ಭಿಕ್ಷುವಾದ ನನಗೆ ಹೊಸ ಹೆಸರು: ಆದೇ ಪಾಲ್ದೆನ್ ಗ್ಯಾತ್ಸೋ

Sunday, September 5th, 2010
ಭಿಕ್ಷುವಾದ ನನಗೆ ಹೊಸ ಹೆಸರು: ಆದೇ ಪಾಲ್ದೆನ್ ಗ್ಯಾತ್ಸೋ

ಅಪ್ಪ ನನ್ನನ್ನು ಕರೆದಾಗ ನಾನು ಆತ ಪವಿತ್ರ ಗ್ರಂಥಗಳನ್ನು ಓದುತ್ತ ಕಾಲ ಕಳೆಯುತ್ತಿದ್ದ ಮನೆಯ ಮೇಲ್ಮಹಡಿಯ ಕೊಠಡಿಗೆ ಹೋದೆ. ಮಣ್ಣಿನ ಒಲೆಯ ಮೇಲೆ ಚಹಾದ ಮಡಕೆಯೊಂದಿತ್ತು. ನನ್ನ ಚಿಕ್ಕಪ್ಪ- ಅದೇ ಭಿಕ್ಷು ಕೂಡಾ ಅಲ್ಲಿದ್ದ. ಅಲ್ಲಿಗೆ ನನ್ನ ಅಜ್ಜಿಯೂ ಬಂದಳು. ಅಪ್ಪ ತನ್ನ ಚಹಾ ಲೋಟವನ್ನೆತ್ತಿದ. `ಉಫ್’ ಎಂದು ಆರಿಸುತ್ತ ಒಂದು ಗುಟುಕು ಹೀರಿದ. ನನ್ನತ್ತ ತಿರುಗಿ, “ಬು, ನಿನ್ನ ಚಿಕ್ಕಪ್ಪ ಮತ್ತು ನಾನು ಇಬ್ಬರೂ ನೀನು ಬೌದ್ಧಾಲಯ ಸೇರಬೇಕೆಂದು ಬಯಸಿದ್ದೇವೆ” ಎಂದ. ತನ್ನ ಪರವಾಗಿ ಅಜ್ಜಿಯೇ [...]

Jung Chang’s writing room

Monday, December 8th, 2008
Jung Chang's writing room

I have worked in this room since 1992, and wrote Mao: The Unknown Story here. My co-author and husband Jon Halliday has a study on the floor below. We’d meet up at lunchtime and exchange our discoveries.

ಮಾವೋ: ಗೊತ್ತಿಲ್ಲದ ಇತಿಹಾಸದ ಮೊದಲ ಪುಟ

Monday, December 8th, 2008

ಮಾವೋ ತ್ಸೆ ತುಂಗ್. 
ದಶಕಗಳ ಕಾಲ ಜಗತ್ತಿನ ಕಾಲುಭಾಗದಷ್ಟು ಜನರ ಮೇಲೆ ನಿರಂಕುಶ ಪ್ರಭುತ್ವ ಹೊಂದಿದವ. 
ಅವನೇ ಈ ಜಗತ್ತಿನ ಇತಿಹಾಸದಲ್ಲಿ ಏಳು ಕೋಟಿ ಜನರು ಶಾಂತಿಕಾಲದಲ್ಲೇ ಸಾಯುವುದಕ್ಕೆ ಕಾರಣ. ಇಪ್ಪತ್ತನೇ ಶತಮಾನದಲ್ಲಿ ಅವನ ಹಾಗೆ ನರಮೇಧ ನಡೆಸಿದವರೇ ಇಲ್ಲ. 
ಹುಟ್ಟಿದ್ದು ಚೀನಾದ ಹೊಟ್ಟೆಯಲ್ಲಿರುವ ಹುನಾನ್ ಪ್ರಾಂತದ ಶಾವೋಸಾನ್ ಕಣಿವೆಯ ಒಂದು ರೈತಾಪಿ ಕುಟುಂಬದಲ್ಲಿ. ಜನ್ಮದಿನಾಂಕ ೨೬ ಡಿಸೆಂಬರ್ ೧೮೯೩. ಅವನ ಹಿರೀಕರೆಲ್ಲರೂ ಇದೇ ಕಣಿವೆಯಲ್ಲಿ ಐದು ಶತಮಾನಗಳಿಂದ ಇದ್ದವರೇ. 
[...]

Only in Mitramaadhyama !! Mao, The Unknown Story

Monday, December 8th, 2008
Only in Mitramaadhyama !! Mao, The Unknown Story

Only in Mitramaadhyama !!
Mao, The Unknown Story – KANNADA
 

Yes!! World’s most acclaimed book, MAO, THE UNKNOWN STORY, by Jung Chang and Jon Halliday will be published here in www.mitramaadhyama.co.in in Kannada very shortly. Get ready to read the most shocking biography of the century !
To be published soon. Keep visiting  this wesbite for not just this [...]

೩೦ ಸೆಂಟಿಮೀಟರ್‌ನಲ್ಲಿ ಸಿಹಿನಿದ್ದೆಯ ಸುಖ

Sunday, December 7th, 2008
೩೦ ಸೆಂಟಿಮೀಟರ್‌ನಲ್ಲಿ ಸಿಹಿನಿದ್ದೆಯ ಸುಖ

 

ಜುಲೈ  ೨೧:  ಬೀಟ್‌ರೂಟ್ ಕೆಲಸ.ಮಳೆ. ವೈಮಾನಿಕ ಕೀಟನಾಶಕ ಸಿಂಪಡನೆ ಬಗ್ಗೆ ಚಿಂತನೆ. ನನಗೆ ಶಿಕ್ಷೆ ನೀಡಲು ಇತರರ ಯೋಚನೆ. ಕ್ಷೌರ. ಕೀಟನಾಶಕ ಕವನ ರವಾನೆ.
ಮುಖ್ಯ ಕ್ಯಾಂಪಿನಲ್ಲಿ ಭಾರೀ ಚಟುವಟಿಕೆ. ಯಾರಿಗೆ ಯಾವ ಬ್ಯಾರಕ್ ಎಂದು ಗುಂಪಿನ ನಾಯಕ ಅದಾಗಲೇ ತೀರ್ಮಾನಿಸಿ-ದಾನೆ. ಸಾಮಾನ್ಯ-ವಾಗಿ ತನಗೆ ಹತ್ತಿರ ಇರೋ ಖೈದಿಗಳಿಗೆ ಹತ್ತಿರದಲ್ಲೇ ವಸತಿ. ‘ಮನೆಯಲ್ಲಿ ನಿನ್ನ ಹೆಂಗಸಿನ ಬಳಿ ಮಲಗು.ಪರ ಊರಿನಲ್ಲಿ ಗೋಡೆ ಪಕ್ಕ ಮಲಗು’ ಎಂಬುದೇ ಇಲ್ಲಿನ ಜಾಣತನದ ಮಾತು. ಗೋಡೆ ಬದಿಯ ಬ್ಯಾರಕ್-ಗಳು ಅತ್ಯುತ್ತಮ. ಜನಪ್ರಿಯರಲ್ಲದ ಖೈದಿಗಳಿಗೆ [...]

ಕಪಾಲಗುಹೆಯಲ್ಲಿ ಸಾವಿನ ಪರಿಮಳ

Monday, March 5th, 2007

ಪೀಪಲ್ಸ್ ಹೆಲ್ತ್ ಕಲೆಕ್ಟಿವ್ ಕಚೇರಿ ಇದ್ದ ಆ ಮೂರಂತಸ್ತಿನ ಹಳೆ ಕಟ್ಟಡವು ಒಳಗಡೆಗಿಂತ ಹೊರಗೇ ಹೆಚ್ಚು ಬಿಳಿಚಿಕೊಂಡಿದೆ. ಇಡೀ ಲಾಬಿಯಲ್ಲೆಲ್ಲ ಬೂಸ್ಟಿನ ವಾಸನೆ. ಲಾಬಿ ಗೋಡೆಯ ಮೇಲೆ ಬುಲ್‌ಡೋಜರುಗಳು ಮತ್ತು ಟ್ರಾಕ್ಟರುಗಳ ಕೊಲಾಜ್. ಅದೂ ಈಗ ಬಿರುಕು ಬಿಟ್ಟುಹೋಗಿದೆ. ೪೦೪ ನೆಯ ಬ್ಯಾರಕ್ಕಿನಲ್ಲಿ ಇದ್ದ ಥರದ್ದೇ ಮೂಳೆ ಪುಡಿಯ ಧೂಳು ಇಲ್ಲಿಯ ಪೀಠೋಪಕರಣಗಳಲ್ಲೂ ಇದೆ. ಹಾಸಿನಲ್ಲಿ, ಒಂದು ಗೋಡೆಯ ಮೇಲೆ ಹಸಿರು ಮತ್ತು ಕಂದು ಬಣ್ಣದ ಕಲೆಗಳು ಹಾಸಿಹೋಗಿವೆ. ಅವರು ಕಟ್ಟಡ ಪ್ರವೇಶಿಸುತ್ತಿದ್ದಂತೆ ಒಂದು ದೊಡ್ಡ ದುಂಬಿ [...]

ನಾನಿನ್ನೂ ಜೀವಂತ

Monday, March 5th, 2007

೪೦೪ನೆಯ ಕ್ಯಾಂಪಿನಲ್ಲಿ ಸೆರೆಮನೆ ಆಡಳಿತದ ಕಟ್ಟಡದಲ್ಲಿ ತನಗೆ ಕೊಟ್ಟಿದ್ದ ಮಬ್ಬು ಕೊಠಡಿಯಲ್ಲಿ ಶಾನ್ ಸುಮ್ಮನೆ ಕೂತಿದ್ದಾನೆ. ದೂರವಾಣಿಯನ್ನೇ ನೋಡುತ್ತಿದ್ದಾನೆ. ಇದೆಲ್ಲ ಸತ್ಯವೇ ಅಲ್ಲ ಎಂದು ಅವನಿಗೆ ಮೊದಲು ಅನ್ನಿಸಿತ್ತು. ಅದನ್ನು ಮರದಿಂದ ಮಾಡಿರಬಹುದು ಎಂದು ಪೆನ್ಸಿಲಿನಿಂದ ತಟ್ಟಿದ. ಎಳೆದ, ಅದರ  ಕಿತ್ತ ವೈರು ಬೀಳಬಹುದೆಂದು ನಿರೀಕ್ಷಿಸಿದ.ಅದೇ ಬೇರೆಯ ಜಗತ್ತು. ಅದೆಲ್ಲ ಗತಕಾಲದ ಸಂಗತಿಗಳು. ರೇಡಿಯೋ, ಟೆಲಿವಿಜನ್‌ಗಳಂತೆ, ಟ್ಯಾಕ್ಸಿಗಳು ಮತ್ತು ಫ್ಲಶ್ ಮಾಡುವ ಲ್ಯಾವೆಟರಿಗಳಂತೆ.

ಅಂಕಣಗಳು

ಹುದುಗಿದ್ದನ್ನು ಹುಡುಕಿ!

ಬನ್ನಿ, ಮಾತಾಡೋಣ!

ನೋಂದಾಯಿಸಿಕೊಳ್ಳಿ!

ಮಿತ್ರಮಾಧ್ಯಮದಲ್ಲಿ ಹೊಸ ಬರಹಗಳು ಪ್ರಕಟವಾದ ಬಗ್ಗೆ ತಿಳಿಯಲು ಇಲ್ಲಿ ನೋಂದಾಯಿಸಿ. ನಿಮ್ಮ ನೋಂದಾವಣೆ ಖಚಿತಪಡಿಸಿ ಒಂದು ಇ-ಮೈಲ್ ಕಳಿಸುತ್ತೇನೆ; ಗಮನಿಸಿ.

ಹೆಸರು
ಇಮೇಲ್