Archive for June, 2007

ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ

Monday, June 18th, 2007

ಜಾಗತೀಕರಣದ ಬಗ್ಗೆ ಎಲ್ಲೆಲ್ಲೂ ಚಿಂತಕರು ಸಮಾನವಾಗಿ ಚಿಂತಿಸುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಡಾ|| ಚಂದ್ರಶೇಖರ ಕಂಬಾರರ `ಶಿಖರ ಸೂರ್ಯ’ ಎಂಬ ಕಾದಂಬರಿಯನ್ನೂ, ಮೆಲ್ ಗಿಬ್ಸನ್ನನ `ದಿ ಅಪೋಕೆಲಿಪ್ಸ್’ ಸಿನೆಮಾವನ್ನೂ ಹೋಲಿಸಿ ಒಂದು ಸುದ್ದಿಕಥೆಯನ್ನು ನಾನು `ಹೊಸದಿಗಂತ’ಕ್ಕಾಗಿ ಅರ್ಜೆಂಟಾಗಿ ಬರೆದಿದ್ದೆ.  ಈ ವಿಚಾರಕ್ಕಾಗಿ ಕಂಬಾರರನ್ನು ಅಭಿನಂದಿಸಿಯೂ ಇದ್ದೆ. ತಿಳಿಗಡಲು ವಿಭಾಗದಲ್ಲಿ ಈ ಲೇಖನವನ್ನು ನೀವು ಓದಬಹುದು. ಈಗ ಈ ಪುಸ್ತಕದ ಬಗ್ಗೆಯೇ ಪ್ರತ್ಯೇಕವಾಗಿ ಬರೆಯುವಾ ಎಂದು ಹೊರಟಿದ್ದೇನೆ.

`ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ

Tuesday, June 12th, 2007

ಡಾ|| ಪ್ರಸನ್ನ ನರಹರಿಯವರ  `ಗಂಡ ಹೆಂಡಿರ ನಡುವೆ’ ಎಂಬ ಚರ್ಮ ಹಾಗೂ ಲೈಂಗಿಕ ಆರೋಗ್ಯ ಕುರಿತ ಲೇಖನಗಳ ಸಂಗ್ರಹವನ್ನು ಓದಿದಾಗ, ಈ ದೇಹವೊಂದು ರೋಗಗಳ ದೊಡ್ಡ ಗೂಡಾಗಿರಬಹುದೇ ಎಂಬ ಅನುಮಾನ ಕಾಡುತ್ತದೆ. ವೈದ್ಯರಿಗೆ ಸಾಮಾನ್ಯವಾಗಿ ಮನುಷ್ಯರು ಕಾಣುವುದೇ ಮಾಂಸ – ಮಜ್ಜೆಗಳ ರಚನೆಯ ಹಾಗೆ ಎಂದು ಅನ್ನಿಸುವುದಕ್ಕೆ ಇಂಥ ಪುಸ್ತಕಗಳೂ ಕಾರಣ ಇರಬಹುದು!

ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ

Tuesday, June 12th, 2007

This is an instant review of “Ondu Badi Kadalu, a new novel by Shri Viveka Shanabhaga. A must read book.
ದೇಶ – ಕಾಲದ ಎಲ್ಲೆ ಮೀರುವ ಬಯಕೆ ಇರುವವರೂ ತಮ್ಮೊಳಗಿನ ಲೋಕಲ್ ಕುದಿಯನ್ನು ಹೊರಗೆಡಹದೆ ಇರಲಾರರು ಎಂಬುದಕ್ಕೆ ಇತ್ತೀಚೆಗೆ ಬರುತ್ತಿರುವ ಕನ್ನಡ ಕಾದಂಬರಿಗಳೇ ನಿದರ್ಶನ ಎನ್ನಬಹುದೇನೋ. ಅದರಲ್ಲೂ ಬಾಲ್ಯವನ್ನು ಹಳ್ಳಿಯಲ್ಲಿ ಕಳೆದವರು ನಗರ ತಲುಪಿ ಉಸ್ಸೆಂದ ಕೂಡಲೇ ಲೋಕಲ್ ಸರಕನ್ನೇ ಕ್ರಿಯಾಶೀಲವಾಗಿ ಹೆಣೆಯುವುದು ಕನ್ನಡ ಸಾಹಿತ್ಯದಲ್ಲಂತೂ ಸಾಮಾನ್ಯ.
[...]

ಅಂಕಣಗಳು

ಹುದುಗಿದ್ದನ್ನು ಹುಡುಕಿ!

ಬನ್ನಿ, ಮಾತಾಡೋಣ!

ನೋಂದಾಯಿಸಿಕೊಳ್ಳಿ!

ಮಿತ್ರಮಾಧ್ಯಮದಲ್ಲಿ ಹೊಸ ಬರಹಗಳು ಪ್ರಕಟವಾದ ಬಗ್ಗೆ ತಿಳಿಯಲು ಇಲ್ಲಿ ನೋಂದಾಯಿಸಿ. ನಿಮ್ಮ ನೋಂದಾವಣೆ ಖಚಿತಪಡಿಸಿ ಒಂದು ಇ-ಮೈಲ್ ಕಳಿಸುತ್ತೇನೆ; ಗಮನಿಸಿ.

ಹೆಸರು
ಇಮೇಲ್