ಕಪಾಲಗುಹೆಯಲ್ಲಿ ಸಾವಿನ ಪರಿಮಳ
Monday, March 5th, 2007ಪೀಪಲ್ಸ್ ಹೆಲ್ತ್ ಕಲೆಕ್ಟಿವ್ ಕಚೇರಿ ಇದ್ದ ಆ ಮೂರಂತಸ್ತಿನ ಹಳೆ ಕಟ್ಟಡವು ಒಳಗಡೆಗಿಂತ ಹೊರಗೇ ಹೆಚ್ಚು ಬಿಳಿಚಿಕೊಂಡಿದೆ. ಇಡೀ ಲಾಬಿಯಲ್ಲೆಲ್ಲ ಬೂಸ್ಟಿನ ವಾಸನೆ. ಲಾಬಿ ಗೋಡೆಯ ಮೇಲೆ ಬುಲ್‌ಡೋಜರುಗಳು ಮತ್ತು ಟ್ರಾಕ್ಟರುಗಳ ಕೊಲಾಜ್. ಅದೂ ಈಗ ಬಿರುಕು ಬಿಟ್ಟುಹೋಗಿದೆ. ೪೦೪ ನೆಯ ಬ್ಯಾರಕ್ಕಿನಲ್ಲಿ ಇದ್ದ ಥರದ್ದೇ ಮೂಳೆ ಪುಡಿಯ ಧೂಳು ಇಲ್ಲಿಯ ಪೀಠೋಪಕರಣಗಳಲ್ಲೂ ಇದೆ. ಹಾಸಿನಲ್ಲಿ, ಒಂದು ಗೋಡೆಯ ಮೇಲೆ ಹಸಿರು ಮತ್ತು ಕಂದು ಬಣ್ಣದ ಕಲೆಗಳು ಹಾಸಿಹೋಗಿವೆ. ಅವರು ಕಟ್ಟಡ ಪ್ರವೇಶಿಸುತ್ತಿದ್ದಂತೆ ಒಂದು ದೊಡ್ಡ ದುಂಬಿ [...]

