Archive for September, 2009

ಕ್ರಿಸ್: ನಿನ್ನಿಂದ ನಾವು ಕಲಿಯೋದು ತುಂಬಾ ಇದೆ !

Tuesday, September 29th, 2009

ಜೇಮ್ಸ್ ಗಲಿಯೆನ್ ಆ ಪ್ರಯಾಣಿಕನನ್ನು ಕಂಡಿದ್ದೇ ಫೇರ್‌ಬ್ಯಾಂಕ್ಸ್‌ನಿಂದ ಐದು ಮೈಲು ದೂರ ಸಾಗಿದ ಮೇಲೆ. ಅಲಾಸ್ಕಾದ ಆ ಮುಂಜಾನೆಯಲ್ಲಿ ನಖಶಿಖಾಂತ ನಡುಗುತ್ತ, ಹೆಬ್ಬೆಟ್ಟು ತೋರುತ್ತ ನಿಂತ ಯುವಕನ ಬೆನ್ನೇರಿದ ಚೀಲದಿಂದ ಬಂದೂಕೊಂದು ಇಣುಕುತ್ತಿತ್ತು. `ನಾನು ಅಲೆಕ್ಸ್’ ಎಂದಷ್ಟೆ ಪರಿಚಯಿಸಿಕೊಂಡ ಆತ ಡೆನಾಲಿ ರಾಷ್ಟ್ರೀಯ ಪಾರ್ಕಿನ ತುತ್ತತುದಿಗೆ ಹೋಗಿ ಕೆಲವು ತಿಂಗಳುಗಳ ಕಾಲ ಇರಬೇಕಿದೆ ಎಂದ. ಅವನ ಚೀಲವೋ ೨೫ & ೩೦ ಪೌಂಡ್ ತೂಗುತ್ತಿದೆಯಲ್ಲ ಎಂದು ಜೇಮ್ಸ್ ಅಚ್ಚರಿಪಟ್ಟ. ಇಂಥ ಥಂಡಿಯಲ್ಲಿ ಈ ಅಲೆಕ್ಸ್ ಬದುಕುವುದು ಹೇಗೆ [...]

‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’

Saturday, September 26th, 2009

ಈ ಕೆಳಗಿನ ಮಾತುಗಳನ್ನು  ಯಾರು ಹೇಳಿರಬಹುದು ಎಂದು ಊಹಿಸುತ್ತ ಓದಿಕೊಳ್ಳಿ.

`ಮೊದಲೇನೋ ಈ ಕ್ರಾಂತಿಯು ಭಾರೀ ಯಶ ಸಾಧಿಸಿದಂತೆ ಕಂಡಿತು. ಜನಸಂಖ್ಯೆ ಬೆಳೆದಂತೆ ಮತ್ತು ಆಹಾರದ ಬೇಡಿಕೆ ಹೆಚ್ಚಿದಂತೆ ಆಹಾರದ ಬೆಲೆ ಇಳಿಯಲಿಲ್ಲ. ೯೦ರ ದಶಕದಲ್ಲಂತೂ ಈ ಹಸಿರು ಕ್ರಾಂತಿಗೆ ನಾವೆಂಥ ದುಬಾರಿ ಬೆಲೆ ತೆತ್ತಿದ್ದೇವೆ ಎಂಬುದು ಅರಿವಾಯಿತು.

ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್

Saturday, September 26th, 2009

ಪ್ರತಿ ರಾತ್ರಿ ಒಂಬತ್ತೂವರೆ ಆಗುತ್ತಿದ್ದಂತೆ ಪಂಜಾಬಿನ ಭಟಿಂಡಾ ರೈಲು ನಿಲ್ದಾಣದಿಂದ ಟ್ರೈನ್ ನಂ. ೩೩೯ ನಿಧಾನವಾಗಿ ರಾಜಸ್ಥಾನದ ಬಿಕಾನೇರಿನತ್ತ ಗಾಲಿ ಎಳೆಯುತ್ತ ಸಾಗುತ್ತದೆ. ಈ ರೈಲಿನ ಹೆಸರೇ ಕ್ಯಾನ್ಸರ್ ಟ್ರೈನ್. ಪ್ರತಿದಿನ ಇಲ್ಲಿಂದ ಕನಿಷ್ಟ ೬೦ ಕ್ಯಾನ್ಸರ್ ರೋಗಿಗಳು ಬಿಕಾನೇರಿನ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರಕ್ಕೆ ಹೋಗುತ್ತಾರೆ.

ನಾಗೇಶ್‌ ಹೆಗಡೆ : ಹಸಿರು ಕ್ರಾಂತಿಯ ಜಾಡು ಹಿಡಿದು ನೀಲಕ್ರಾಂತಿ

Thursday, September 24th, 2009
ನಾಗೇಶ್‌ ಹೆಗಡೆ : ಹಸಿರು ಕ್ರಾಂತಿಯ ಜಾಡು ಹಿಡಿದು ನೀಲಕ್ರಾಂತಿ

ಇಂದಿನ ರಾಜಕೀಯ ಧುರೀಣರು ನಿಜಕ್ಕೂ ಮುತ್ಸದ್ದಿಗಳಾಗಿ ಇಡೀ ಮಾನವಕುಲದ ಪ್ರಗತಿಯ ದಿಶೆಯನ್ನು ಬದಲಿಸದಿದ್ದರೆ ನ್ಯೂಯಾರ್ಕ್ನಲ್ಲಿರುವ ಸ್ವಾತಂತ್ರ್ಯದೇವಿಯ ಪ್ರತಿಮೆಯ ತೋಳಿನ ತುದಿಯಲ್ಲಿರುವ ದೊಂದಿ ನೀರಲ್ಲಿ ಮುಳುಗಿ ನಂದಿಹೋಗುತ್ತದೆ. 

ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ

Wednesday, September 23rd, 2009

ಹಾಲಿವುಡ್ ಸಿನೆಮಾ ನೋಡುವ ವಿಪರೀತ ಚಟದಲ್ಲಿ ಯಾವ ಸಿನೆಮಾ ಬಂದರೂ ನೋಡುತ್ತಿದ್ದ ೮೦ರ ದಶಕದಲ್ಲಿ ನನ್ನನ್ನು ತೀವ್ರವಾಗಿ ಕಲಕಿದ ಸಿನೆಮಾ `ದಿ ಕಿಲ್ಲಿಂಗ್ ಫೀಲ್ಡ್ಸ್’. ಮೂರು ಆಸ್ಕರ್ ಪ್ರಶಸ್ತಿಗಳನ್ನು ದಕ್ಕಿಸಿಕೊಂಡ ಈ ಸಿನೆಮಾ ಯುದ್ಧ, ಕ್ರಾಂತಿ, ದೇಶಗಳ ನಡುವಣ ಸಂಘರ್ಷ, ಮಾನವತೆ, ಸ್ನೇಹ, ಹಿಂಸೆ – ಎಲ್ಲವನ್ನೂ ಎಲ್ಲ ಫ್ರೇಮುಗಳಲ್ಲಿ ತೋರಿಸುತ್ತ ಎದೆ ಕದಡುತ್ತದೆ. ಅದ್ಭುತ ಸೆಟಿಂಗ್‌ಗಳು, ಮಹಾನ್ ನಟನೆ, ಕ್ಷಣಕ್ಷಣಕ್ಕೂ ಏನಾಗುತ್ತದೆ ಎಂಬ ಕುತೂಹಲವನ್ನು ಕೆರಳಿಸುವ ಕಥಾ ಹಂದರ, – ಈ ಸಿನೆಮಾದಲ್ಲಿ ಏನಿದೆ, ಏನಿಲ್ಲ……. [...]

ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !

Wednesday, September 23rd, 2009

ಯುಜಿ೯೯ ಎಂಬ ಕಾಂಡಕೊರಕ ಫಂಗಸ್ (ಸ್ಟೆಮ್ ರಸ್ಟ್)  ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಅನಾಹುತ ನೋಡಿ: ಮೊದಲು ಉಗಾಂಡದಲ್ಲಿನ ಗೋಧಿಯನ್ನು ಸಂಪೂರ್ಣ ತಿಂದುಹಾಕಿದ ಈ ಫಂಗಸ್ ಕೀನ್ಯಾ, ಸುಡಾನ್, ಯೆಮೆನ್, ದಾಟಿ, ಇರಾನ್‌ನ್ನೂ ತಲುಪಿದೆ. ಮುಂದೆ ಇದು ಅಫಘಾನಿಸ್ತಾನವನ್ನು ಹಾಯ್ದು, ಪಾಕಿಸ್ತಾನದ ಗೋಧಿ ಬೆಳೆಯನ್ನೆಲ್ಲ ಕಬಳಿಸಿ ಭಾರತಕ್ಕೆ ವಕ್ಕರಿಸಲಿದೆ.  ಆಮೇಲೆ ರಶ್ಯಾ, ಚೀನಾ, ಅಲ್ಲಿಂದ ಸಾಗರೋತ್ತರ ಪಯಣ ಮಾಡಿ ಉತ್ತರ ಅಮೆರಿಕಾ. ವಸುಂಧರೆಗೇ ಸರ್ಪಸುತ್ತು. 

ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)

Friday, September 18th, 2009

`ಟಿಬೆಟನ್ ಧರ್ಮಗುರು ದಲಾಯಿ ಲಾಮಾರವರು ಅರುಣಾಚಲಕ್ಕೆ ಭೇಟಿ ನೀಡಬಾರದು; ಯಾಕೆಂದರೆ ಅರುಣಾಚಲ ಪ್ರದೇಶದ ಮೇಲೆ ನಾವಿನ್ನೂ ಹಕ್ಕು ಸಾಧಿಸುತ್ತಿದ್ದೇವೆ’ ಎಂದು ಚೀನಾ ಬಾಯಿ ಬಿಟ್ಟಿದೆ. ಇಷ್ಟು ದಿನ ಭಾರತದ ಹೊರಗೆ ದಲಾಯಿ ಲಾಮಾ ಪ್ರವಾಸ ಮಾಡಿದರೆ ಉರಿದೇಳುತ್ತಿದ್ದ ಚೀನಾ ಈಗ ಭಾರತದೊಳಗೇ ದಲಾಯಿ ಲಾಮಾ ಅಡ್ಡಾಡಬಾರದು ಎಂದು ಫರ್ಮಾನು ಹೊರಡಿಸಿದೆ! ದಲಾಯಿ ಲಾಮಾ ಎಲ್ಲಿಗೆ ಭೇಟಿ ನೀಡಬಾರದು ಎಂದು ನಿರ್ಧರಿಸುವುದು ಚೀನಾದ ಆಂತರಿಕ ವಿಷಯವಂತೆ.
[...]

ಅಂಕಣಗಳು

ಹುದುಗಿದ್ದನ್ನು ಹುಡುಕಿ!

ಬನ್ನಿ, ಮಾತಾಡೋಣ!

ನೋಂದಾಯಿಸಿಕೊಳ್ಳಿ!

ಮಿತ್ರಮಾಧ್ಯಮದಲ್ಲಿ ಹೊಸ ಬರಹಗಳು ಪ್ರಕಟವಾದ ಬಗ್ಗೆ ತಿಳಿಯಲು ಇಲ್ಲಿ ನೋಂದಾಯಿಸಿ. ನಿಮ್ಮ ನೋಂದಾವಣೆ ಖಚಿತಪಡಿಸಿ ಒಂದು ಇ-ಮೈಲ್ ಕಳಿಸುತ್ತೇನೆ; ಗಮನಿಸಿ.

ಹೆಸರು
ಇಮೇಲ್