ಹ್ಯಾನಿಬಾಲ್ ಲೆಕ್ಟರ್: ಆಂಥೋನಿ ಹಾಪ್‌ಕಿನ್ಸ್‌ನ ರೌದ್ರಾವತಾರ
Wednesday, July 29th, 20091991 ರಲ್ಲಿ ದಿ ಸೈಲೆನ್ಸ್ ಆಫ್ ದಿ ಲ್ಯಾಂಬ್ಸ್ ಸಿನೆಮಾ ಬಂದಾಗ ಆಂಥೋನಿ ಹಾಪ್‌ಕಿನ್ಸ್ ಇದಾನಂತೆ, ಅವನಿಗೆ ಆಸ್ಕರ್ ಸಿಕ್ಕಿತಂತೆ ಎಂಬ ಸುದ್ದಿಯ ಬೆನ್ನುಬಿದ್ದು ಸಿನೆಮಾ ನೋಡಿದೆ. ಆಗಿನ ಕಾಲದಲ್ಲಿ ಆಸ್ಕರ್ ಬಂದ ಎಷ್ಟೋ ತಿಂಗಳುಗಳ ನಂತರ ಆ ಸಿನೆಮಾ ಬೆಂಗಳೂರಿಗೆ ಬರುತ್ತಿತ್ತು. ಈಗ ಹಾಲಿವುಡ್ ಸಿನೆಮಾಗಳು ಸರಸರ ಭಾರತದ ಮಲ್ಟಿಪ್ಲೆಕ್ಸ್‌ಗಳಲ್ಲಿ ಬರುತ್ತದೆ. ಸ್ಯಾಟೆಲೈಟ್ ಡಿಜಿಟಲ್ ಪ್ರಾಜೆಕ್ಷನ್ ತಂತ್ರಜ್ಞಾನದಿಂದ ಇದೆಲ್ಲ ಸಾಧ್ಯವಾಗಿದೆ ಅನ್ನಿ.



