ಒಂದು ಮುತ್ತಿನ ಕಥೆ

Sunday, December 7th, 2008

ಈ ಸಲ ರಾಜಿಗೆ ಸರಿಯಾಗಿ ಹೇಳಿಬಿಡಬೇಕು.ನಾಳೆ ಎಷ್ಟು ಹೊತ್ತಾದರೂ ಸರಿ, ನನ್ನ ಜೊತೆಗೆ ಕಾಲ ಕಳೆಯಲು ಬರಲೇಬೇಕೆಂದು.ಅವಳಿಗೆ ಹೇಳಲೇಬೇಕು, ನಾನು ಅವಳಿಗೆ ಒಂದು ಮುತ್ತು ಕೊಡುವುದು ಬಾಕಿ ಇದೆ ಎಂದು.ಎಷ್ಟು ದಿನ ಆಂತ ಹೀಗೆ ಕಾಯುವುದು ? ಅವಳಿಗೆ ಈಗಲಾದರೂ ಗೊತ್ತಾಗುವುದಿಲ್ವಾ ? ಹಾಗಾದರೆ ಅವಳು ನನಗೆ ದಿನಾಲೂ ಫೋನು ಮಾಡುವುದಾದರೂ ಯಾಕೆ ? ವಾರಕ್ಕೊಂದು ಇ-ಮೈಲು ಕಳಿಸುವುದಾದರೂ ಯಾಕೆ ? ಪ್ರೀತಿ ಇಲ್ಲದ ಮೇಲೆ ಮಾತುಕತೆಯ ಹೂವು ಅರಳಿದ್ದಾದರೂ ಹೇಗೆ ? ಪತ್ರ ಬರೆಯಲಿಕ್ಕೆ ಬರುತ್ತೆ. [...]

ನಾಯಿಬೆಲ್ಟು

Sunday, December 7th, 2008

ಅನಿಟಾ. ಟಿ ಬಂದ ಅಕ್ಷರಗಳೆಲ್ಲ ಟಕಾರದ್ದು ಎಂದು ತಿಳಿದೇ ಬೆಳೆದವಳು. ಈ ಡಿಜಿಟಲ್ ಕಚೇರಿಯಲ್ಲಿ ಪ್ರೊಡ್ಯೂಸರ್. ಅವಳ ಕಣ್ಣುಗಳಲ್ಲಿ ಏನಿದೆ ? 
ಯಾವುದೇ ಐಟಿ ಕಚೇರಿಗೆ ಹೋಗಿ ಶೂಟಿಂಗ್ ಮಾಡಬಲ್ಲೆ ಅನ್ನೋ ಉತ್ಸಾಹ. 
ಅವಳ ಉಡುಗೆ ಗರಿಗರಿ. ಒಮ್ಮೆ ಪ್ಯಾಂಟು, ಟೀ ಶರ್ಟು. ಇನ್ನೊಮ್ಮೆ ಚೂಡಿದಾರ್.
ಅವಳನ್ನೂ ಸೇರಿಸ್ಕೊಂಡು ಎಲ್ಲರ ಕುತ್ತಿಗೆಯಲ್ಲಿ ನಾಯಿಬೆಲ್ಟು ಮಾತ್ರ ಜೋತುಬಿದ್ದಿರುತ್ತೆ. ಅದನ್ನು ತೊಡೋದೂ ಒಂದು ಕಲೆ. ಕೆಲವರು ಸೊಂಟದ ಬೆಲ್ಟಿನ ಜೊತೆ ಸೇರಿಸ್ತಾರೆ. ಹುಡುಗೀರು ಅದನ್ನು ಸರದ ಬದಲಿಗೆ ತೊಟ್ಕೋತಾರೆ. ಈ ಬೆಲ್ಟಿನಲ್ಲಿರೋದೇ ಒಂದು ಡಿಜಿಟಲ್ [...]

ಬಿಲಾಸ

Tuesday, December 2nd, 2008
ಬಿಲಾಸ

‘ನೀನೂ ಕಲಾವಿದ; ನಾನೂ ಕಲಾವಿದ. ಚೌಕಾಶಿ ಯಾಕೆ ಮಾಡ್ತೀಯ? ಕೊಡು ನಾನೂರಾಐವತ್ತು ’ ಬಲಬೀರ್ ಕಣ್ಣಲ್ಲಿ ಕಣ್ಣಿಟ್ಟು ಹೇಳಿದಾಗ ನಾನು ಮಾತಾಡಲಾಗಲಿಲ್ಲ. ಬಾನ್ಸುರಿ ಏನೆಂದು ಗೊತ್ತಿಲ್ಲದೇ ಪೀಪಿ ಥರ ಊದಬೇಕೆಂದು ಯಾವುದೋ ಭಾಷೆಯ ಯಾವುದೋ ಯುವಕ ಅವನ ಬಳಿ ವಾದಿಸುತ್ತಿದ್ದ. ಅವನ ಗೆಳತಿಯಂತೂ ಹೇಗಾದರೂ ತನ್ನ ಹುಡುಗ ಬಾನ್ಸುರಿ ಬಾರಿಸಿಯೇ ಬಾರಿಸುತ್ತಾನೆ ಎಂಬ ಹುಮ್ಮಸ್ಸಿನಲ್ಲಿ ಪರ್ಸ್ ಬಿಚ್ಚುತ್ತಿದ್ದಳು. ಸಂಜೆಯ ಬಣ್ಣಗಳನ್ನು ಹೊದ್ದುಕೊಂಡ ಕನಾಟ್‌ಪ್ಲೇಸ್ ದಿಲ್ಲಿಯ ನರ-ನಾರಿಯರ ಏಕೈಕ ಶಾಪಿಂಗ್ ಏರಿಯಾ ಎಂಬಂತೆ ಬಳುಕುತ್ತಿತ್ತು. 
ನಾವು – ಅಂದರೆ ನಾನು [...]

ಹದಿನಾರನೇ ಕೆಲಸ

Saturday, July 26th, 2008

(Published in Hosadigantha Yugadi 2008 issue)
ಇನ್ನೇನು ವಿಮಾನ ಬೆಂಗಳೂರಿನಿಂದ ಬಂದೇ ಬಿಡುತ್ತದೆ ಎಂಬಂತೆ ದೂರದ ಗೋಪುರದ ಸೂಚಕ ದೀಪವು ಗಿರಗಿರ ತಿರುಗುತ್ತ ಮಿನುಗತೊಡಗಿತು. ನಮ್ಮ ಫೋಟೋಗ್ರಾಫರ್ ಗಡಬಡಿಸಿ ಸೀದಾ ಟರ್ಮಾಕಿನತ್ತ ನಡೆದ. ದಿನದ ಮೊದಲನೇ ವಿಮಾನ ಬಂತಲ್ಲ ಎಂಬ ಕರ್ತವ್ಯಪ್ರeಯಿಂದ ಪೇದೆಗಳು ಎದ್ದು ಟೋಪಿಯನ್ನು ಸರಿಪಡಿಸಿಕೊಂಡು, ಪ್ಯಾಂಟನ್ನು ಬಿಗಿ ಮಾಡಿಕೊಳ್ಳುತ್ತ ನಿಂತರು. ಸಖಿಯರೇ ಇಲ್ಲದ ಈ ನಿಲ್ದಾಣದ ಏಕಕ ಅಧಿಕಾರಿ ಯಾಂತ್ರಿಕವಾಗಿ ಆಕಾಶ ನೋಡತೊಡಗಿದ. ಅತಿಥಿಗಳನ್ನು ಸ್ವಾಗತಿಸಲೆಂದೇ ಹಾಕಿಕೊಂಡ ಯೂನಿಫಾರಂನ ವಿಚಿತ್ರ ಗಡಸಿನಲ್ಲಿ ನಾನೂ ಚಡಪಡಿಸತೊಡಗಿದೆ. [...]

ಹಸಿರೆಲೆ,ಗಡಿಯಾರ,ಪಾಪಿನ್ಸ್

Friday, August 17th, 2007

ಒಂದು ಹಸಿರು ಎಲೆ ನನ್ನ ಹಳೆ ಡೈರಿಯ ಒಳಗೆ ಕೂತಿದೆ.
ನಿಮ್ಮ ಡೈರಿಯಲ್ಲೂ ಅಂಥ ಒಂದು ಎಲೆಯೋ, ಹೂವೋ, ಕಾಗದವೋ. ನಾನು ನಿಮ್ಮನ್ನು ನೋಡಿಲ್ಲ. ನಿಮ್ಮ ನೆನಪುಗಳನ್ನು ತಿಳಿದಿಲ್ಲ. ನನ್ನನ್ನು ಕ್ಷಮಿಸಿ. ನಾನು ಬದಿರೋದನ್ನ ನೀವು ಓದುತ್ತೀರಿ. ಅಷ್ಟೆ. ಅದಕ್ಕಾಗಿ ನಾನು ಆ ಹಸಿರು ಎಲೆಯ ಕಥೆಯನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುತ್ತಿದ್ದೇನೆ.

ಶಂಕರನಾರಾಯಣನ ಸೈಕಲ್ಲು ಪುರಾಣ

Saturday, March 17th, 2007

೧೯೮೩ರ ಅಕ್ಟೋಬರ್ ತಿಂಗಳಿನ ಮೂವತ್ತನೇ ತಾರೀಖಿನ ದಿನಚರಿ ಪುಟದಿಂದಲೇ ಈ ಕಥೆಯನ್ನು ಆರಂಭಿಸಬಹುದಾದರೆ…
ಭಾನುವಾರ ಮುತ್ತಣ್ಣ. ಸೋಮವಾರ ರಾಮರಾವ್. ಮಂಗಳವಾರ ಸುಬ್ರಹ್ಮಣ್ಯ ಭಟ್. ಬುಧವಾರ ಮಂಜಣ್ಣ. ಗುರುವಾರ ಕೃಷ್ಣಾರೆಡ್ಡಿ. ಶುಕ್ರವಾರ ಮಂಗಳಗೌರಿ. ಶನಿವಾರ ಖಾಲಿ.

ಕುರಿ ತಲೆ

Sunday, January 14th, 2007

ಟುಡೇ ಐ ವಿಲ್ ಪ್ರಿಪೇರ್ ಟೀ ಎಂದು ವಾಸುದೇವನ್ ಅಲ್ಯುಮಿನಿಯಂ ಟೀಪಾತ್ರೆಯನ್ನು ಸ್ಟೌವ್ ಮೇಲೆ ಇಟ್ಟು ನೀರು ಹಾಕಿದಾಗಲೇ ಸುಧಾಕರ ನಿಧಾನವಾಗಿ ರೂಮಿನ ಚಹರೆ ಹೀರತೊಡಗಿದ.

ಅಂಕಣಗಳು

ಹುದುಗಿದ್ದನ್ನು ಹುಡುಕಿ!

ಬನ್ನಿ, ಮಾತಾಡೋಣ!

ನೋಂದಾಯಿಸಿಕೊಳ್ಳಿ!

ಮಿತ್ರಮಾಧ್ಯಮದಲ್ಲಿ ಹೊಸ ಬರಹಗಳು ಪ್ರಕಟವಾದ ಬಗ್ಗೆ ತಿಳಿಯಲು ಇಲ್ಲಿ ನೋಂದಾಯಿಸಿ. ನಿಮ್ಮ ನೋಂದಾವಣೆ ಖಚಿತಪಡಿಸಿ ಒಂದು ಇ-ಮೈಲ್ ಕಳಿಸುತ್ತೇನೆ; ಗಮನಿಸಿ.

ಹೆಸರು
ಇಮೇಲ್