೨೦೦೩ರ ಫೆಬ್ರುವರಿ ತಿಂಗಳಿನ ನ್ಯಾಶನಲ್ ಜಿಯಾಗ್ರಫಿಕ್ ಮ್ಯಾಗಜಿನ್‌ನ್ನು ಕೈಲಿ ಹಿಡಿದು ಮನಸ್ಸಿಗೆ ಬಂದ ಪುಟ ತಿರುಗಿಸಿದೆ.ಅಲ್ಲೊಂದು ಪುಟ್ಟ ಚಿತ್ರವಿತ್ತು. ಅರೆ, ಇದೇನು ಜೇನುಹುಳಗಳು ಸಮುದ್ರದ ಆಳದಲ್ಲೂ ಗೂಡು ಕಟ್ಟಿವೆಯೆ? ಮನುಷ್ಯನ ವಾಸ್ತು ಸಾಮರ್ಥ್ಯವನ್ನು ಸದಾ ಅಣಕಿಸುವ ಜೇನುಹುಳಗಳು ಸಮುದ್ರದ ಆಳದಲ್ಲೂ ಗೂಡು ಕಟ್ಟಿ ಬದುಕುತ್ತಿವೆಯೆ? – ಅಚ್ಚರಿಯಿಂದ ಛಾಯಾಚಿತ್ರದ ಅಡಿಟಿಪ್ಪಣಿಯನ್ನು ಗಮನಿಸಿದೆ. ಹಾಗೆ ಗಮನಿಸಿದ ಕ್ಷಣದಿಂದ ನಾನು ಈ ಪುಟ್ಟ ಲೇಖನವನ್ನು ಬರೆದು ನಿಮ್ಮೆದುರಿಗೆ ಇಡಲು ತವಕಿಸಿದ್ದೇನೆ. ಈ ವಿಶ್ವದಲ್ಲಿ ಇರುವ ಎಷ್ಟೋ ವಿಚಿತ್ರಗಳ ಬಗ್ಗೆ ನಾವು [...]
ಸ್ಲಮ್‌ಡಾಗ್ ಮಿಲೆಯನೇರ್ ಸಿನೆಮಾ ಒಳ್ಳೆಯದೋ, ಕೆಟ್ಟದ್ದೋ?
ಎ ಆರ್ ರಹಮಾನ್‌ಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ಬಂದಿದ್ದಕ್ಕೆ ಖುಷಿಪಡಬೇಕೋ, ಬೇಜಾರು ಮಾಡಿಕೊಳ್ಳಬೇಕೋ?
ದಿ ವೈಟ್ ಟೈಗರ್ ಕಾದಂಬರಿಯನ್ನು ಹೊಗಳಬೇಕೋ, ತೆಗಳಬೇಕೋ?
ಭಾರತ ಬರೀ ದರಿದ್ರರ ದೇಶ ಎಂದೇ ಚಿತ್ರಿತವಾಗಿರೋ ಸಾಹಿತ್ಯ, ಸಿನೆಮಾ, ನಾಟಕ ಎಲ್ಲವನ್ನೂ ನಾವು ವಿರೋಧಿಸಬೇಕು ಎಂದು ನಮ್ಮ ಹಲವು ಲೇಖಕರು ಹೇಳುತ್ತಾರೆ.
ಹಾಗಾದರೆ ವಾಸ್ತವ ಏನು? ಭಾರತದಲ್ಲಿ ದಾರಿದ್ರ್ಯ ಇಲ್ಲವೆ? ಭ್ರಷ್ಟಾಚಾರ ಇಲ್ಲವೆ? ಅದನ್ನೆಲ್ಲ ಒಪ್ಪಿಕೊಳ್ಳಲೇಬೇಕಲ್ಲವೆ? – ಹಾಗಂತ ಇನ್ನೊಂದು ಬಣ ವಾದಿಸುತ್ತದೆ.
ಎಲ್ಲಕ್ಕಿಂತ ಮುಖ್ಯ ವಾದ ಎಂದರೆ ವಿದೇಶಗಳಲ್ಲಿ ಭಾರತವನ್ನು ಕೆಟ್ಟ [...]
ಹಿಂದುಸ್ತಾನಿ ಸಂಗೀತದ ಆಲ್ಬಮ್‌ಗಳ ಹುಡುಕಾಟದಲ್ಲಿ ನನಗೆ ಕೆಲವು ತಿಂಗಳುಗಳ ಹಿಂದೆ ಸಿಕ್ಕಿದ್ದು ‘ಸಾಜ್’ ಎಂಬ ಕ್ಯಾಸೆಟ್‌ಗಳ ಸಂಗ್ರಹ. ಅಂದರೆ ಈ ಕ್ಯಾಸೆಟ್‌ಗಳನ್ನು ಯಾರೋ ಮಹಾನುಭಾವರು ಗಣಕಕ್ಕೆ ರೂಪಾಂತರಿಸಿ ಎಂಪಿ೩ ಹಾಡುಗಳನ್ನಾಗಿ ಮಾಡಿ ಟೊರೆಂಟ್ ಫೇಲನ್ನೂ ಸೃಜಿಸಿ ಕೊಟ್ಟಿದ್ದಾರೆ. ಕಲಿಯುವುದಕ್ಕೆ ಕೊಂಚ ಕದಿಯಬಹುದು ಎಂಬ ಫಿಲಾಸಫಿಯನ್ನು ಅಳವಡಿಸಿಕೊಂಡಿರುವ ನಾನು ಈ ಫೈಲುಗಳನ್ನು ಕದ್ದೆ. ಎರಡು ದಿನಗಳ ನಿರಂತರ ಯತ್ನದ ನಂತರ ಸಿಕ್ಕ ಈ ಕ್ಯಾಸೆಟ್‌ಗಳ ಸಂಗ್ರಹವನ್ನು ಕೇಳುವುದಕ್ಕೆ ಹತ್ತಾರು ದಿನ ಬೇಕು. ನಗರದ ಗದ್ದಲದ ನಡುವೆ ಈ ಸಾಜ್‌ನ [...]