ಕ್ಯಾಸನೂರು ಕಾಡಿನಲ್ಲಿ ಮಲಗಿರುವ ಕೂಸಿಗೆ
Monday, September 15th, 2008
ಶಿಲ್ಪಶ್ರೀ,
ಬ್ಲಾಗಿಂಗ್ ಬಗ್ಗೆ ಸ್ನಾತಕೋತ್ತರ ಪ್ರಬಂಧ ಬರೆಯಬೇಕಂದ್ರೆ ಶಿವಮೊಗ್ಗ ಶಂಕರಘಟ್ಟ ಅಂಥ ಒಳ್ಳೆಯ ಜಾಗವೇನಲ್ಲ. ಬ್ಲಾಗಿಂಗ್‌ನಂಥ ಇಂಟರ್‌ನೆಟ್ ಆಧಾರಿತ ವಿಷಯಾಭ್ಯಾಸ ಮಾಡಬೇಕಂದ್ರೆ ಬೆಂಗಳೂರಿನ ಸಂಪರ್ಕ ಇರಲೇಬೇಕು. ಕಲಿಯುವ ಜಾಗಕ್ಕೂ, ವಿಷಯಕ್ಕೂ ಸಂಬಂಧವೇ ಇರದಂಥ ಕಡೆಯಲ್ಲಿ ಇದ್ದ ನೀನು ಬ್ಲಾಗಿಂಗ್ ಬಗ್ಗೆ ಬರೆಯೋದಕ್ಕೆ ಹಒರಟು ನನಗೆ ಫೋನ್ ಮಾಡಿದಾಗ ನನಗೆ ಇನ್ನಿಲ್ಲದ ಅಚ್ಚರಿ; ಸಂತೋಷ. ಬೆಂಗಳೂರಿನ ಒಂದಷ್ಟು ಪರಿಣತರು ಬಂದು ಬ್ಲಾಗಿಂಗ್ ಬಗ್ಗೆ ಮಣಗಟ್ಟಳೆ ಭಾಷಣ ಮಾಡಿದ್ದರೂ ನಿನಗೆ ಬ್ಲಾಗಿಂಗ್ ಅರ್ಥವಾಗಿರಲಿಲ್ಲ ಎಂದು ನನಗೆ ನಿನ್ನ ಮಾತಿನ ಮೂಲಕ ಗೊತ್ತಾಯ್ತು.
ಅದಕ್ಕೇ [...]


