ಲೈಂಗಿಕ ಹಗರಣದ ಕರಿನೆರಳಿನಲ್ಲಿ ಸದ್ದಿಲ್ಲದೆ ಕಾಲುಕಿತ್ತ ಆಂಧ್ರಪ್ರದೇಶದ ರಾಜ್ಯಪಾಲ ಎನ್ ಡಿ ತಿವಾರಿಯವರ ಮಾತಿರಲಿ, ಝಾರ್ಖಂಡ್‌ನಲ್ಲಿ ಶಿಬು ಸೋರೆನ್ ಎಂಬ ಕುಖ್ಯಾತ ರಾಜಕಾರಣಿಯನ್ನು ಬೆಂಬಲಿಸುವ ಮೂಲಕ ಬಿಜೆಪಿ ತನ್ನ ಕುರ್ಚಿಲಾಲಸೆಯನ್ನು ನಿರ್ಲಜ್ಜವಾಗಿ ಪ್ರಕಟಿಸಿದೆಯಲ್ಲ, ಇದಕ್ಕೆ ಏನು ಹೇಳುತ್ತೀರಿ?
ಇದುವರೆಗೆ ಪರಸ್ಪರ ಪೈಪೋಟಿಯಿಂದಾಗಿಯೇ ಮನುಷ್ಯನನ್ನು ಚಂದ್ರನ ಮೇಲೆ ಇಳಿಸಿದ್ದೇವೆ; ಸೂಕ್ಷ್ಮ ಪರಮಾಣುವನ್ನೇ ಇಬ್ಭಾಗಿಸಿ ಶಕ್ತಿಯನ್ನು ಹೊಮ್ಮಿಸಿದ್ದೇವೆ. ಆದರೆ ಈಗ ಪರಸ್ಪರ ಸಹಕಾರದಿಂದಲೇ ಕಾರ್ಬನ್ನೇತರ ಶಕ್ತಿಮೂಲಗಳನ್ನು ಬಳಕೆಗೆ ತಂದು ಭೂಮಿಗೆ ಎದುರಾದ ಸಂಕಷ್ಟವನ್ನು ಪರಿಹರಿಸಬೇಕಿದೆ…
ಬಿಡಿ ಬದನೆಯ ಅಪಾಯ ತಪ್ಪಿಸಿ ನಮ್ಮ ಬದನೆ ವೈವಿಧ್ಯವನ್ನು ಸಂರಕ್ಷಿಸಲು, ಪ್ರೋತ್ಸಾಹಿಸಲು ಈ ಬದನೆ ಮೇಳಕ್ಕೆ ಬನ್ನಿ!
ವಿಕಿರಣ ಸೋರಿಕೆಯನ್ನು ಪತ್ತೆ ಮಾಡಬಲ್ಲ ಅಂಥ ಸಾಧನಗಳನ್ನು ಪಂಚಾಯ್ತಿ ಮುಖಂಡರಿಗೆ, ಪೊಲೀಸರಿಗೆ, ವೈದ್ಯಾಧಿಕಾರಿಗೆ, ಅರಣ್ಯ ರಕ್ಷಣಾ ಸಿಬ್ಬಂದಿಗೆ, ಮೀನುಗಾರರ ಸಂಸ್ಥೆಗೂ ಕೊಡಬೇಕಿತ್ತು. ಆಗ ಮಾತ್ರ ಕೈಗಾ ಸುತ್ತ ಎಲ್ಲವೂ ಸುರಕ್ಷಿತ ಎಂಬುದು ಜನರಿಗೇ ಮನವರಿಕೆ ಆಗಬಹುದಿತ್ತು.
ಮಾನ್ಯ ಸಂಪಾದಕರು
ವಿಜಯ ಕರ್ನಾಟಕ , – ಇವರಿಗೆ
ವಿಜಯ ಕರ್ನಾಟಕದಲ್ಲಿ ನವೆಂಬರ್ ೨೨ರಂದು ಪ್ರಕಟವಾದ ಡಾ. ಶಾಂತು ಶಾಂತಾರಾಮ್ ರವರ ‘ತಥಾಕಥಿತ ವಿರೋಧಿಗಳ ವಾದದಲ್ಲೇನಿದೆ ಬದನೆಕಾಯಿ?’ ಎಂಬ ಲೇಖನಕ್ಕೆ ನನ್ನ ಪ್ರತಿಕ್ರಿಯೆ ಇಲ್ಲಿದೆ.
ಈ ಶೀರ್ಷಿಕೆಯೇ ಬದನೆಕಾಯಿಯಲ್ಲಿ ಏನಂಥ ಪೌಷ್ಟಿಕಾಂಶಗಳಿಲ್ಲ ಎಂಬ ಅರ್ಥವನ್ನು ಕೊಡುತ್ತದೆ. ಬದನೆಕಾಯಿಯಲ್ಲಿ ಏನೂ ಇಲ್ಲ ಎಂದಾದರೆ ಶಾಂತಾರಾಂರಂಥ ಘನ ವಿದ್ವಾಂಸರು ಯಾಕೆ ಬಿಟಿ ಬದನೆ ಬಗ್ಗೆ ಅಷ್ಟೆಲ್ಲ ಪುಂಗಿ ಊದಬೇಕಿತ್ತು ಎಂದು ಅರ್ಥವಾಗುತ್ತಿಲ್ಲ!