ಬ್ಯಾಲಾಳು ಮತ್ತು ಬಿಳಲು
Monday, December 1st, 2008
ಎಲ್ಲದಕ್ಕೂ ಒಂದು ಕೊನೆ ಇರಲೇಬೇಕು ಅಲ್ವೆ? ಕಲಿ-ಯುಗ ಅಂಕಣಕ್ಕೂ ಇಂದೇ ಕೊನೆ! ’ಉದಯವಾಣಿ’ಯಲ್ಲಿ ಕಳೆದ ಒಂದೂಕಾಲು ವರ್ಷದಿಂದ ಮೂಡಿದ ಕಲಿ-ಯುಗ ಅಂಕಣವನ್ನು ಖುಷಿಯಿಂದಲೇ ನಿಲ್ಲಿಸುತ್ತಿದ್ದೇನೆ. ಕೆಲಸ ಬಿಡುವಾಗ ಖುಷಿಪಡಿ ಎಂದ ನಾನು ನನ್ನ ಅಂಕಣ ನಿಲ್ಲಿಸುವಾಗ ಬೇಜಾರಾಗೋದು ಪಾಸಿಟಿವ್ ಬದುಕಿನ ಲಕ್ಷಣವಲ್ಲ ಅಲ್ವೆ?
ಉದಯವಾಣಿಯಲ್ಲಿ ಬಂದ ನನ್ನ ಲೇಖನಗಳನ್ನು ಓದಿದ ಹಲವರು ನನ್ನನ್ನು ಈಗಲೂ ಬೇರೆ ಬೇರೆ ಸಂದರ್ಭಗಳಲ್ಲಿ ಸಂಪರ್ಕಿಸುತ್ತಿದ್ದಾರೆ; ಮಾಹಿತಿ ಕೇಳುತ್ತಿದ್ದಾರೆ. ಎರಡು ವಾರದ ಹಿಂದೆ ಬಂದ ನಡಹಳ್ಳಿ ಅನಂತಜ್ಜನ ಬಹುಮುಖ ಪ್ರತಿಭೆಯ ಲೇಖನವನ್ನು ಓದಿದ ಅವರ [...]





