Archive for March, 2007

ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ

Saturday, March 17th, 2007

Feature article published in Udayavani Yugadi Special Issue 2007

ಶಂಕರನಾರಾಯಣನ ಸೈಕಲ್ಲು ಪುರಾಣ

Saturday, March 17th, 2007

೧೯೮೩ರ ಅಕ್ಟೋಬರ್ ತಿಂಗಳಿನ ಮೂವತ್ತನೇ ತಾರೀಖಿನ ದಿನಚರಿ ಪುಟದಿಂದಲೇ ಈ ಕಥೆಯನ್ನು ಆರಂಭಿಸಬಹುದಾದರೆ…
ಭಾನುವಾರ ಮುತ್ತಣ್ಣ. ಸೋಮವಾರ ರಾಮರಾವ್. ಮಂಗಳವಾರ ಸುಬ್ರಹ್ಮಣ್ಯ ಭಟ್. ಬುಧವಾರ ಮಂಜಣ್ಣ. ಗುರುವಾರ ಕೃಷ್ಣಾರೆಡ್ಡಿ. ಶುಕ್ರವಾರ ಮಂಗಳಗೌರಿ. ಶನಿವಾರ ಖಾಲಿ.

ಕಪಾಲಗುಹೆಯಲ್ಲಿ ಸಾವಿನ ಪರಿಮಳ

Monday, March 5th, 2007

ಪೀಪಲ್ಸ್ ಹೆಲ್ತ್ ಕಲೆಕ್ಟಿವ್ ಕಚೇರಿ ಇದ್ದ ಆ ಮೂರಂತಸ್ತಿನ ಹಳೆ ಕಟ್ಟಡವು ಒಳಗಡೆಗಿಂತ ಹೊರಗೇ ಹೆಚ್ಚು ಬಿಳಿಚಿಕೊಂಡಿದೆ. ಇಡೀ ಲಾಬಿಯಲ್ಲೆಲ್ಲ ಬೂಸ್ಟಿನ ವಾಸನೆ. ಲಾಬಿ ಗೋಡೆಯ ಮೇಲೆ ಬುಲ್‌ಡೋಜರುಗಳು ಮತ್ತು ಟ್ರಾಕ್ಟರುಗಳ ಕೊಲಾಜ್. ಅದೂ ಈಗ ಬಿರುಕು ಬಿಟ್ಟುಹೋಗಿದೆ. ೪೦೪ ನೆಯ ಬ್ಯಾರಕ್ಕಿನಲ್ಲಿ ಇದ್ದ ಥರದ್ದೇ ಮೂಳೆ ಪುಡಿಯ ಧೂಳು ಇಲ್ಲಿಯ ಪೀಠೋಪಕರಣಗಳಲ್ಲೂ ಇದೆ. ಹಾಸಿನಲ್ಲಿ, ಒಂದು ಗೋಡೆಯ ಮೇಲೆ ಹಸಿರು ಮತ್ತು ಕಂದು ಬಣ್ಣದ ಕಲೆಗಳು ಹಾಸಿಹೋಗಿವೆ. ಅವರು ಕಟ್ಟಡ ಪ್ರವೇಶಿಸುತ್ತಿದ್ದಂತೆ ಒಂದು ದೊಡ್ಡ ದುಂಬಿ [...]

ನಾನಿನ್ನೂ ಜೀವಂತ

Monday, March 5th, 2007

೪೦೪ನೆಯ ಕ್ಯಾಂಪಿನಲ್ಲಿ ಸೆರೆಮನೆ ಆಡಳಿತದ ಕಟ್ಟಡದಲ್ಲಿ ತನಗೆ ಕೊಟ್ಟಿದ್ದ ಮಬ್ಬು ಕೊಠಡಿಯಲ್ಲಿ ಶಾನ್ ಸುಮ್ಮನೆ ಕೂತಿದ್ದಾನೆ. ದೂರವಾಣಿಯನ್ನೇ ನೋಡುತ್ತಿದ್ದಾನೆ. ಇದೆಲ್ಲ ಸತ್ಯವೇ ಅಲ್ಲ ಎಂದು ಅವನಿಗೆ ಮೊದಲು ಅನ್ನಿಸಿತ್ತು. ಅದನ್ನು ಮರದಿಂದ ಮಾಡಿರಬಹುದು ಎಂದು ಪೆನ್ಸಿಲಿನಿಂದ ತಟ್ಟಿದ. ಎಳೆದ, ಅದರ  ಕಿತ್ತ ವೈರು ಬೀಳಬಹುದೆಂದು ನಿರೀಕ್ಷಿಸಿದ.ಅದೇ ಬೇರೆಯ ಜಗತ್ತು. ಅದೆಲ್ಲ ಗತಕಾಲದ ಸಂಗತಿಗಳು. ರೇಡಿಯೋ, ಟೆಲಿವಿಜನ್‌ಗಳಂತೆ, ಟ್ಯಾಕ್ಸಿಗಳು ಮತ್ತು ಫ್ಲಶ್ ಮಾಡುವ ಲ್ಯಾವೆಟರಿಗಳಂತೆ.

ಚಿಕ್ಕಮ್ಮ

Monday, March 5th, 2007

ಆ ಬೇಸಗೆಯ ಒಂದು ದಿನ ಚಿಕ್ಕಮ್ಮ ನನ್ನನ್ನು ಎಬ್ಬಿಸಿ ಒಂದು ಲೋಟ ಚಹಾ ಮತ್ತು ಒಂದು ಬಟ್ಟಲಿನ ತುಂಬಾ ದ್ರೆಲ್- ಸಿಲ್ (ಅಕ್ಕಿ, ಗೆಣಸು, ಸಕ್ಕರೆಯ ಮಿಶ್ರಣ) ಕೊಟ್ಟಳು. ಎರಡು ಡ್ರಾಗನ್‌ಗಳು ಪರಸ್ಪರ ಅಪ್ಪಿಕೊಂಡ ಚಿತ್ರವಿದ್ದ ಹಳೆಯ ಚೀನೀ ಬಟ್ಟಲನ್ನೇ ಅವಳು ಬಳಸಿದ್ದಳು. ಆ ಬಟ್ಟಲುಗಳನ್ನು ಸಾಮಾನ್ಯವಾಗಿ ಮನೆಯ ಪೂಜಾಸ್ಥಳದಲ್ಲಿ ಇಡುತ್ತಿದ್ದರು. ದ್ರೆಲ್- ಸಿಲ್‌ನ್ನು ಕೇವಲ ಪ್ರಮುಖ ದಿನದಂದು ಮಾತ್ರ ಬಡಿಸುತ್ತಾರೆ.

ನನ್ನ ಚಿಕ್ಕಪ್ಪ

Monday, March 5th, 2007

ನನ್ನ ಚಿಕ್ಕಪ್ಪ ಇನ್ನೊಬ್ಬ ಭಿಕ್ಷುವಿನ ಜತೆ ಒಂದು ಕೊಠಡಿಯನ್ನು ಹಂಚಿಕೊಂಡಿದ್ದ. ಆ ಭಿಕ್ಷುಲಡಾಖಿನವ. ಆತ ನನಗೆ ಮೀನಿನ ಆಕಾರದಲ್ಲಿದ್ದ ಒಂದು ಮಿಠಾಯಿಯನ್ನು ಕೊಟ್ಟ ನೆನಪು ಈಗಲೂ ಇದೆ. ಆ ಮಿಠಾಯಿ ಭಾರತದ್ದು ಎಂದು ಆತ ಹೇಳಿದ್ದ. ಆಮೇಲೆ ಅಲ್ಲಿ ನಾನು ಒಂದು ಲಾಂದ್ರವನ್ನು (ಅದೇ ಮೊದಲ ಬಾರಿಗೆ!) ನೋಡಿದೆ. ಅದೂ ಭಾರತದಿಂದ ಬಂದದ್ದು ಎಂದು ನನಗೆ ಗೊತ್ತಾಯಿತು. ಭಾರತ ಎಂಥ ಅದ್ಭುತ ಸ್ಥಳವಾಗಿರಬೇಕು, ಎಷ್ಟೆಲ್ಲ ಚಿತ್ರವಿಚಿತ್ರ- ಅಪರೂಪದ ವಸುತ್ಗಳಿಂದ ತುಂಬಿರಬೇಕು ಎಂಬ ಕೌತುಕದ ಭಾವ ನನ್ನನ್ನು ಆವರಿಸಿಕೊಂಡಿತು. [...]

ಎಡಿಮಾ ಎಂಬ ಸಾವಿನ ಮುಖವಾಡ

Monday, March 5th, 2007

ಜುಲೈ  ೧೭ – ೨೦
ಹಸಿರಿನಲ್ಲಿ ಹುಡುಕಿದೆ. ಎರಡೂ ಹಸ್ತಪ್ರತಿಗಳನ್ನು  ಮತ್ತು ಅಮ್ಮನಿಗೆ ಬರೆದ ಪತ್ರವನ್ನು ಠಾಣೆ ಸಂಖ್ಯೆ ೩ರಿಂದ ಅಂಚೆಗೆ ಹಾಕಲು
ಲೀ ಗೌಲಿಯಾಂಗ್‌ಗೆ ಕೊಟ್ಟೆ.
ಹಸಿರಿನಲ್ಲಿ ಹುಡುಕಿದೆ.
ಬೆಳಗ್ಗೆ ಹುಲ್ಲು  ಕಿತ್ತೆ. ಹದಿನೆಂಟು ಜಿನ್.
ಮುಖ್ಯ ಕ್ಯಾಂಪಿಗೆ ಬಂದೆ. ಮಧ್ಯಾಹ್ನ ಮಣ್ಣಿನ ಮುದ್ದೆ ಎಳೆದೆ.
ಭವಿಷ್ಯ ಯಾವತ್ತೂ ಅಪಾರ-ದರ್ಶಕ. ಯಾರಿಗಾದರೂ ಭವಿಷ್ಯ-ವನ್ನು ಊಹಿಸೋದು ತುಂಬಾ ಕಷ್ಟ. ಅದರಲ್ಲೂ ಖೈದಿ-ಗಳ ಕುರಿತಂತೂ ಈ ಮಾತು ನೂರಕ್ಕೆ ನೂರು ನಿಜವೇ.  ನೀವು ಯಾವುದೋ ಕೆಲಸ ಮಾಡ್ತಾ ಇರ್‍ತೀರ. ಹಠಾತ್ತಾಗಿ ನಿಮ್ಮನ್ನು ಬೇರೆ ಕಡೆಗೆ ವರ್ಗ ಮಾಡ್ತಾರೆ. [...]

ಅಂಕಣಗಳು

ಹುದುಗಿದ್ದನ್ನು ಹುಡುಕಿ!

ಬನ್ನಿ, ಮಾತಾಡೋಣ!

ನೋಂದಾಯಿಸಿಕೊಳ್ಳಿ!

ಮಿತ್ರಮಾಧ್ಯಮದಲ್ಲಿ ಹೊಸ ಬರಹಗಳು ಪ್ರಕಟವಾದ ಬಗ್ಗೆ ತಿಳಿಯಲು ಇಲ್ಲಿ ನೋಂದಾಯಿಸಿ. ನಿಮ್ಮ ನೋಂದಾವಣೆ ಖಚಿತಪಡಿಸಿ ಒಂದು ಇ-ಮೈಲ್ ಕಳಿಸುತ್ತೇನೆ; ಗಮನಿಸಿ.

ಹೆಸರು
ಇಮೇಲ್