನಡದ ಅತ್ಯುತ್ತಮ ತನಿಖಾ ವರದಿಗೆ ಪ್ರಪ್ರಥಮ `ಶಿಲ್ಪಶ್ರೀ ತನಿಖಾ ವರದಿ ಪ್ರಶಸ್ತಿ’ಯನ್ನು ನೀಡಲಾಗುವುದು. ಈ ಪ್ರಶಸ್ತಿಯು ಆರಂಭದಲ್ಲಿ ೫೦ (ಐವತ್ತು) ಸಾವಿರ ರೂ.ಗಳ ನಗದು ಮತ್ತು ಪ್ರಶಸ್ತಿಪತ್ರವನ್ನು ಒಳಗೊಂಡಿರುತ್ತದೆ. ಮುಂದಿನ ವರ್ಷಗಳಲ್ಲಿ ಈ ಪ್ರಶಸ್ತಿಯ ಮೊತ್ತವನ್ನು ಹೆಚ್ಚಿಸುವ ಉದ್ದೇಶವಿದೆ.

ಪ್ರಶಸ್ತಿಯ ಸಾಮಾನ್ಯ ನಿಯಮಗಳು

೧) ತನಿಖಾ ವರದಿಯು ಯಾವುದೇ ರಾಜಕೀಯ, ಧಾರ್ಮಿಕ, ಸಾಮಾಜಿಕ ಹಿತಾಸಕ್ತಿಗಳಿಂದ ಪ್ರಚೋದಿತವಾಗಿರಬಾರದು; ಸ್ವತಂತ್ರ, ನಿಷ್ಪಕ್ಷಪಾತ ವರದಿಗಳಿಗೆ ಮಾತ್ರ ಅವಕಾಶವಿದೆ. ನಾಡಿನ ಅಭ್ಯುದಯ ಮತ್ತು ಸಮಷ್ಟಿ ಹಿತವೇ ಈ ತನಿಖಾ ವರದಿಗಳ ಸ್ಫೂರ್ತಿಯಾಗಿರಬೇಕು.

೨) ಸಮಾಜದ ಮೇಲೆ, ಆಡಳಿತದ ಮೇಲೆ ತೀವ್ರ ಪರಿಣಾಮ ಬೀರಿ ಸಮಾಜಹಿತಕ್ಕೆ ಕಾರಣವಾದ ವರದಿಗಳಿಗೆ ಆದ್ಯತೆ ನೀಡಲಾಗುವುದು.

೩) ಕರ್ನಾಟಕದ ರಾಜ್ಯ ಮತ್ತು ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ಕನ್ನಡದ ವರದಿಗಳು ಮಾತ್ರವೇ ಪ್ರಶಸ್ತಿಗೆ ಅರ್ಹವಾಗಿರುತ್ತವೆ. ವಿದ್ಯುನ್ಮಾನ ವರದಿಗಳನ್ನು ಈ ವರ್ಷದ ಪ್ರಶಸ್ತಿಯಲ್ಲಿ ಸೇರಿಸಿಲ್ಲ.

೪) ಈ ವರದಿಗಳು ೨೦೦೯ರ ಆಗಸ್ಟ್ ೧೫ರಿಂದ ೨೦೧೦ರ ಆಗಸ್ಟ್ ೧೫ರ ಅವಧಿಯಲ್ಲಿ ಪ್ರಕಟವಾಗಿರಬೇಕು.

೫) ಪ್ರಶಸ್ತಿಗೆ ಅರ್ಹವೆನಿಸಿದ ವರದಿಗಳನ್ನು ವರದಿ ಬರೆದ ಪತ್ರಕರ್ತರಲ್ಲದೆ, ಬೇರೆಯವರೂ ಸಲ್ಲಿಸಬಹುದು.

೬) ಪ್ರಶಸ್ತಿ ನೀಡುವಲ್ಲಿ ಮಿತ್ರಮಾಧ್ಯಮದ ತೀರ್ಮಾನವೇ ಅಂತಿಮ; ಪ್ರಶಸ್ತಿಗೆ ಅರ್ಹ ವರದಿಗಳು ಬರದಿದ್ದರೆ ಪ್ರಶಸ್ತಿಯನ್ನು ತಡೆ ಹಿಡಿಯಲಾಗುವುದು. ತಜ್ಞ ತೀರ್ಪುಗಾರರ ತಂಡವೊಂದು ಈ ಪ್ರಶಸ್ತಿಯ ವಿಜೇತರನ್ನು ಆಯ್ಕೆ ಮಾಡುತ್ತದೆ.

೭) ಈ ಪ್ರಶಸ್ತಿಯನ್ನು ತನಿಖಾ ವರದಿಗಾರಿಕೆಯನ್ನು ಉತ್ತೇಜಿಸಲು ನೀಡಲಾಗುತ್ತಿದೆಯೇ ವಿನಃ ಯಾವುದೇ ಪ್ರಚಾರದ ಉದ್ದೇಶ ಇಲ್ಲಿಲ್ಲ. ಆದ್ದರಿಂದ ಪ್ರಶಸ್ತಿ ನೀಡಿಕೆ ಸಮಾರಂಭಕ್ಕೆ ಆದ್ಯತೆಯಿಲ್ಲ. ನಾಡಿನ ಹಿರಿಯರಿಂದ ಪ್ರಶಸ್ತಿಯನ್ನು ನೀಡಿಸುವ ಪ್ರಯತ್ನ ಮಾಡಲಾಗುವುದು. ದಿನಪತ್ರಿಕೆಗಳ  ಸಹಕಾರದಿಂದ ಈ ಪ್ರಶಸ್ತಿಯ ಬಗ್ಗೆ ಹೆಚ್ಚಿನ ಪ್ರಚಾರಕ್ಕೆ ಒತ್ತು ನೀಡಲಾಗುವುದು.

೮) ಆಸಕ್ತರು ತಮ್ಮ ವರದಿಗಳ ಮುದ್ರಿತ ಪ್ರತಿಯನ್ನು ಸ್ಕ್ಯಾನ್ ಮಾಡಿಸುವುದರ ಜೊತೆಗೆ ಒಂದು ಸಾಫ್ಟ್ ಪ್ರತಿಯನ್ನು ಸೇರಿಸಿ beluru@mitramaadhyama.co.in ಈ ಮೈಲ್ ವಿಳಾಸಕ್ಕೆ ಕಳಿಸಬೇಕು. ಯಾವುದೇ ಕಾಗದದ ಅಂಚೆಯನ್ನು (ಪೋಸ್ಟ್)  ಸ್ವೀಕರಿಸಲಾಗುವುದಿಲ್ಲ.
೯) ತನಿಖಾ ವರದಿಯ ಬಗ್ಗೆ ಯಾವುದೇ ನೆರವು ಬೇಕಾದಲ್ಲಿ ಪತ್ರಕರ್ತರು ಮಿತ್ರಮಾಧ್ಯಮವನ್ನು ಸಂಪರ್ಕಿಸಬಹುದು. ಅಂಥವರ ವಿಷಯ ಗೌಪ್ಯತೆಯನ್ನು ಕಾಪಾಡಲಾಗುವುದು.

ಶಿಲ್ಪಶ್ರೀ 
ಕುವೆಂಪು ವಿಶ್ವವಿದ್ಯಾಲಯದಿಂದ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಬೆಂಗಳೂರಿಗೆ ಬಂದು ವೃತ್ತಿನಿರತೆಯಾಗಿದ್ದ ಕು. ಶಿಲ್ಪಶ್ರೀ ೨೦೦೮ರ ಸೆಪ್ಟೆಂಬರ್ ೫ರಂದು ಬೆಂಗಳೂರಿನಲ್ಲಿ ಅಪಘಾತವೊಂದರಲ್ಲಿ ನಿಧನರಾದರು. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ವಾಸಿಸುತ್ತಿದ್ದ ಶಿಲ್ಪಶ್ರೀಯವರು ಬೇಳೂರು ಗ್ರಾಮದ ಶ್ರೀ ಹಳೆಮನೆ ರಾಮಚಂದ್ರರ ಕುಟುಂಬಕ್ಕೆ ಸೇರಿದವರು. ಶಿಲ್ಪಶ್ರೀಯವರ ತಂದೆ ಶ್ರೀ ನರಹರಿ  ತಾಯಿ ಶ್ರೀಮತಿ ಜ್ಯೋತಿ (ಪತ್ರಕರ್ತ ಶ್ರೀ ಪೂರ್ಣಪ್ರಜ್ಞ ಬೇಳೂರು ಅವರ ಅಕ್ಕ), ತಂಗಿ ಕುಮಾರಿ ನಭ – ಸಾಗರದಲ್ಲಿ ವಾಸವಾಗಿದ್ದಾರೆ.
ಮಿತ್ರಮಾಧ್ಯಮ (www.mitramaadhyama.co.in)
ಕಳೆದ ಹನ್ನೆರಡು ವರ್ಷಗಳಿಂದ ಪುಸ್ತಕ ಪ್ರಕಟಣೆ, ಮಾಧ್ಯಮ ಸಲಹೆ – ಸೇವೆ ಮುಂತಾದ ಬಹುಮುಖೀ ಮಾಧ್ಯಮ ಚಟುವಟಿಕೆಗಳನ್ನು ನಡೆಸುತ್ತಿರುವ ಮಿತ್ರಮಾಧ್ಯಮವು ಈಗ ಕನ್ನಡದ ಮುಂಚೂಣಿ ವೆಬ್‌ಸೈಟ್ ರೂಪದಲ್ಲಿ ಸೃಜನ-ಸೃಜನೇತರ ಸಾಹಿತ್ಯ ಪ್ರಕಟಣೆಯಲ್ಲಿ ತೊಡಗಿದೆ. ಈ ಒಂದು ವರ್ಷದಲ್ಲಿ ಮಿತ್ರಮಾಧ್ಯಮವು ತದಡಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ವಿರುದ್ಧ, ಶಾಸಕರೊಬ್ಬರ ೮೦ ಲಕ್ಷ ರೂ.ಗಳ ದುರ್ಬಳಕೆ ವಿರುದ್ಧ ತನಿಖಾ ವರದಿಗಳನ್ನು ಪ್ರಕಟಿಸಿದೆ. ಸಮಷ್ಟಿಹಿತದ ದೃಷ್ಟಿಯಿಂದ ಮಿತ್ರಮಾಧ್ಯಮವು ಮುಕ್ತ ಮಾಹಿತಿಗಾಗಿ ಹೆಜ್ಜೆ ಇಡುತ್ತಿದೆ. ಮಿತ್ರಮಾಧ್ಯಮವನ್ನು ನಡೆಸುತ್ತಿರುವವರು ಪತ್ರಕರ್ತ ಶ್ರೀ ಬೇಳೂರು ಸುದರ್ಶನ.
ವೆಬ್‌ಸೈಟ್:  www.mitramaadhyama.co.in
ಈ ಮೈಲ್: beluru@mitramaadhyama.co.in
 

Shilpashree Investigative Report Award 2010

Dear friends
 
I have instituted a media award : Shilpashree Investigative Report Award, which carries a cash prize of Rs. 50,000 (Rs. Fifty thousands) and a certificate. The award details are enclosed in the pdf document herewith.
The award will be an annual event, hoping to get a deserving report every year.  I discussed this award concept with few of my friends and the response was very much positive.  
  •  
    • If you happen to be a print media journalist, then this award may be just for you. Please circulate the award statement file among your friends.
    • If you are a blogger, then please announce this award in your esteemed blog, along with the pdf file.
    • If you run a newspaper or work in a print media house, then please publish this, as I am not for a no holds barred campaign, as this award is a vertical one, focusing only print media journalists.
 
This award is instituted in the sweet memory of my dearest baby Shilpashree, who met with a fatal accident on 5th September 2008.
 
 
Regards
Beluru Sudarshana

 

 

 

 

 

Sharing Knowledge

Post to Twitter Post to Plurk Post to Yahoo Buzz Post to Delicious Post to Digg Post to Facebook Post to MySpace Post to Ping.fm Post to Reddit Post to StumbleUpon

----------------------------------------------------------------------------------------------------------

ಮಿತ್ರಮಾಧ್ಯಮಕ್ಕೆ ಭೇಟಿ ಕೊಟ್ಟ ನಿಮಗೆ ವಂದನೆಗಳು.ಇವೂ ಈ ಥರದ್ದೇ ಅಂತೆ! ಓದಿ

  1. ಅಭ್ಯುದಯ ಪತ್ರಕರ್ತ ಪೂರ್ಣಪ್ರಜ್ಞನಿಗೆ ಯೂನಿಸೆಫ್‌ ಪ್ರಶಸ್ತಿ

    ಪೂರ್ಣಪ್ರಜ್ಞನಿಗೆ ಪ್ರಶಸ್ತಿ ಬಂದಿದೆ. ಯೂನಿಸೆಫ್‌ನ ಎಚ್ ಐ ವಿ ಪಾಸಿಟಿವ್ ಪೀಪಲ್ ಮತ್ತು ಇಶ್ಯೂಸ್ ಕುರಿತ ಪತ್ರಿಕಾಕರ್ತ ಪ್ರಶಸ್ತಿ ಈ ವರ್ಷ ಪೂರ್ಣನಿಗೆ, ಪತ್ರಕರ್ತ ಪೂರ್ಣಪ್ರಜ್ಞ ಬೇಳೂರು – ಇವನಿಗೆ ಬಂದಿದೆ. ಶುಭಾಶಯ!    ಬೇಳೂರು ಎಂಬ ಹಿನ್ನಾಮ (ಪ್ರಿಫಿಕ್ಸ್) ಹಚ್ಚಿಕೊಂಡ...

  2. ಕತ್ತಲೆ – ದಾರಿ ಹತ್ತಿರ: ವಿದ್ಯುತ್ ಸಮಸ್ಯೆ ನೀಗಿಸಲು ಮಿತ್ರಮಾಧ್ಯಮದಿಂದ ಮಾಹಿತಿಪೂರ್ಣ ಪುಸ್ತಕ

    ಕರ್ನಾಟಕದ ವಿದ್ಯುತ್ ಸಮಸ್ಯೆಯ ಬಗ್ಗೆ ಭಾರೀ ಚರ್ಚೆ, ವಾದ ವಿವಾದ ನಡೆದಿದೆ.  ಈಗ ರಾಜ್ಯವು ಹೆಚ್ಚುವರಿ ವಿದ್ಯುತ್ತನ್ನು ಖರೀದಿಸಿದೆ. ಇಂಥ ಅಗತ್ಯ ಇತ್ತೆ? ಹೋದ ಸಲ ಕಲ್ಲಿದ್ದಲು ಖರೀದಿಸಿದ ಬಗ್ಗೆ ಸದನದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಈ ಚರ್ಚೆ ಬೇಕಿತ್ತೆ? ಹೋಗಲಿ,...

  3. Media Fest Presentation by Beluru Sudarshana

    Dear Journalism Students, you can download the pdf format of my presentation made on 29.1.2010 at Dharwad Media Fest. Please feel free to shoot your questions to me to my...

  4. ಗೆಳೆಯ ಕಳವೆಗೆ ಕೃಷಿ ಮತ್ತು ಅಭ್ಯುದಯ ಪ್ರಶಸ್ತಿ

    ಗೆಳೆಯ ಶಿವಾನಂದ ಕಳವೆಗೆ ಕರ್ನಾಟಕ ಸರ್ಕಾರದಿಂದ ಕೃಷಿ ಮತ್ತು ಅಭ್ಯುದಯ ಪ್ರಶಸ್ತಿ ಬಂದಿದೆ.  ನನ್ನ ಇನ್ನೊಬ್ಬ ಗೆಳೆಯ ಪೂರ್ಣಪ್ರಜ್ಞನಿಗೆ ಯೂನಿಸೆಫ್ ಪ್ರಶಸ್ತಿ ಬಂದ ಬೆನ್ನಲ್ಲೇ ಶಿವಾನಂದ ಕಳವೆಗೆ ಈ ಪ್ರಶಸ್ತಿ ಬಂದಿರೋದು ನನಗೆ ತುಂಬಾ ಖುಷಿ ಕೊಟ್ಟಿದೆ. ಯಾಕೆ ಗೊತ್ತ? ಐದು...

  5. ಎಲ್ಲಾರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ

    ನನ್ನ ಮಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ (ಮಣಿಪಾಲದಲ್ಲಿ ಉದಯವಾಣಿಯ ಹಿರಿಯ ವರದಿಗಾರ) ಉಡುಪಿಯಲ್ಲಿ ಸಿಕ್ಕಾಗ ಮನೆಗೆ ಕರೆದು / ಎಳೆದುಕೊಂಡು ಹೋಗಿ ತಾವು ತೆಗೆದ ಹತ್ತಾರು ನೂರು ಛಾಯಾಚಿತ್ರಗಳನ್ನು ತೋರಿಸಿದ್ದರು. ಇಲ್ಲಿ ಪ್ರಕಟಿಸಿರೋ ಚಿತ್ರವನ್ನು ಸ್ಪರ್ಧೆಗೆ ಕಳಿಸಿರೋದ್ರಿಂದ ತಕ್ಷಣವೇ ಪಬ್ಲಿಶ್ ಮಾಡಬೇಡಿ...

Comments are closed.

ಹುದುಗಿದ್ದನ್ನು ಹುಡುಕಿ!

ಬನ್ನಿ, ಮಾತಾಡೋಣ!

ನೋಂದಾಯಿಸಿಕೊಳ್ಳಿ!

ಮಿತ್ರಮಾಧ್ಯಮದಲ್ಲಿ ಹೊಸ ಬರಹಗಳು ಪ್ರಕಟವಾದ ಬಗ್ಗೆ ತಿಳಿಯಲು ಇಲ್ಲಿ ನೋಂದಾಯಿಸಿ. ನಿಮ್ಮ ನೋಂದಾವಣೆ ಖಚಿತಪಡಿಸಿ ಒಂದು ಇ-ಮೈಲ್ ಕಳಿಸುತ್ತೇನೆ; ಗಮನಿಸಿ.

ಹೆಸರು
ಇಮೇಲ್