ಭಾರತೀಯರಿಗೆ ಅಲಾಸ್ಕಾದ ನೀರು ಕುಡಿಸುವ ಯೋಜನೆ : ಎಸ್೨ಸಿ ಸಂಸ್ಥೆಯ ಈ ಕನಸಿಗೆ ತಳಬುಡವೇ ಇಲ್ಲ!

Wednesday, September 8th, 2010

ಭಾರತದಲ್ಲಿ ಕುಡಿಯುವ ನೀರಿನ ಭೀಕರ ಸಮಸ್ಯೆಗೆ ಪರಿಹಾರವಾಗಿ ಅಮೆರಿಕಾದ ಎಸ್೨ಸಿ ಗ್ಲೋಬಲ್ ಸಿಸ್ಟಮ್ಸ್ ಎಂಬ ಸಂಸ್ಥೆಯು ಅಲಾಸ್ಕಾದಿಂದ ಪರಿಶುದ್ಧ ನೀರನ್ನು ಕಾರ್ಗೋ ಹಡಗುಗಳ ಮೂಲಕ ತಂದು ಮಾರಲು ನಿರ್ಧರಿಸಿದೆ. ಮುಂದಿನ ಆರೆಂಟು ತಿಂಗಳಲ್ಲೇ ಈ ಯೋಜನೆ ಸಾಕಾರಗೊಳ್ಳಲಿದೆ ಎಂದು ಸಂಸ್ಥೆಯು ಪ್ರಕಟಿಸಿದೆ. ಆದರೆ ಈ ಸಂಸ್ಥೆಯ ಹಣಕಾಸಿನ ಸಾಮರ್ಥ್ಯ, ಅಲಾಸ್ಕಾದಿಂದ ನೀರೆತ್ತುವುದರಲ್ಲಿ ಇರುವ ಸಮಸ್ಯೆಗಳು, ಭಾರತದ ನೀರಿನ ಅಗತ್ಯ – ಇವನ್ನೆಲ್ಲ ಗಮನಿಸಿದರೆ ಇದೊಂದು ಅಪ್ಪಟ ಕಮರ್ಶಿಯಲ್ ಕನಸೇ ಹೊರತು ಯಾವುದೇ ಸಾಮಾಜಿಕ ಉದ್ದೇಶವೂ ಇದರಲ್ಲಿಲ್ಲ ಎಂಬುದು [...]

ನಿತಿನ್ ಗಡ್ಕರಿಯ ರಶ್ಯಾ ಮಿತ್ರ ವಿಕ್ಟರ್ ಪೆಟ್ರಿಕ್ ನಿಜಕ್ಕೂ ಸಂಶೋಧಕರೆ?

Sunday, September 5th, 2010

ನಿರಂತರ ಚಲಿಸುವ ಯಂತ್ರ, ನೀವು ಉಸಿರಾಡಿದರೇ ಸಾಕು, ವಿದ್ಯುತ್ತನ್ನು ಉತ್ಪಾದನೆ ಮಾಡುವ ಬಟ್ಟೆ, ಪರಮಾಣು ವಿಕಿರಣಯುಕ್ರ ನೀರನ್ನು ಪರಿಶುದ್ಧವಾಗಿಸುವ ವಿಧಾನ, ಎಲ್ಲಕ್ಕಿಂತ ಮುಖ್ಯವಾಗಿ ನೀರನ್ನು ಈಗಿರುವ ಎಲ್ಲ ತಂತ್ರಜ್ಞಾನಗಳಿಗಿಂತ ೩೫೦ಕ್ಕೂ ಹೆಚ್ಚುಪಟ್ಟು ಶುದ್ಧೀಕರಿಸುವ ಸಾಧನ – ಇವೆಲ್ಲವನ್ನೂ ಕಂಡುಹಿಡಿದವರು ಯಾರು? ಅಥವಾ ಕಂಡು ಹಿಡಿದಿದ್ದೇನೆ ಎಂದವರು ಯಾರು? ಅವರೇ ವಿಕ್ಟರ್ ಐವಾನೋವಿಚ್ ಪೆಟ್ರಿಕ್.  ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರು ಇದೇ ಸೆಪ್ಟೆಂಬರ್ ೬ರಿಂದ ಮಾಡಲಿರುವ ರಶ್ಯಾ ದೇಶದ ಪ್ರವಾಸದ ಸಂಘಟಕರೇ ಈ ವಿಕ್ಟರ್ [...]

ವೇದಾಂತ : ಅಗೆದಷ್ಟೂ ಅವಾಂತರ

Sunday, September 5th, 2010
ವೇದಾಂತ : ಅಗೆದಷ್ಟೂ ಅವಾಂತರ

ನೀವು ಒಡಿಶಾ(ಒರಿಸ್ಸಾ)ದ ರಾಯ್‌ಪುರ, ರಾಂಚಿ ಅಥವಾ ಭುವನೇಶ್ವರಕ್ಕೆ ಹೋದಲ್ಲಿ ನಿಮ್ಮನ್ನು ಸ್ವಾಗತಿಸುವುದು ಅಭ್ಯುದಯದ ಹೇಳಿಕೆಗಳನ್ನು ಹೊತ್ತ ಬೃಹತ್ ಹೋರ್ಡಿಂಗ್‌ಗಳು. ಕಲಹನಿ (ಕಲಹಂದಿ) ಜಿಲ್ಲೆಯೇ ಭವ್ಯವಾಗಿ ರೂಪಾಂತರಗೊಳ್ಳುತ್ತಿದೆ, ಒಡಿಶಾ ರಾಜ್ಯದಲ್ಲಿ ಸುಖವನ್ನು ಅಗೆಯಲಾಗುತ್ತಿದೆ – ಇತ್ಯಾದಿ ಘೋಷಣೆಗಳನ್ನು ನೋಡಿ ನೀವು ನಿಬ್ಬೆರಗಾಗುತ್ತೀರಿ. ಛಪ್ಪನ್ ಸಾಲಾರ್ ಬರಗಾಲದಂಥ ಭೀಕರ ಬರಗಾಲಗಳ ಸರಣಿಯಿಂದ ತತ್ತರಿಸಿದ, ಹಸಿವಿನ ಸಾವುಗಳಿಗೆ ಕುಪ್ರಸಿದ್ಧವಾದ ಕಲಹನಿ ಜಿಲ್ಲೆ ಈಗ ಸುಖೀ ಬದುಕಿನ ಸ್ವರ್ಗವಾಗಿದೆಯೆ ಎಂದು ನೀವು ಅಚ್ಚರಿಗೆ ಬೀಳುತ್ತೀರಿ.

[...]

ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !

Saturday, September 4th, 2010
ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !

ಮೊನ್ನೆ ಯಾರನ್ನೋ ಭೇಟಿಯಾಗಲೆಂದು ಸರಸರ ಅಂಗಿ ಎಳೆದುಕೊಂಡು ಹೊರಬಂದೆ. ಸ್ವಲ್ಪ ದೂರ ಹೋಗುವಷ್ಟರಲ್ಲೇ ಬಲ ತೋಳಿನಲ್ಲಿ ಏನೋ ಮೃದುವಾದ ಹುಳ ಇದ್ದ ಹಾಗೆ ಅನ್ನಿಸಿ ಹೊರಗಿನಿಂದಲೇ ಮುಟ್ಟಿ ನೋಡಿದೆ. ಯಾರೋ ಜೇಮ್ಸ್‌ಬಾಂಡ್ ಬಳಸುವ ಅತಿಸೂಕ್ಷ್ಮ ಸೂಜಿಯನ್ನು ಚುಚ್ಚಿದ ಹಾಗೆ ಮೈಯೆಲ್ಲ ಜುಮ್ಮೆಂದಿತು. ತಕ್ಷಣ ದೇಹ ಸ್ವಯಂಚಾಲಿತವಾಗಿ, ನನ್ನನ್ನು ಕೇಳದೇ ಸ್ಪಂದಿಸಿತು. ನನ್ನ ಕೈಯಿಂದ ಕ್ಷಣಮಾತ್ರದಲ್ಲಿ ಆ ಹುಳವನ್ನು ಹಾಗೇ ಒತ್ತಿಬಿಟ್ಟೆ. ಆಮೇಲೆ ಅದನ್ನು ಕೊಡವಿದೆ. ಒಂದು ಕರಿಮುದ್ದೆಯಂಥ ಮೃತದೇಹ ರಸ್ತೆಯಲ್ಲಿ ಬಿದ್ದಿತ್ತು. ಅದನ್ನು ನೋಡೋದೇನು? ಅಷ್ಟುಹೊತ್ತಿಗೆ ನನ್ನ [...]

ತುಂಟ ಸಿದ್ಧಾರ್ಥನ ಕಲಾಕೃತಿಗಳು

Friday, September 3rd, 2010
ತುಂಟ ಸಿದ್ಧಾರ್ಥನ ಕಲಾಕೃತಿಗಳು

ನನ್ನ ಗೆಳೆಯ ಕಲಾವಿದ ಬಿ. ದೇವರಾಜ್‌ನ ಮಗ ಸಿದ್ಧಾರ್ಥ. ಅವನೀಗ ಎರಡನೇ ತರಗತಿಯಲ್ಲಿ ಓದುತ್ತಿದ್ದಾನೆ. ಸದಾ ನಗುಮುಖದಲ್ಲೇ ನಮ್ಮನ್ನು ಮಾತಾಡಿಸುವ ಸಿದ್ಧಾರ್ಥನದು ಬುದ್ಧನಂಥ ಮುಗ್ಧ ಮನಸ್ಸು.
ಕಳೆದ ವಾರ ದೇವರಾಜನನ್ನು ಮಾತಾಡಿಸಲೆಂದು ಅವನ ಮನೆಗೆ ಹೋಗಿದ್ದೆ. ಮನೆಯಲ್ಲೆ ತೂಗು ಹಾಕಿದ್ದ ಕಲಾಕೃತಿಗಳು ಗಮನ ಸೆಳೆದವು. ಆಮೇಲೆ ಗೊತ್ತಾಗಿದ್ದು, ಅವೆಲ್ಲ ದೇವರಾಜನದಲ್ಲ, ಅವನ ಮಗ ಸಿದ್ಧಾರ್ಥನದು!

ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ

Sunday, May 2nd, 2010
ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ

ಉಮೇಶ ಅಲ್ಲಿ ಟರಂ ಟರಂ ತಮಟೆ ಬಾರಿಸುತ್ತಿದ್ದ.
ಉಮೇಶ, ಅತಿಥಿಗೃಹದಲ್ಲಿ ನಮ್ಮ ಊಟಕ್ಕೆ ಎಲ್ಲ ವ್ಯವಸ್ಥೆ ಮಾಡಿದ್ದ.
ಉಮೇಶ, ಯಾವಾಗ ಯಾವ ಹಳ್ಳಿಗೆ ಹೋಗಬೇಕು ಎಂದು ಮೊದಲೇ ಪಟ್ಟಿ ಮಾಡಿದ್ದ.
ಉಮೇಶ, ನನಗಾಗಿ ಹಾಡಿದ. ಕತ್ತಲೇ ತುಂಬಿಕೊಂಡಿದ್ದ ಆ ಕೋಣೆಯಲ್ಲಿ ಅವನ ಹಾಡು ನನ್ನೆದೆಯನ್ನು ತುಂಬಿತ್ತು.
ಉಮೇಶ ಪ್ಲಾಸ್ಟಿಕ್ ಕವರನ್ನು ನನ್ನ ಬಾಚಣಿಗೆಗೆ ಸುತ್ತಿ ತಮಿಳು ಹಾಡನ್ನು ಮೀಟಿದ.

ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?

Thursday, April 29th, 2010

ಗುಸು ಗುಸು ಪಿಸು ಪಿಸು ಮಾತು, ಕೆಲವೊಮ್ಮೆ ಬರೀ ಅಬ್‌ಸ್ಟ್ರಾಕ್ಟ್ ಎನ್ನಿಸುವ ಸಂಭಾಷಣೆಗಳು. ಸಾಂಸ್ಕೃತಿಕ ಪರಿಭಾಷೆಯ ಹಾವಳಿ. ಭಾರತೀಯರಿಗೆ ಅಶ್ಲೀಲ ಎನ್ನಿಸುವ ದೃಶ್ಯಗಳು. ಕಲ್ಪನೆಗೂ ಮೀರಿದ ನಾಟಕೀಯ ಸನ್ನಿವೇಶಗಳು. ಒಂದೂವರೆ ತಾಸಿನಲ್ಲೇ ಎಲ್ಲವನ್ನೂ ಹೇಳುವ ತವಕ. ಕಿವಿ ಗಡಚಿಕ್ಕುವಂಥ ಶಬ್ದಮಾಲೆ. ಕ್ರೌರ್ಯದ ವಾಸ್ತವದರ್ಶನ. ವಾಸ್ತವವನ್ನು ಮತ್ತಷ್ಟು ಸಾಂದ್ರವಾಗಿಸುವ ನಟನೆ. ಸಿನೆಮಾದಲ್ಲಿ ಇಲ್ಲದ ಹಾಡು, ಟ್ಯೂನ್ ಮಾರುಕಟ್ಟೆಗೆ ಬಂದ ಆಲ್ಬಮ್‌ನಲ್ಲಿ ಪ್ರತ್ಯಕ್ಷ….

ಅಂಕಣಗಳು

ಹುದುಗಿದ್ದನ್ನು ಹುಡುಕಿ!

ಬನ್ನಿ, ಮಾತಾಡೋಣ!

ನೋಂದಾಯಿಸಿಕೊಳ್ಳಿ!

ಮಿತ್ರಮಾಧ್ಯಮದಲ್ಲಿ ಹೊಸ ಬರಹಗಳು ಪ್ರಕಟವಾದ ಬಗ್ಗೆ ತಿಳಿಯಲು ಇಲ್ಲಿ ನೋಂದಾಯಿಸಿ. ನಿಮ್ಮ ನೋಂದಾವಣೆ ಖಚಿತಪಡಿಸಿ ಒಂದು ಇ-ಮೈಲ್ ಕಳಿಸುತ್ತೇನೆ; ಗಮನಿಸಿ.

ಹೆಸರು
ಇಮೇಲ್