Archive for December, 2008

ಪತ್ರಕರ್ತರೇ, ಟೈಂ ಉಂಟಾ? 3: ಊರಾಗ ಗಲಾಟೆ ಆದಾಗ ಬಂದಿದ್ರಾ?

Friday, December 26th, 2008

 
ಮಳೆಗಾಲದಲ್ಲಿ ತೂಗು ಸೇತುವೆ ದಾಟಬೇಕು. ಹತ್ತಾರು ಕಿಲೋಮೀಟರ್ ಕಾಲುದಾರಿಯ ಚಾರಣ. ರಕ್ತ ಹೀರುವ ಜಿಗಣೆಗಳಿಂದ ಕಡಿಸಿಕೊಳ್ಳುವ ಆ ಪಯಣ ಸಾಧ್ಯವಿಲ್ಲ. ಅದರಲ್ಲೂ ಕರೆಂಟಿಲ್ಲದ ಊರಿನಲ್ಲಿ ಕಾಲ ಕಳೆಯಬೇಕು! ಯಾವುದಕ್ಕೂ ಹಳ್ಳಿ ನೋಡಲು ಬೇಸಿಗೆಯಲ್ಲಿ ಹೋಗೋದು ಒಳ್ಳೆಯದು. ಆಗ ಊರಿಗೆ ಬಸ್ಸು ಹೋಗುತ್ತದೆ, ಬೇಕಾದರೆ ವಾಹನದಲ್ಲಿಯೂ ಸುಲಭದಲ್ಲಿ ಒಂದೇ ದಿನಕ್ಕೆ ಹೋಗಿ ಹಿಂದಿರುಗಿ ಬರಬಹುದು. ವನವಾಸಿಗರ ಬದುಕು ಅರಿಯಲು ಉತ್ಸಾಹ ತೋರಿದ ಪತ್ರಕರ್ತನೆದುರು ಮಳೆಗಾಲ ದೊಡ್ಡ ಸಮಸ್ಯೆ. ಕಾಲದ ತಾಪತ್ರಯ ಊಹಿಸಿಯೇ ಹೆಜ್ಜೆ ಹಿಂದಕ್ಕೆ! ‘ಬೇಸಿಗೆಯಲ್ಲಿ ಹೋಗುವದು ಆರಾಮ, [...]

ಪತ್ರಕರ್ತರೇ, ಟೈಂ ಉಂಟಾ?2: ಹಳ್ಳಿಗಾ!? ಟೈಮಿಲ್ಲ ಕಣ್ರೀ…..!

Friday, December 26th, 2008
ಪತ್ರಕರ್ತರೇ, ಟೈಂ ಉಂಟಾ?2: ಹಳ್ಳಿಗಾ!? ಟೈಮಿಲ್ಲ ಕಣ್ರೀ.....!

ಹಾಗಾದರೆ ಕ್ಷೇತ್ರದರ್ಶನಕ್ಕೆ ಒಳಹಳ್ಳಿಗಳಿಗೆ ವರ್ಷದಲ್ಲಿ ಪತ್ರಕರ್ತರು ಎಷ್ಟು ಸಾರಿ ಹೋಗುತ್ತಾರೆ? ಅಲ್ಲಿ ಹೇಗೆ ವರ್ತಿಸುತ್ತಾರೆ? ಏನು ನೋಡುತ್ತಾರೆ? ಎಷ್ಟು ಸಮಯದಲ್ಲಿ ಹೇಗೆ ಮಾಹಿತಿ ಸಂಗ್ರಹಿಸುತ್ತಾರೆ? ಯಾರ ಸಹಾಯ ಪಡೆಯುತ್ತಾರೆ? ಸಂಗ್ರಹಿತ ಮಾಹಿತಿಗಳನ್ನು ಹೇಗೆ ಖಚಿತಪಡಿಸಿಕೊಳ್ಳುತ್ತಾರೆ? ಅದನ್ನು ಯಾವಾಗ, ಹೇಗೆ ಪ್ರಕಟಿಸುತ್ತಾರೆ? ಮುಂತಾಗಿ ಸುದ್ದಿ ಮಾಡುವ ಮಂದಿಯ ಸುತ್ತ ಒಂದು ನೋಟ ಹರಿಸಿದರೆ ಮಾಧ್ಯಮ ಮಾರ್ಗದ ಪ್ರಸ್ತುತ ಪರಿಸ್ಥಿತಿ ಅರಿಯಬಹುದು.
 
ಪುಟ್ಟಪೇಟೆ, ನಗರಗಳು ಬಹುತೇಕ ಗ್ರಾಮೀಣ ಪತ್ರಕರ್ತರ ಪಾಲಿಗೆ ವಸತಿ ಸ್ಥಾನ. ದೈನಂದಿನ ಬದುಕು ನಗರ ಜೀವನದ ಜೊತೆ ತಾದಾತ್ಮ್ಯಗೊಂಡಿದೆ. [...]

ಶಿವಾನಂದ ಕಳವೆ: ಪತ್ರಕರ್ತರೇ, ಟೈಂ ಉಂಟಾ?

Friday, December 26th, 2008
ಶಿವಾನಂದ ಕಳವೆ: ಪತ್ರಕರ್ತರೇ, ಟೈಂ ಉಂಟಾ?

ಮಳೆಗಾಲದಲ್ಲಿ ತೂಗು ಸೇತುವೆ ದಾಟಬೇಕು. ಹತ್ತಾರು ಕಿಲೋಮೀಟರ್ ಕಾಲುದಾರಿಯ ಚಾರಣ. ರಕ್ತ ಹೀರುವ ಜಿಗಣೆಗಳಿಂದ ಕಡಿಸಿಕೊಳ್ಳುವ ಆ ಪಯಣ ಸಾಧ್ಯವಿಲ್ಲ. ಅದರಲ್ಲೂ ಕರೆಂಟಿಲ್ಲದ ಊರಿನಲ್ಲಿ ಕಾಲ ಕಳೆಯಬೇಕು! ಯಾವುದಕ್ಕೂ ಹಳ್ಳಿ ನೋಡಲು ಬೇಸಿಗೆಯಲ್ಲಿ ಹೋಗೋದು ಒಳ್ಳೆಯದು. ಆಗ ಊರಿಗೆ ಬಸ್ಸು ಹೋಗುತ್ತದೆ, ಬೇಕಾದರೆ ವಾಹನದಲ್ಲಿಯೂ ಸುಲಭದಲ್ಲಿ ಒಂದೇ ದಿನಕ್ಕೆ ಹೋಗಿ ಹಿಂದಿರುಗಿ ಬರಬಹುದು. ವನವಾಸಿಗರ ಬದುಕು ಅರಿಯಲು ಉತ್ಸಾಹ ತೋರಿದ ಪತ್ರಕರ್ತನೆದುರು ಮಳೆಗಾಲ ದೊಡ್ಡ ಸಮಸ್ಯೆ. ಕಾಲದ ತಾಪತ್ರಯ ಊಹಿಸಿಯೇ ಹೆಜ್ಜೆ ಹಿಂದಕ್ಕೆ! ‘ಬೇಸಿಗೆಯಲ್ಲಿ ಹೋಗುವದು ಆರಾಮ, [...]

ಗೆಳೆಯ ಕಳವೆಗೆ ಕೃಷಿ ಮತ್ತು ಅಭ್ಯುದಯ ಪ್ರಶಸ್ತಿ

Friday, December 26th, 2008
ಗೆಳೆಯ ಕಳವೆಗೆ ಕೃಷಿ ಮತ್ತು ಅಭ್ಯುದಯ ಪ್ರಶಸ್ತಿ

ಗೆಳೆಯ ಶಿವಾನಂದ ಕಳವೆಗೆ ಕರ್ನಾಟಕ ಸರ್ಕಾರದಿಂದ ಕೃಷಿ ಮತ್ತು ಅಭ್ಯುದಯ ಪ್ರಶಸ್ತಿ ಬಂದಿದೆ.  ನನ್ನ ಇನ್ನೊಬ್ಬ ಗೆಳೆಯ ಪೂರ್ಣಪ್ರಜ್ಞನಿಗೆ ಯೂನಿಸೆಫ್ ಪ್ರಶಸ್ತಿ ಬಂದ ಬೆನ್ನಲ್ಲೇ ಶಿವಾನಂದ ಕಳವೆಗೆ ಈ ಪ್ರಶಸ್ತಿ ಬಂದಿರೋದು ನನಗೆ ತುಂಬಾ ಖುಷಿ ಕೊಟ್ಟಿದೆ. ಯಾಕೆ ಗೊತ್ತ? ಐದು ವರ್ಷಗಳ ಹಿಂದೆ ನಾವೆ ಸಪ್ತ ಪತ್ರಕರ್ತರು ಸೇರಿ  ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಿದ್ದೆವು. ಈ ಪೈಕಿ ಇವರಿಬ್ಬರೂ ಪ್ರಮುಖರೇ. ಅದರಲ್ಲೂ ನಮ್ಮ ಶಿವಾನಂದ ಕೇಂದ್ರದ ಸಂಚಾಲಕನಾಗಿ ಮಾಡಿದ ಕೆಲಸ ಮರೆಯುವಂಥಾದ್ದೇ ಅಲ್ಲ. 
ಅಭ್ಯುದಯ ಪತ್ರಿಕೋದ್ಯಮ [...]

ನಾಗೇಶ ಹೆಗಡೆ: ಭೂಮಿಯ ಚಲನೆ ನಿಂತುಹೋದ ಆ ದಿನ….

Thursday, December 25th, 2008

 
ಆಧುನಿಕ ನಾಗರಿಕತೆಯ ಎಲ್ಲ ತಾಂತ್ರಿಕ ಸಾಧನಗಳೂ ಇದ್ದಕ್ಕಿದ್ದ ಹಾಗೆ ಸ್ಥಗಿತಗೊಂಡರೆ ಏನಾದೀತು? ಭೂಮಿ  ನಿಂತಂತೆ ಭಾಸವಾಗುತ್ತದೆ. ಇನ್ನೂರು ವರ್ಷಗಳ ಹಿಂದಿನ ಯುಗಕ್ಕೆ ಮರಳುತ್ತೇವೆ. ಬಿಸಿಪ್ರಳಯದ ಭಯ ಕ್ರಮೇಣ ಇಲ್ಲವಾಗುತ್ತದೆ. ದೊಡ್ಡ ಕಂಟಕದಿಂದ ಪೃಥ್ವಿ ಪಾರಾಗುತ್ತದೆ. ಇಲ್ಲಿನ ಸಕಲ ಜೀವಲೋಕ ಮತ್ತೆ ಸಮೃದ್ಧವಾಗುತ್ತದೆ. ಇಂಥದೊಂದು ಸಾಧ್ಯತೆಯುಳ್ಳ ಸಿನೆಮಾ ಇದೀಗ ಬಿಡುಗಡೆಯಾಗಿದೆ. ಅದೇ ಸಂದರ್ಭದಲ್ಲಿ ಜಾಗತಿಕ ಮುತ್ಸದ್ದಿಗಳು ಭೂಮಿಯ ಕಾಯಿಲೆಗೆ ಹೊಸ ಮದ್ದು ಹುಡುಕಲು ಸನ್ನದ್ಧರಾಗಿದ್ದಾರೆ.
 
 
 
ಕಳೆದ ಶುಕ್ರವಾರ ಪೂರ್ಣಚಂದ್ರನ ಅತಿದೊಡ್ಡ ಬಿಂಬವನ್ನು ನಾವೆಲ್ಲ ನೋಡುತ್ತಿದ್ದಾಗ ಬಾನಂಗಳದಲ್ಲಿ ಇನ್ನೂ ಒಂದು ಅಪರೂಪದ [...]

ನೀನೇನಂಥ ಮೆದು ಹುಡುಗನಲ್ಲ

Thursday, December 25th, 2008

ಒಂದು ಕ್ಷಣದಲ್ಲಿ ನೀನು ನನ್ನನ್ನು ಬೈದುಕೊಳ್ಳುತ್ತೀಯೆ
ಎಂಥ ಕಟುಹೃದಯಿ, ಅಶಾಂತ, ನಿರ್ದಯಿ ಎದೆ
ಒಳಗೆ ಘನವಾಗಿ ಹರಿಯುತ್ತಿದೆ ಯಾವುದೋ ದ್ವೇಷ. 
ನೀನೇನಂಥ ಮೆದು ಹುಡುಗನಲ್ಲ, ಬರಿಯ ಕಲ್ಲು. 
 
ಒಂದು ದಿನವೂ ನೀನು ಹೀಗೆ ಕರ್ಟನು ಸರಿಸಿದವನಲ್ಲ, 
ಒಂದು ಹುಸಿಜೋಕಿಗೂ ನಕ್ಕವನಲ್ಲ, 
ಬೆಳಗ್ಗೆ ಎದ್ದು ಹದವಾಗಿ ಮಾತಾಡುವುದಿಲ್ಲ
ಚಾ ಕುಡಿವಾಗ ಕಣ್ಣು ವಾರೆನೋಟಕ್ಕೂ ಗತಿಯಿಲ್ಲದಂತೆ 
ಪೇಪರಿಗೆ ಅಂಟಿಕೊಂಡಿರುತ್ತೆ. ಆ ಪೇಪರಿನಲ್ಲಿ ಯಾರದ್ದೋ 
ರಕ್ತ, ಪೋಲಿಯೋ ಲಸಿಕೆ ಎಲ್ಲ ರಾಡಿ. 
ನೀನು ತಣ್ಣಗೆ ಲೋಟ ಎತ್ತಿಕೊಂಡ ಮೇಲೆ 
ನಾನು ಹಾಗೇ ಜಾರಿಕೊಳ್ಳುತ್ತೇನೆ 
ಮೆತ್ತಗೆ, ಬೆಳ್ಳಂಬೆಳಗ್ಗೆಯೇ ಕಾಣಬೇಕಾದ ಕನಸಿಗೆ. 
 
ಡೈನಿಂಗ್ ಟೇಬಲ್ಲಿನ ಮೇಲೆ ಅರಳುತ್ತಿರೋ ಎಲೆಗೂ
ಕಿಟಕಿಯಾಚೆ ಇಣುಕುತ್ತಿರೋ ಮಂಗಕ್ಕೂ 
ರಸ್ತೆಯಾಚೆ ಬರುತ್ತಿರೋ [...]

ಫುಕುವೊಕ ಎಂಬ ಡೇಂಜರ್ ಸಿಗ್ನಲ್

Sunday, December 21st, 2008
ಫುಕುವೊಕ ಎಂಬ ಡೇಂಜರ್ ಸಿಗ್ನಲ್

ಆಧುನಿಕ ಮಾನವನ ’ಸಾಧನೆ’ಗಳ ಮಹಾಧಾರೆಯಲ್ಲಿ ಸಮಸ್ತರೂ ಕೊಚ್ಚಿ ಹೋಗುತ್ತಿರುವಾಗ ಬೆರಳೆಣಿಕೆಯ ಕೆಲವರು ಮಾತ್ರ ಹೇಗೋ ದಡ ಸೇರಿ ಗಟ್ಟಿ ನಿಂತು ನೋಡುವ ತಾಕತ್ತನ್ನು ಪಡೆಯುತ್ತಾರೆ. ಗಾಂಧೀಜಿಗೆ ಆ ಶಕ್ತಿ ಸಿದ್ಧಿಸಿತ್ತು. ಹೆನ್ರಿ ಥೊರೊ, ಇ ಎಫ್. ಶ್ಯುಮಾಕರ್, ಐವಾನ್ ಇಲ್ಲಿಚ್ ಇವರೆಲ್ಲರ ಹಾಗೆ ಫುಕುವೊಕಾಗೆ ಅಂಥ ನೋಟ ಲಭಿಸಿತ್ತು. ಇವರೆಲ್ಲ ಒಂದರ್ಥದಲ್ಲಿ ಬಾವುಟಗಳೇ. ’ಮುಂದೆ ಹುಷಾರಾಗಿ ಸಾಗಿ, ಅಪಾಯ ಇದೆ’ ಎನ್ನುವ ಬಾವುಟಗಳು.

 
ಕೊಳ್ಳೇಗಾಲದ ಬಳಿ ಕೈಲಾಸ ಮೂರ್ತಿಯವರ ಸಾವಯವ ತೋಟದಲ್ಲಿ ಕೃಷಿ ಚಿಂತನ ಸಭೆ ಏರ್ಪಾಟಾಗಿತ್ತು. ಮಾವಿನ [...]

ಅಂಕಣಗಳು

ಹುದುಗಿದ್ದನ್ನು ಹುಡುಕಿ!

ಬನ್ನಿ, ಮಾತಾಡೋಣ!

ನೋಂದಾಯಿಸಿಕೊಳ್ಳಿ!

ಮಿತ್ರಮಾಧ್ಯಮದಲ್ಲಿ ಹೊಸ ಬರಹಗಳು ಪ್ರಕಟವಾದ ಬಗ್ಗೆ ತಿಳಿಯಲು ಇಲ್ಲಿ ನೋಂದಾಯಿಸಿ. ನಿಮ್ಮ ನೋಂದಾವಣೆ ಖಚಿತಪಡಿಸಿ ಒಂದು ಇ-ಮೈಲ್ ಕಳಿಸುತ್ತೇನೆ; ಗಮನಿಸಿ.

ಹೆಸರು
ಇಮೇಲ್