ಮಿತ್ರಮಾಧ್ಯಮದಿಂದ `ಶಿಲ್ಪಶ್ರೀ ತನಿಖಾ ವರದಿ ಪ್ರಶಸ್ತಿ ೨೦೧೦’
Thursday, June 25th, 2009 ಪ್ರತಿಭಾನ್ವಿತ ಪತ್ರಕರ್ತೆ ದಿ. ಶಿಲ್ಪಶ್ರೀ ನೆನಪಿನಲ್ಲಿ ಮಿತ್ರಮಾಧ್ಯಮವು ತನಿಖಾ ವರದಿ ಪ್ರಶಸ್ತಿಯನ್ನು ಸ್ಥಾಪಿಸಿದೆ. ೨೦೦೯ರ ಆಗಸ್ಟ್ ೧೫ರಿಂದ ೨೦೧೦ರ ಆಗಸ್ಟ್ ೧೫ರ ಅವಧಿಯಲ್ಲಿ ಪ್ರಕಟವಾಗುವ ಕನ್ನಡದ ಅತ್ಯುತ್ತಮ ತನಿಖಾ ವರದಿಗೆ ಪ್ರಪ್ರಥಮ `ಶಿಲ್ಪಶ್ರೀ ತನಿಖಾ ವರದಿ ಪ್ರಶಸ್ತಿ’ಯನ್ನು ನೀಡಲಾಗುವುದು. ಈ ಪ್ರಶಸ್ತಿಯು ಆರಂಭದಲ್ಲಿ ೫೦ (ಐವತ್ತು) ಸಾವಿರ ರೂ.ಗಳ ನಗದು ಮತ್ತು ಪ್ರಶಸ್ತಿಪತ್ರವನ್ನು ಒಳಗೊಂಡಿರುತ್ತದೆ. ಮುಂದಿನ ವರ್ಷಗಳಲ್ಲಿ ಈ ಪ್ರಶಸ್ತಿಯ ಮೊತ್ತವನ್ನು ಹೆಚ್ಚಿಸುವ ಉದ್ದೇಶವಿದೆ.
[...]


